Bigg Boss Ottಯಲ್ಲಿ ಡಬಲ್ ಎಲಿಮಿನೇಷನ್; ಚೈತ್ರಾ - ಅಕ್ಷತಾ ಔಟ್
ಬಿಗ್ ಬಾಸ್ ಓಟಿಟಿಯಲ್ಲಿ ನಾಲ್ಕನೇ ವಾರ ಡಬಲ್ ಎಲಿಮಿನೇಷನ್ ಆಗಿದೆ. ಇಡೀ ಮನೆಗೆ ಶಾಕ್ ಕೊಟ್ಟಿರುವ ಕಿಚ್ಚ....

ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಸೀಸನ್ 1 ಓಟಿಟಿ ಕನ್ನಡ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ.
ನಾಲ್ಕನೇ ವಾರ ಡಬಲ್ ಎಲಿಮಿನೇಷನ್ (Double Elimination) ಮಾಡುವ ಮೂಲಕ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಬಿಬಿ ತಂಡ ಶಾಕ್ ಕೊಟ್ಟಿದ್ದಾರೆ.
ನಾಲ್ಕನೇ ವಾರ ನಟಿ ಚೈತ್ರಾ ಹಳ್ಳಿಕೆರೆ ಮತ್ತು ಅಕ್ಷತಾ ಕುಕ್ಕಿ ಹೊರ ಬಂದಿದ್ದಾರೆ. ಅತಿ ಕಡಿಮೆ ವೋಟ್ ಪಡೆದುಕೊಂಡು ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿವರು.
ಈ ವಾರ ಚೈತ್ರಾ ಮತ್ತು ಅಕ್ಷತಾ ಅದ್ಭುತವಾಗಿ ಆಟವಾಡಿದ್ದಾರೆ. ಹೀಗಾಗಿ ಎಲಿಮಿನೇಷನ್‌ನ ವೀಕ್ಷಕರು ಒಪ್ಪಿಕೊಂಡಿಲ್ಲ. ಅದರಲ್ಲೂ ಅಕ್ಷತಾ ತಂಡವೊಂದನ್ನು ಲೀಡ್ ಮಾಡಿದ್ದಾರೆ.
ಗಣೇಶ ಹಬ್ಬದ ಪ್ರಯುಕ್ತ ಸ್ಪರ್ಧಿಗಳಿಗೆ ಕುಟುಂಬಸ್ಥರಿಂದ ವಿಶೇಷ ವಿಶ್ ವಿಡಿಯೋ ಬಂದಿತ್ತು. ಈ ವಿಡಿಯೋದಲ್ಲಿ ಚೈತ್ರಾ ಮನೆಯ ಕ್ಯಾಪ್ಟನ್ ಆಗಬೇಕು ಎಂದು ಮಗ ಹಠ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಚೈತ್ರಾ ನಾಲ್ಕು ವಾರವೂ ಹೆಚ್ಚು ಆಲಸ್ಯದಿಂದ ಇರುತ್ತಿದ್ದರು ಎಂದು ಇನ್ನಿತ್ತರ ಸ್ಪರ್ಧಿಗಳು ಕಿಚ್ಚನ ಬಳಿ ಕಂಪ್ಲೇಂಟ್ ಮಾಡಿದ್ದಾರೆ. ಜಯಶ್ರೀ ಹೊರತು ಪಡಿಸಿ ಯಾರ ಜೊತೆನೂ ಕ್ಲೋಸ್ ಆಗಿರಲಿಲ್ಲ.
ಅಕ್ಷತಾ ಮನೆಯಲ್ಲಿ ಆಕ್ಟಿವ್ ಆಗಿದ್ದ ಸ್ಪರ್ಧಿ ಆದರೆ ಟಾಸ್ಕ್‌ಗಳಲ್ಲಿ ಕಡಿಮೆ ವಿನ್ ಆಗುತ್ತಿದ್ದರು. ಹೀಗಾಗಿ ಆಕೆಯ ಕಾಂಪಿಟೇಷನ್ ವೀಕ್ ಆಗಿದೆ ಅನಿಸಿ ವೀಕ್ಷಕರು ವೋಟ್ ಹಾಕಿಲ್ಲದೆ ಇರಬಹುದು.
ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ಜೊತೆ ಅಕ್ಷತಾ ಕುಕ್ಕಿ ತುಂಬಾನೇ ಕ್ಲೋಸ್ ಆಗಿದ್ದರು. ಹೀಗಾಗಿ ಮನೆಯಿಂದ ಹೊರ ನಡೆಯುವಾಗ ಸೋನು ತಮ್ಮ ಬಳಿ ಇದ್ದ ಸ್ಪೆಷಲ್ ಉಂಗುರವನ್ನು ಗಿಫ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.