- Home
- Entertainment
- TV Talk
- ಹೇಳಲೋ, ಬೇಡವೋ ಎಂದು ಅಂಜುತ್ತಲೇ Bigg Boss 12ರ ವಿನ್ನರ್ ಘೋಷಿಸಿದ ಮಲ್ಲಮ್ಮ- ಇವರೇ ಅವರು!
ಹೇಳಲೋ, ಬೇಡವೋ ಎಂದು ಅಂಜುತ್ತಲೇ Bigg Boss 12ರ ವಿನ್ನರ್ ಘೋಷಿಸಿದ ಮಲ್ಲಮ್ಮ- ಇವರೇ ಅವರು!
ಬಿಗ್ಬಾಸ್ ಮನೆಯಿಂದ ಅನಿರೀಕ್ಷಿತವಾಗಿ ಹೊರಬಂದ ಮಲ್ಲಮ್ಮ, ತಮ್ಮ ಎಲಿಮინೇಷನ್‌ಗೆ ಕಾಂಟ್ರವರ್ಸಿ ಇಲ್ಲದಿರುವುದೇ ಕಾರಣ ಎಂಬ ಚರ್ಚೆಯ ನಡುವೆ, ಬಿಗ್ ಬಾಸ್ 12ರ ವಿನ್ನರ್ ಯಾರೆಂದು ಅಳುಕುತ್ತಲೇ ಗಿ ಹೆಸರನ್ನು ಸೂಚಿಸಿದ್ದಾರೆ. ಅವರು ಹೇಳಿದ್ದು ಯಾರ ಹೆಸರನ್ನು?

ಶಾಕ್ ಮೂಡಿಸಿದ್ದ ಮಲ್ಲಮ್ಮ
ಬಿಗ್ಬಾಸ್ (Bigg Boss) ಮಲ್ಲಮ್ಮ ಅಪಾರ ಜನಮೆಚ್ಚುಗೆ ಗಳಿಸಿದರೂ ಅತಿ ಶೀಘ್ರದಲ್ಲಿ ಮನೆಯಿಂದ ಹೊರಕ್ಕೆ ಬಂದು ಶಾಕ್ ಮೂಡಿಸಿದವರು. ಇವರು ಮನೆಯಿಂದ ಹೊರಕ್ಕೆ ಇಷ್ಟು ಬೇಗ ಬಂದಿರುವುದಕ್ಕೆ ವಿಭಿನ್ನ ಕಾರಣಗಳನ್ನು ನೀಡಲಾಗುತ್ತಿದೆ.
ಮಲ್ಲಮ್ಮ ಬೇಗ ಬಂದಿದ್ದೇಕೆ?
ಇವರು ಈ ಮೊದಲೇ ಬಂದಿರುವುದಾಗಿ ಸುದ್ದಿ ಹರಡಿದ್ದರಿಂದ ವೋಟಿಂಗ್ ಕಡಿಮೆಯಾಯಿತು ಎನ್ನಲಾಗುತ್ತಿದೆಯಾದರೂ, ಯಾರೊಂದಿಗೂ ಜಗಳ ಮಾಡದೇ ತಮ್ಮ ಪಾಡಿಗೆ ತಾವು ಇರುವ ಸ್ಪರ್ಧಿಗಳು ಬಿಗ್ಬಾಸ್ಗೆ ಬೇಡ. ಕಚ್ಚಾಡುವ, ಜಗಳವಾಡುವ, ಅಶ್ಲೀಲತೆಯಿಂದಲೇ ಫೇಮಸ್ ಆಗಿ ಟಿಆರ್ಪಿ ಹೆಚ್ಚಿಸುವ ಸ್ಪರ್ಧಿಗಳು ಕೊನೆಯವರೆಗೂ ಇರುತ್ತಾರೆ, ಆದ್ದರಿಂದ ಒಳ್ಳೆಯವರಿಗೆ ಅವಕಾಶಗಳು ಕಡಿಮೆ ಎನ್ನುವ ಆರೋಪಗಳು ಕೂಡ ಇದಾಗಲೇ ಹಲವು ಭಾಷೆಗಳ ಬಿಗ್ಬಾಸ್ನಿಂದ ಬಂದಿದ್ದಿದೆ.
ಬೈದುಕೊಳ್ಳುತ್ತಲೇ ಎಂಜಾಯ್ ಮಾಡುವವರು...
ಅವರನ್ನು ಹೊರಕ್ಕೆ ಬರಬೇಕು, ಇವರು ಹೊರಕ್ಕೆ ಬರಬೇಕು, ಆಕೆ ಅಂಥವಳು, ಇವನು ಇಂಥವನು ಎಂದೆಲ್ಲಾ ಒಂದಿಷ್ಟು ಮಂದಿಯ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ದಿನವೂ ಹಾಕಲಾಗುತ್ತದೆ. ಇದರ ಅರ್ಥ ಅವರನ್ನು ನೋಡುವುದಕ್ಕಾಗಿಯೇ ಹೇಗೆ ಜನರು ಕಾತರದಿಂದ ಕಾಯುತ್ತಾರೆ, ಅವರಿಂದಲೇ ಷೋ ಕಳೆ ಹೆಚ್ಚುತ್ತದೆ ಎನ್ನುವುದು ಇದರ ಅರ್ಥ.
ಕಾಂಟ್ರವರ್ಸಿ ಇಲ್ಲದಿದ್ದರೆ ಜಾಗ ಇಲ್ಲ?
ಅದೇನೇ ಇದ್ದರೂ ಮಲ್ಲಮ್ಮ ಅಂತೂ ಹೊರಕ್ಕೆ ಬಂದಾಗಿದೆ. ಕಾಂಟ್ರವರ್ಸಿ ಮಾಡಿಕೊಳ್ಳದೇ ಇರುವವರಿಗೆ ಬಿಗ್ಬಾಸ್ನಲ್ಲಿ ಹೆಚ್ಚು ದಿನ ಇರುವ ಅವಕಾಶ ಇಲ್ಲ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಇದಾಗಲೇ ಭಾರಿ ಅಸಮಾಧಾನದ ಹೊಗೆಯೂ ಆಡುತ್ತಿದೆ.
ಒಬ್ಬೊಬ್ಬರು ಒಬ್ಬೊಬ್ಬರ ಹೆಸರು
ಹಾಗಿದ್ದರೆ ಬಿಗ್ಬಾಸ್ 12ರ ವಿನ್ನರ್ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಹಲವರು ಇದಾಗಲೇ ಗಿಲ್ಲಿ ನಟನ ಹೆಸರನ್ನು ಹೇಳಿದ್ದಾರೆ. ಕೆಲವರು ಕಾವ್ಯಾ ಶೈವ ಹೆಸರು ಹೇಳುತ್ತಿದ್ದರೆ, ಮತ್ತೆ ಕೆಲವರು ವಿಭಿನ್ನ ಸ್ಪರ್ಧಿಗಳ ಹೆಸರು ಹೇಳುತ್ತಿದ್ದಾರೆ.
ಮಲ್ಲಮ್ಮ ಹೇಳಿದ್ದೇನು?
ಇದೀಗ ಮಲ್ಲಮ್ಮ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ಕೆಲವು ಮಾಧ್ಯಮಗಳಿಗೆ ಈ ಬಗ್ಗೆ ಉತ್ತರಿಸಿದ್ದ ಮಲ್ಲಮ್ಮ,ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ, ಯಾರು ಬೇಕಾದರೂ ಬರಲಿ ಎನ್ನುತ್ತಿದ್ದರು. ಆದರೆ ಇದೀಗ ಓಪನ್ ಅಪ್ ಆಗಿರೋ ಮಲ್ಲಮ್ಮ, ಅಳುಕುತ್ತಲೇ ಹೇಳಲೋ ಬೇಡವೋ ಎನ್ನುತ್ತಲೇ ಗಿಲ್ಲಿ ನಟ (Gilli Nata) ಹೆಸರು ಹೇಳಿದ್ದಾರೆ.
ಮಾತಿಗೆ ವಿರುದ್ಧ ಈ ಗಿಲ್ಲಿ
ಹಾಸ್ಯದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿರುವ ಗಿಲ್ಲಿ ನಟ ಅವರಿಗೆ ಇದಾಗಲೇ ಭಾರಿ ಡಿಮಾಂಡ್ ಕೂಡ ಇದೆ. ಕಾಂಟ್ರವರ್ಸಿ ಇದ್ದರಷ್ಟೇ ಬಿಗ್ಬಾಸ್ನಲ್ಲಿ ಬೆಲೆ ಎನ್ನುವುದಕ್ಕೆ ವಿಭಿನ್ನವಾಗಿ ಹಾಸ್ಯದಿಂದಲೇ ಎಲ್ಲರನ್ನೂ ನಗಿಸುತ್ತಾ ಇರುವ ಸ್ಪರ್ಧಿ ಕೂಡ ಬಿಗ್ಬಾಸ್ಗೆ ಯೋಗ್ಯ ಇರಲು ಸಾಧ್ಯ ಎನ್ನುವುದನ್ನು ಗಿಲ್ಲಿ ನಟ ತೋರಿಸುತ್ತಿದ್ದಾರೆ. ಇದೀಗ ಅವರದ್ದೇ ಹೆಸರನ್ನು ಮಲ್ಲಮ್ಮ ಕೂಡ ಹೇಳಿದ್ದಾರೆ.