ಮುದ್ದು ಮನಸ್ಸುಳ್ಳ ಮುದ್ದಾದ ಸಿರಿ ನೀನು; ಬಿಗ್ ಬಾಸ್ ಸುಂದರಿ ಸಿಂಪಲ್ ಮದುವೆ ಸೀರೆ ವೈರಲ್
ಎಲ್ಲಿ ನೋಡಿದರೂ ಬಿಗ್ ಬಾಸ್ ಸಿರಿ ಮದುವೆ ಫೋಟೋ....ಸೀರೆ ಬಣ್ಣ ಮತ್ತು ಡಿಸೈನ್ ಮೇಲೆ ಹೆಣ್ಣು ಮಕ್ಕಳ ಕಣ್ಣು.....
ಕನ್ನಡ ಕಿರುತೆರೆಯ ಖ್ಯಾತ ನಟಿ ಸಿರಿ ಅಂದ್ರೆ ಪಾಪದ ಹೆಣ್ಣು, ಒಳ್ಳೆ ಹುಡುಗಿ ಅಂತೆಲ್ಲಾ ಇಮೇಜ್ ಕ್ರಿಯೇಟ್ ಮಾಡಿಕೊಟ್ಟಿದ್ದು ಬಿಗ್ ಬಾಸ್ ಸೀಸನ್ 10
ಬಿಗ್ ಬಾಸ್ ನಂತರ ಸಿರಿ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚಾಗಿಬಿಟ್ಟರು. ಸಿರಿ ಮದುವೆ ಯಾವಾಗ ಅನ್ನೋ ಚಿಂತೆಯಲ್ಲಿ ಇದ್ದವರಿಗೆ ಸರ್‌ಪ್ರೈಸ್ ಕೊಟ್ಟುಬಿಟ್ಟರು.
ಕೆಲವು ದಿನಗಳ ಹಿಂದೆ ಮಂಡ್ಯ ಮೂಲದ ಉದ್ಯಮಿ ಹಾಗೂ ನಟ ಪ್ರಭಾಕರ್ ಬೋರೇಗೌಡರನ್ನು ಸರಳವಾಗಿ ಚಿಕ್ಕಬಳ್ಳಾಪುರದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಪಿಸ್ತಾ ಗ್ರೀನ್ ಬಣ್ಣದ ಸೀರೆಗೆ ನೇರಳೆ ಬಣ್ಣದ ಬಾರ್ಡ್ ಇರುವ ಸೀರೆಯನ್ನು ಸಿರಿ ಧರಿಸಿದ್ದರು. ರೇಶ್ಮೆ ಪಂಚೆಯಲ್ಲಿ ಪ್ರಭಾಕರ್ ಮಿಂಚಿದ್ದಾರೆ.
'ಈ ಮುದ್ದು ಮನಸ್ಸುಳ್ಳ ಮುದ್ದಾದ ಸಿರಿ mam ನ ಚೆನ್ನಾಗಿ ನೋಡ್ಕೊಳಿ ಸರ್' ಎಂದು ಪ್ರತಿಯೊಬ್ಬರು ಪ್ರಭಾಕರ್ ಬೋರೆಗೌಡರನ್ನು ಟ್ಯಾಗ್ ಮಾಡಿದ್ದಾರೆ.
ಸೈಲೆಂಟ್ ಆಗಿ ಮದುವೆ ಆಗಿರುವುದಕ್ಕೆ ಸಿರಿ ಅವರನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನು ಹೆಣ್ಣು ಮಕ್ಕಳಿಗೆ ಸಿರಿ ಧರಿಸಿರುವ ರೇಶ್ಮೆ ಸೀರೆ ಡಿಸೈನ್ ಮೇಲೆ ಕಣ್ಣು ಬಿದ್ದಿದೆ.