Bigg Boss : ಸೀನನ್ 6ಕ್ಕೆ ಬಂದಾಗಲೇ ಮದುವೆ ಅಂತಿದ್ರು.. ಈಗ ಸಿಹಿ ಸುದ್ದಿ ಕೊಟ್ಟ ಬೆಡಗಿ
ಮಂಗಳೂರು(ಡಿ. 21) ಕನ್ನಡದ ಬಿಗ್ ಬಾಸ್ (Bigg Boss) ಮತ್ತೆ ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಈ ನಡುವೆ ಬಿಗ್ ಬಾಸ್ ಸುಂದರಿ ಒಬ್ಬರು ಸಿಹಿಸುದ್ದಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 6 ರ ಸಾಫ್ಟ್ ವೇರ್ (Software) ಕ್ಷೇತ್ರದ ರೀಮಾ (Reema) ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ.

ಸಾಫ್ಟವೇರ್ ಹುಡುಗಿ ರೀಮಾ ಸೀಸನ್ 6 ರಲ್ಲಿ ಎರಡನೇ ವಾರಕ್ಕೆ ಲಿಮಿನೇಟ್ ಆಗಿದ್ದರು. ಸಾಮಾನ್ಯ ಜನರಿಗೂ ಬಿಗ್ ಬಾಸ್ ವೇದಿಕೆ ಅವಕಾಶ ಮಾಡಿಕೊಟ್ಟ ಸೀಸನ್ ಅದು.
ಕೃಷಿ ಕ್ಷೇತ್ರದಿಂದ ಬಂದ ಶಶಿ ಬಿಗ್ ಬಾಸ್ ವಿನ್ನರ್ ಆಗಿದ್ದರು. ಐದಾರು ಜನ ಸಾಮಾನ್ಯರಿಗೂ ಆ ಸೀನನ್ ನಲ್ಲಿ ಮನೆ ಪ್ರವೇಶ ಮಾಡುವ ಅವಕಾಶ ಸಿಕ್ಕಿತ್ತು.
ಕಿಚ್ಚ ಸುದೀಪ್ ಕನ್ನಡದಲ್ಲಿ ನಡೆಸಿಕೊಡುವ ಬಿಗ್ ಬಾಸ್ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ. ಕೊನೆಯ ಸೀಸನ್ ವಿನ್ನರ್ ಆಗಿ ಹಾಸ್ಯ ಕಲಾವಿದ ಮಂಜು ಪಾವಗಡ ಹೊರಹೊಮ್ಮಿದ್ದರು. ಮನೆ ಪ್ರವೇಶ ಮಾಡುವ ಪ್ರತಿಯೊಬ್ಬರನ್ನು ಕಿಚ್ಚ ಸುದೀಪ್ ಅವರೇ ಬರಮಾಡಿಕೊಳ್ಳುತ್ತಾರೆ.
ರೀಮಾ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದು ಎಂಗೇಜ್ ಮೆಂಟ್ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ವಿಚಾರ ತಿಳಿಸಿದ್ದಾರೆ.
ಉದ್ಯಮಿ, ಬೈಕರ್ ಜತೆ ಹೊಸ ಬಾಳಿನ ಆರಂಭ ಎಂಬುದನ್ನು ತಿಳಿಸಿದ್ದು ಆಕರ್ಷಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹಿತೈಷಿಗಳು ಮತ್ತು ಅಭಿಮಾನಿಗಳು ರೀಮಾ ಅವರಿಗೆ ಅಭಿನಂದನೆ ತಿಳಿಸಿದ್ದು ಶುಭ ಹಾರೈಸಿದ್ದಾರೆ. ರೀಮಾ ದಕ್ಷಿಣ ಕನ್ನಡದ ಹುಡುಗಿ.
ರೀಮಾ. ಮೂಲತಃ ಮಂಗಳೂರು ಜಿಲ್ಲೆಯ ಪುತ್ತೂರಿನ ಹುಡುಗಿ. ಬಿಗ್ ಬಾಸ್ ಪ್ರವೇಶ ಮಾಡುವಾಗ ಬೆಂಗಳೂರಿನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. x
Bigg Boss
ಮನೆಯಲ್ಲಿ ಮದುವೆ ಆಗು ಎನ್ನುತ್ತಿದ್ದಾರೆ. ಆದ್ರೆ, ನಾನು ಬಿಗ್ ಬಾಸ್ ಗೆ ಬಂದಿದ್ದೇನೆ. ಇಲ್ಲಿ ಯಾರ ಮೇಲೆ ಆದರೂ ಕ್ರಶ್ ಆದ್ರೆ, ಅವರು ನಿಜವಾಗಲೂ ಇಷ್ಟಪಡ್ತಿದ್ರೆ ಸ್ವಲ್ಪ ಯೋಚನೆ ಮಾಡ್ತೀನಿ. ಹೊರಗಡೆ ನನಗೆ ದಿನಕ್ಕೆ ಮೂರ್ನಾಲ್ಕು ಕ್ರಶ್ ಆಗುತ್ತದೆ ಎಂದು ರೀಮಾ ಬಿಗ್ ಬಾಸ್ ಪ್ರವೇಶದ ವೇಳೆ ನೀಡಿದ್ದ ಹೇಳಿಕೆ ಇನ್ನು ಹಲವರ ನೆನಪಿನಲ್ಲಿ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.