BBK 12: Suraj Singhನ ಇನ್ನೊಂದು ಅವತಾರ ತೋರಿಸುವಂತೆ ಮಾಡಿದ Risha Gowdaರ ಆ ಮಾತು!
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ರಿಷಾ ಗೌಡ ಅವರು ಬಹುತೇಕ ಎಲ್ಲ ಸ್ಪರ್ಧಿಗಳ ಜೊತೆ ಜಗಳ ಆಡಿದ್ದಾರೆ. ಜಗಳ ಆಡಿದರೆ ಮಾತ್ರ ನಾನು ಕಾಣಿಸಿಕೊಳ್ಳೋದು ಅಂತ ರಿಷಾ ತಲೆಯಲ್ಲಿದೆ ಎನ್ನೋದನ್ನು ಕಾವ್ಯ ಶೈವ, ರಘು, ಸ್ಪಂದನಾ ಸೋಮಣ್ಣ ಹೇಳಿದರೂ ಕೂಡ ಅವರು ಕೇಳುತ್ತಿಲ್ಲ.

ಮನೆಯವರ ಪತ್ರ ಹರಿದು ಹಾಕಿದ್ರು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮನೆಯವರಿಂದ ಪತ್ರ ಬಂದಿತ್ತು. ಆ ಪತ್ರಗಳಲ್ಲಿ ಇಬ್ಬರ ಪತ್ರವನ್ನು ಹರಿದು ಹಾಕಲು ರಿಷಾ ಗೌಡಗೆ ಅವಕಾಶ ಸಿಕ್ಕಿತ್ತು. ಆಗ ರಿಷಾ ಅವರು ಸೂರಜ್, ಸ್ಪಂದನಾ ಸೋಮಣ್ಣ ಮನೆಯವರ ಪತ್ರ ಹರಿದುಹಾಕಿದ್ದರು. ಅಲ್ಲಿಂದ ಜಗಳ ಶುರುವಾಗಿದೆ.
ಮಳ್ಳನನ್ನು ನಂಬಲ್ಲ
ರಿಷಾ ಅವರು ಸೂರಜ್ ಪತ್ರವನ್ನು ಹರಿದು ಹಾಕಿದ್ದರು. ಅದಕ್ಕೂ ಮುನ್ನ ರಿಷಾಗೆ ಸೂರಜ್ ಸರಿಯಾಗಿ ಕೌಂಟರ್ ಕೊಟ್ಟು, ಮಸಿ ಬಳಿದಿದ್ದರು. ಈ ಜಗಳ ಮುಂದುವರೆಯಿತು. “ನಾನು ಏನು ಮಾಡಿದೆ ಅಂತ ನನ್ನ ಪತ್ರ ಹರಿದು ಹಾಕಿದೆ?” ಎಂದು ಸೂರಜ್ ಕೇಳಿದಾಗ ರಿಷಾ ಅವರು, “ಕಳ್ಳನನ್ನು ನಂಬಿದ್ರೂ ಮಳ್ಳನನ್ನು ನಂಬೋದಿಲ್ಲ” ಎಂದು ಹೇಳಿದ್ದಾರೆ.
ಮಳ್ಳ ಅಂತ ಯಾಕೆ ಹೇಳಿದೆ?
ನನಗೆ ಮಳ್ಳ ಎನ್ನೊ ಪಟ್ಟ ಯಾಕೆ ಕೊಟ್ಟೆ ಎಂದು ಸೂರಜ್ ಗೌಡ ಅವರು ಈಗ ರಿಷಾರನ್ನು ಪ್ರಶ್ನೆ ಮಾಡಿದ್ದಾರೆ. ಮತ್ತೆ ಇದೇ ವಿಷಯಕ್ಕೆ ಮನೆಯಲ್ಲಿ ಜಗಳ ಶುರುವಾಗಿದೆ. ಹಾಗಾದರೆ ಏನಾಯ್ತು?
ನಾನು ನಿನಗೆ ಏನು ಮಾಡಿದೀನಿ?
“ಮಳ್ಳ ಅಂತ ಹೇಳೋಕೆ ನಾನು ನಿನಗೆ ಏನು ಮಾಡಿದ್ದೆ?” ಎಂದು ಸೂರಜ್ ಪ್ರಶ್ನೆ ಮಾಡಿದ್ದಾರೆ. ಆಗ ರಿಷಾ, “ನನಗೆ ನಿನ್ನ ನಂಬೋಕೆ ಆಗಲ್ಲ ಕಣೋ” ಎಂದು ಹೇಳಿದ್ದಾರೆ. “ಇಲ್ಲಿ ನೋಡಿಕೊಂಡು ಮಾತಾಡು” ಎಂದು ಸೂರಜ್ ಹೇಳಿದಾಗ, ರಿಷಾ ಅವರು, “ಎಲ್ಲಿ ನೋಡ್ಕೊಂಡು ಬೇಕಿದ್ರೂ ಮಾಡ್ತೀನಿ” ಎಂದು ಹೇಳಿದ್ದಾರೆ.
ನಿನ್ನ ಮನೆಯಲ್ಲಿ ಇದೆಲ್ಲ ಇಟ್ಕೋ!
ಆಮೇಲೆ “ಇದೆಲ್ಲ ನಿನ್ನ ಮನೆಯಲ್ಲಿ ಇಟ್ಟುಕೋ, ನಿನ್ನ ಮಾತಿನ ಮೇಲೆ ನಿನಗೆ ಕಂಟ್ರೋಲ್ ಇಲ್ಲ, ಕಳ್ಳನ್ನ ನಂಬಿದ್ರೂ ಸುಳ್ಳಿನ ನಂಬಬಾರದು. ಡೋರ್ ಹತ್ರ ಕಿರುಚು” ಎಂದು ಸೂರಜ್ ಹೇಳಿದ್ದಾರೆ. ಇವರಿಬ್ಬರ ಕಿತ್ತಾಟ ಮುಂದುವರೆದಿದೆ.