- Home
- Entertainment
- TV Talk
- ಅತ್ತ ಅವ್ರು ಕಣ್ಣೀರು ಹಾಕ್ತಿದ್ರು; ಇದು Bigg Boss ಕೊಟ್ಟ ಇನ್‌ಸ್ಟಾ ಕರ್ಮ ಎಂದ್ರು Ashwini Gowda, ರಿಷಾ
ಅತ್ತ ಅವ್ರು ಕಣ್ಣೀರು ಹಾಕ್ತಿದ್ರು; ಇದು Bigg Boss ಕೊಟ್ಟ ಇನ್‌ಸ್ಟಾ ಕರ್ಮ ಎಂದ್ರು Ashwini Gowda, ರಿಷಾ
BBK 12 Updates: ಸೂರಜ್ ಸಿಂಗ್ ಹಾಗೂ ಸ್ಪಂದನಾ ಸೋಮಣ್ಣ ಮನೆಯವರ ಪತ್ರ ಬಂದಿತ್ತು. ಬಿಗ್ ಬಾಸ್ ರಿಷಾಗೆ ಒಂದು ಅವಕಾಶ ಕೊಟ್ಟಿದ್ದರು. ಇವರಿಬ್ಬರ ಪತ್ರವನ್ನು ಹರಿದು ಹಾಕಿ, ತಮ್ಮ ಮನೆಯಿಂದ ಬಂದ ಪತ್ರವನ್ನು ಓದಬಹುದು, ಅಥವಾ ಇವರಿಬ್ಬರಿಗೆ ಪತ್ರ ಕೊಟ್ಟು, ತಮ್ಮ ಮನೆಯ ಪತ್ರವನ್ನು ಹರಿದು ಹಾಕಬಹುದು.

ಆ ಪತ್ರಗಳನ್ನು ಹರಿದರು
ಸೂರಜ್ ಸಿಂಗ್ ಅವರು ಟಾಸ್ಕ್‌ವೊಂದರಲ್ಲಿ ರಿಷಾ ಗೌಡಗೆ ಸರಿಯಾಗಿ ಕೌಂಟರ್ ಕೊಟ್ಟು, ಅವರ ಮುಖಕ್ಕೆ ಮಸಿ ಬಳಿದಿದ್ದರು. ಈಗ ರಿಷಾ ಇದರ ರಿವೆಂಜ್ ತೀರಿಸಿಕೊಂಡಿದ್ದಾರೆ. ಸ್ಪಂದನಾ ಸೋಮಣ್ಣ ಹಾಗೂ ರಿಷಾ ಗೌಡ ಮಧ್ಯೆ ಕೂಡ ಶೀತಲ ಸಮರ ಇತ್ತು. ಇದಕ್ಕಾಗಿಯೇ ರಿಷಾ ಅವರು ಸ್ಪಂದನಾ ಮನೆಯ ಪತ್ರವನ್ನು ಹರಿದು ಹಾಕಿದರು.
ಜನರು ಏನು ಹೇಳ್ತಿದ್ದಾರೋ ಗೊತ್ತಿಲ್ಲ
“ರಿಷಾ ಗೌಡ ಅವರು ನನಗೆ ಅನಿಸಿದ ಹಾಗೆ ನಾನು ಇಲ್ಲಿ ನಿತ್ಯವೂ ಜೀವಿಸುತ್ತಿದ್ದೇನೆ. ಜನರು ಹೊರಗಡೆ ಇಷ್ಟಪಡ್ತಿದ್ದಾರೋ, ಭಯಪಡ್ತಿದ್ದಾರೋ ಗೊತ್ತಿಲ್ಲ. ನಾನು ಹೇಗಿದೀನೋ ಅದಕ್ಕೆ ನನಗೆ ತೃಪ್ತಿಯಾಗಿದೆ, ಬೇರೆಯವರಿಗೆ ಡ್ರಾಮಾ ಅಂತ ಅನಿಸಿರಬಹುದು. ನಾನು ಹೊರಗಡೆ ಹೇಗಿದ್ದೀನೋ ಹಾಗೆ ಇಲ್ಲಿಯೂ ಇದ್ದೇನೆ” ಎಂದು ಹೇಳಿದ್ದಾರೆ.
ಉದುರಿ ಹೋಗೋ ಕಾಳು ಉದುರಿಸಬೇಕು
ಸ್ಪಂದನಾ ಸೋಮಣ್ಣ ಈಗ ನಾಟಕ ಶುರು ಮಾಡುತ್ತಿದ್ದಾರೆ, ಜಾಹ್ನವಿಗೆ ಮಗು ಇದೆ, ರಘು ಗಾಳಿ ಬಂದಿದ್ದ ಕಡೆ ತೂರುತ್ತಾರೆ, ಗಿಲ್ಲಿಗೆ ಇದೆಲ್ಲ ಮ್ಯಾಟರ್ ಆಗೋದಿಲ್ಲ, ಸಮಯ ನೋಡಿಕೊಂಡು ಹೊಡೆಯಬೇಕು, ಉದುರಿ ಹೋಗೋ ಕಾಳು ಉದುರಿಸಬೇಕು” ಎಂದು ರಿಷಾ ಗೌಡ ಹೇಳಿದ್ದಾರೆ.
ಯಾಕೆ ಕ್ಷಮೆ ಕೇಳಲಿ?
“ಕಾವ್ಯ ಶೈವ ಬಂದು ಸ್ಪಂದನಾ ಸೋಮಣ್ಣ, ಸೂರಜ್‌ಗೂ ಕ್ಷಮೆ ಕೇಳು ಅಂದಳು. ನಾನು ಯಾಕೆ ಕ್ಷಮೆ ಕೇಳಲಿ?” ಎಂದು ರಿಷಾ ಗೌಡ ಅವರು ಹೇಳಿದ್ದಾರೆ.
ಇನ್‌ಸ್ಟಂಟ್ ಕರ್ಮ ಎಂದ್ರು
“ಹೆಂಗೆ ಕೊಟ್ರು ಅಲ್ವಾ ಬಿಗ್ ಬಾಸ್?” ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಆಗ ರಿಷಾ ಗೌಡ ಅವರು ಇನ್‌ಸ್ಟಂಟ್ ಕರ್ಮ ಎಂದರೆ, ಅಶ್ವಿನಿ ಗೌಡ ಅವರು, “ಇದು ಇನ್‌ಸ್ಟಾ ಕರ್ಮ” ಎಂದು ಹೇಳಿದ್ದಾರೆ.
ಇನ್‌ಸ್ಟಾ ಕರ್ಮ ಎಂದ್ರು
ಆ ಕಡೆ ಸ್ಪಂದನಾ ಸೋಮಣ್ಣ, ಸೂರಜ್ ಸಿಂಗ್ ಅವರು ಮನೆಯ ಪತ್ರ ಬಂದರೂ ಕೂಡ ಓದಲು ಸಿಗಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದರೆ, ಇತ್ತ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ ಅವರು ಇನ್‌ಸ್ಟಾ ಕರ್ಮ ಎಂದು ಮಾತಾಡುತ್ತಿರೋದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.