- Home
- Entertainment
- TV Talk
- BBK 12: ನಾನ್ ಯಾರ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಬಂದ್ರೆ ಬಿಡಲ್ಲ: ಫಸ್ಟ್ ಟೈಮ್ ರೆಬೆಲ್ ಆದ ಮಲ್ಲಮ್ಮ
BBK 12: ನಾನ್ ಯಾರ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಬಂದ್ರೆ ಬಿಡಲ್ಲ: ಫಸ್ಟ್ ಟೈಮ್ ರೆಬೆಲ್ ಆದ ಮಲ್ಲಮ್ಮ
Bigg Boss Kannada Season 12: ನನಗೆ ಮಾತಾಡೋಕೆ ಬರಲ್ಲ, ನಾವು ಹಳ್ಳಿಯಿಂದ ಬಂದವರು, ಬಿಗ್ ಬಾಸ್ ಮನೆ ಆಟ ಗೊತ್ತಿಲ್ಲ ಎಂದು ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿದ್ದ ಮಲ್ಲಮ್ಮ ಈಗ ರೆಬೆಲ್ ಆಗಿದ್ದಾರೆ. ಮಲ್ಲಮ್ಮ ‘ನಾನ್ ಯಾರ ಸುದ್ದಿಗೋ ಹೋಗಲ್ಲ, ನನ್ನ ಸುದ್ದಿಗೆ ಬಂದ್ರೆ ಬಿಡಲ್ಲʼ ಎಂದಿದ್ದಾರೆ.

ರಕ್ಷಿತಾ ಶೆಟ್ಟಿ, ಮಂಜುಭಾಷಿಣಿ ಜಗಳ
ಊಟದ ವಿಚಾರಕ್ಕೆ ಮಂಜುಭಾಷಿಣಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಜಗಳ ಆಗಿದೆ. ದೊಡ್ಡಮಟ್ಟದಲ್ಲಿ ಇವರು ಗಲಾಟೆ ಮಾಡಿಕೊಂಡಿದ್ದಾರೆ. ಕಾಕ್ರೋಚ್ ಸುಧಿ ಇದಕ್ಕೆ ಮೂಲ ಕಾರಣ. ರಕ್ಷಿತಾ ಶೆಟ್ಟಿ ಊಟಕ್ಕೆ ಕಾಕ್ರೋಚ್ ಸುಧಿ ಅವರು ನೀರು ಹಾಕಿದರು, ಹೀಗಾಗಿ ಹನ್ನೆರಡು ಜನರಿಗೋಸ್ಕರ ಮಾಡಿದ್ದ ಚಿಕನ್‌ಗೆ ರಕ್ಷಿತಾ ಶೆಟ್ಟಿ ಅವರು ಗ್ರೀನ್ ಟೀ ಹಾಕಿದ್ದಾರೆ. ಇದೇ ವಿಚಾರಕ್ಕೆ ಜಗಳ ಶುರುವಾಗಿದೆ. ಆಮೇಲೆ ರಕ್ಷಿತಾ ಶೆಟ್ಟಿ ಅವರು, ಅಶ್ವಿನಿ ಗೌಡ ಬಳಿ ಈ ವಿಷಯವನ್ನು ಮಾತನಾಡಿದ್ದಾರೆ. ಅದನ್ನು ಮಲ್ಲಮ್ಮ ಕೇಳಿಸಿಕೊಂಡಿದ್ದಾರೆ.
ಮಂಜಮ್ಮ ವಿರುದ್ಧ ಮಲ್ಲಮ್ಮಗೆ ಸಿಟ್ಟು
ಮಲ್ಲಮ್ಮ ಅವರು, “ಮಂಜುಭಾಷಿಣಿಗೆ ಆಟಕ್ಕೆ ಹಾಕಬೇಕು, ಬರೀ ಪಿಟ್ಟಿಂಗ್ ಇಡೋದು ಬುದ್ಧಿ ಆಗಿದೆ, ಬೇರೆ ಏನೂ ಕೆಲಸ ಮಾಡಲ್ಲ, ಅದರಿಂದ ಎಲ್ಲರೂ ಹಾಳಾಗಿದ್ದಾರೆ” ಎಂದು ಅಶ್ವಿನಿ ಗೌಡ ಜೊತೆ ಮಾತನಾಡಿದ್ದಾರೆ.
ಕಾವ್ಯ ಶೈವ ಬೆವರಿಳಿಸಿದ ಮಲ್ಲಮ್ಮ
ಎಲ್ಲರ ಮುಂದೆ ಕೂತಿದ್ದಾಗ ವಾಶ್ ರೂಮ್‌ನಲ್ಲಿ ಫ್ಲಶ್ ಮಾಡಬೇಕು ಎಂದು ಕಾವ್ಯ ಶೈವ ಅವರು ಹೇಳಿದ್ದಾರೆ. ಆಗ ಮಲ್ಲಮ್ಮ ಅವರು, “ನನ್ನ ಬಗ್ಗೆ ನೀನು ಮಾತನಾಡುತ್ತಿದ್ದೀಯಾ ಎಂದು ಹೇಳುತ್ತಿದ್ಯಾ ಅಂತ ನನಗೆ ಗೊತ್ತು. ನೀನು ಒಂದು ಅಂತಸ್ತು ನೋಡಿ ಬಂದಿದ್ದೀಯಾ, ನಾನು ಐದು ಅಂತಸ್ತನ್ನು ನೋಡಿ ಬಂದಿದ್ದೀಯಾ. ನಾನು ಹಳ್ಳಿಯಿಂದ ಬಂದಿದ್ದೀನಿ ಅಂತ ಹೇಳ್ತೀನಿ” ಎಂದು ಕೂಗಾಡಿದ್ದಾರೆ.
ನಾನ್ ಮಾತ್ರ ಹಾಗಲ್ಲ
“ನಾನು ಇಲ್ಲಿಗೆ ಬಂದು ಐದು ವರ್ಷವಾಯ್ತು. ಎಲ್ಲರನ್ನು ಒಂದು ಥರ ನೋಡ್ತೀಯಾ, ನನ್ನನ್ನು ಮಾತ್ರ ಬೇರೆ ಥರ ನೋಡುತ್ತೀಯಾ, ಎಲ್ಲರೂ ಐಟಮ್‌ನ್ನು ಅಲ್ಲೇ ಬಿಟ್ಟು ಬರುತ್ತೀರಾ, ಆದರೆ ನಾನು ಮಾತ್ರ ಎಲ್ಲವನ್ನೂ ತಗೊಂಡು ಬರ್ತೀನಿ” ಎಂದು ಹೇಳಿದ್ದಾರೆ.
ಕಾವ್ಯ ಶೈವ ಸಮರ್ಥನೆ
“ನಾಮಿನೇಶನ್ ಮಾಡುವಾಗ ಹಳ್ಳಿಯವರು ಅಂತ ಹೇಳ್ತಾರೆ, ಹೀಗಾಗಿ ನಾನು ಇದನ್ನು ಅವರ ಬಗ್ಗೆ ಹೇಳಿದೀನಿ ಅಂತ ತಲೆಯಲ್ಲಿ ಇರಬಹುದು. ನಾವು ಬಾತ್‌ರೂಮ್ ಏರಿಯಾ ನೋಡಬೇಕು, ಕೆಲವರಿಗಂತೂ ನಾನು ವೈಯಕ್ತಿಕವಾಗಿ ಹೋಗಿ ಹೇಳಿದೀನಿ” ಎಂದು ಕಾವ್ಯ ಶೈವ ಸಮರ್ಥನೆ ನೀಡಿದ್ದರು. ಆದರೂ ಕೂಡ ಮಲಮ್ಮ ಸುಮ್ಮನಾಗಲಿಲ್ಲ.
ನನ್ನ ತಂಟೆಗೆ ಬಂದ್ರೆ ಅಷ್ಟೇ
“ಚಪಾತಿ ಮಾಡೋ ಜಾಗವನ್ನು ತೊಳೆದಿಲ್ಲ ಅಂತ ಹೇಳ್ತಾರೆ, ನಾನು ನೆಲದ ಮೇಲೆ ಚಪಾತಿ ಮಾಡಿದ್ನಾ? ನನಗೆ ಅಷ್ಟು ಗೊತ್ತಾಗಿಲ್ವಾ? ನಾನು ಯಾರ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಬಂದ್ರೆ ಬಿಡೋದಿಲ್ಲ” ಎಂದು ಮಲ್ಲಮ್ಮ ಹೇಳಿದ್ದಾರೆ.
ದಮ್ಮಯ್ಯ ಬಿಡು ಎಂದ ಗಿಲ್ಲಿ ನಟ
ಅಶ್ವಿನಿ ಹಾಗೂ ಸ್ಪಂದನಾ ಸೋಮಣ್ಣ ಕೂಡ ಕಾವ್ಯ ಅವರನ್ನು ಸಮರ್ಥನೆ ಮಾಡಿಕೊಂಡು ಮಾತನಾಡಿದರು. ಅದು ಮಲ್ಲಮ್ಮಗೆ ಸಿಟ್ಟು ತರಿಸಿತು, “ಅವರನ್ನು ಸಪೋರ್ಟ್ ಮಾಡಿಕೊಂಡು ಮಾತನಾಡಬೇಡಿ” ಎಂದಿದ್ದಾರೆ. ಆಗ ಗಿಲ್ಲಿ ನಟ ಅವರು, “ಕಾಲಿಗೆ ಬೀಳ್ತೀನಿ, ದಮ್ಮಯ್ಯ, ಮಲ್ಲು ಬಿಟ್ಟು ಬಿಡಿ” ಎಂದು ಹೇಳಿದ್ದಾರೆ.