Nivedita Gowda ಬ್ಲರ್ ಫೋಟೋ ಮೇಲೆ ಎಲ್ಲರ ಕಣ್ಣು, ಸಮುದ್ರ ಕಿನಾರೆಯಲ್ಲಿ ಹಾಟ್ ಬ್ಯೂಟಿ
Nivedita gowda blurry photo: ರಿಯಾಲಿಟಿ ಶೋ ಬೆಡಗಿ, ಬಿಗ್ ಮಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಸದ್ಯ ಫಾರೆನ್ ಟ್ರಿಪ್ ನಲ್ಲಿದ್ದಾರೆ. ಸಮುದ್ರದ ಅಲೆಯಲ್ಲಿ ಈಜುತ್ತಿರುವ ಬೆಡಗಿಯ ಫೋಟೋ ಒಂದು ಎಲ್ಲರ ಕುತೂಹಲ ಕೆರಳಿಸಿದೆ.

ಹಾಟ್ ಬ್ಯೂಟಿ
ರಿಯಾಲಿಟಿ ಶೋ ಹಾಟ್ ಬ್ಯೂಟಿ ನಿವೇದಿತಾ ಗೌಡ ಸದ್ಯ ಯಾವುದೇ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಿಲ್ಲ. ಕಳೆದ ಒಂದು ತಿಂಗಳಿಂದ ಫ್ಲೋರಿಡಾದಲ್ಲಿರುವ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
ಕಡಲ ತೀರದಲ್ಲಿ ಬಿಗ್ ಬಾಸ್ ಬೆಡಗಿ
ನಿನ್ನೆಯಷ್ಟೆ ನಿವೇದಿತಾ, ಕಡಲ ತೀರದಲ್ಲಿ ಒಂಟಿಯಾಗಿ ಕುಳಿತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಈಗ ಸಮುದ್ರದ ನೀರಿನಲ್ಲಿ ಮಿಂದೇಳುವ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಸಮುದ್ರ ಮಟ್ಟದ ಶಾಂತಿ
ನಿವೇದಿತಾ ಗೌಡ, ಇನ್ಸ್ಟಾಗ್ರಾಮ್ ನಲ್ಲಿ ಒಂದಿಷ್ಟು ಫೋಟೋ, ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಮುದ್ರ ಮಟ್ಟದ ಶಾಂತಿ ಅಂತ ಶೀರ್ಷಿಕೆ ಹಾಕಿದ್ದಾರೆ.
ಬಿಕನಿಯಲ್ಲಿ ನಿವೇದಿತಾ
ಗುಲಾಬಿ ಬಣ್ಣದ ಬಿಕನಿ ಧರಿಸಿ ಸಮುದ್ರದ ಅಲೆಗಳ ಜೊತೆ ನಿವೇದಿತಾ ಗೌಡ ಆಟವಾಡ್ತಿದ್ದಾರೆ. ಅಲೆಗಳಿಗೆ ಸವಾಲೊಡ್ಡುವಂತೆ ಸ್ವಿಮ್ ಮಾಡ್ತಿದ್ದಾರೆ. ಹಕ್ಕಿಯಂತೆ ರೆಕ್ಕೆ ಬೀಸ್ತಾ ನಿವೇದಿತಾ ಗೌಡ, ಸಮುದ್ರದ ನೀರಿನ ಜೊತೆ ಲೈಫ್ ಎಂಜಾಯ್ ಮಾಡ್ತಿದ್ದಾರೆ.
ಬ್ಲರ್ ಫೋಟೋ
ನಿವೇದಿತಾ ಗೌಡ ತಮ್ಮ ಜೊತೆ ಒಂದಿಷ್ಟು ಸಮುದ್ರದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದ್ರಲ್ಲಿ ಹಕ್ಕಿ ಇನ್ನೊಂದ್ರಲ್ಲಿ ಮುಳುಗುವ ಸೂರ್ಯನಿದ್ರೆ ಇನ್ನೊಂದರಲ್ಲಿ ನಿವೇದಿತಾ ಗೌಡ ಬ್ಲರ್ ಫೋಟೋ ಇದೆ. ಇದು ಸೋಶಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ.
ವೀಕ್ಷಕರ ಕುತೂಹಲ
ನಿವೇದಿತಾ ಗೌಡ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ. ನಿವೇದಿತಾ ಗೌಡ ಬ್ಲರ್ ಫೋಟೋ ಮೇಲೆಯೇ ಎಲ್ಲರ ಕಣ್ಣಿದೆ. ನಿವೇದಿತಾ ಗೌಡ ಬಿಕನಿ ಧರಿಸಿದ್ರೂ ಎಲ್ಲ ಫೋಟೋ ಸಮುದ್ರದೊಳಗಿದೆ. ಈ ಫೋಟೋದಲ್ಲಿ ಅವರು ಸಮುದ್ರದ ಕಿನಾರೆಯಲ್ಲಿ ಫೋಸ್ ನೀಡಿದಂತಿದೆ. ಆ ಫೋಟೋದಲ್ಲಿ ಏನಿದೆ, ಕ್ಲಿಯರ್ ಫೋಟೋ ಹಾಕಿ ಎನ್ನುವ ಕಮೆಂಟ್ಸ್ ಕೂಡ ಬಂದಿದೆ.
ಫ್ಲೋರಿಡಾದಲ್ಲಿ ಬೆಡಗಿ
ನಿವೇದಿತಾ ಗೌಡ ಸದ್ಯ ಫ್ಲೋರಿಡಾದಲ್ಲಿದ್ದಾರೆ. ನಿವೇದಿತಾ ರಜೆ ಮೇಲೆ ವಿದೇಶಕ್ಕೆ ಹೋಗಿದ್ದಾರಾ ಇಲ್ಲ ಅಲ್ಲೇನಾದ್ರೂ ಶೂಟ್, ಕೆಲ್ಸ ನಡಿತಿದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ. ಕಳೆದ ಒಂದು ತಿಂಗಳಿಂದ ಫ್ಲೋರಿಡಾದಲ್ಲಿರುವ ನಿವೇದಿತಾ ಮಾತ್ರ ಲೈಫ್ ಎಂಜಾಯ್ ಮಾಡ್ತಿದ್ದಾರೆ.
ಏನು ಮಾಡ್ತಿದ್ದಾರೆ ನಿವೇದಿತಾ
ಕ್ರಿಸ್ ಮಸ್, ನ್ಯೂ ಇಯರ್ ಎಲ್ಲನ್ನೂ ನಿವೇದಿತಾ ಗೌಡ ಫ್ಲೋರಿಡಾದಲ್ಲಿಯೇ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹೊಸ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ. ನಿವೇದಿತಾ ಗೌಡ ಹಿಂದೆಯೇ ಯೂಟ್ಯೂಬ್ ಚಾನೆಲ್ ನಡೆಸ್ತಿದ್ದರು. ಫಾಲೋವರ್ಸ್ ಸಂಖ್ಯೆಯೂ ಸಿಕ್ಕಾಪಟ್ಟೆ ಇತ್ತು. ಆದ್ರೆ ಅದನ್ನು ಡಿಲಿಟ್ ಮಾಡಿರುವ ನಿವೇದಿತಾ ಗೌಡ ಈಗ ಹೊಸದನ್ನು ಶುರು ಮಾಡಿದ್ದಾರೆ. ನಿವೇದಿತಾ ಗೌಡ ಅದ್ರಲ್ಲಿ ಅಡುಗೆ, ಬ್ಯೂಟಿ ಸೇರಿದಂತೆ ಸಾಕಷ್ಟು ವಿಷ್ಯ ಹಂಚಿಕೊಳ್ಳೋದಾಗಿ ಹೇಳಿದ್ದಾರೆ.
ಹೊಸ ಯೂಟ್ಯೂಬ್
ನಿವೇದಿತಾ ಗೌಡ ನಡೆಸುತ್ತಿದ್ದ ಹಳೆ ಯೂಟ್ಯೂಬ್ ಅವರಿಗೆ ಇಷ್ಟ ಆಗಿರಲಿಲ್ಲವಂತೆ. ಅದನ್ನು ಬೇರೆಯವರು ನೋಡಿಕೊಳ್ತಿದ್ದರು. ಆದ್ರೀಗ ಅವರೇ ಯೂಟ್ಯೂಬ್ ಜವಾಬ್ದಾರಿ ಹೊರೊದಾಗಿ ಹೇಳಿದ್ದಾರೆ. ನಿವೇದಿತಾ ಯೂಟ್ಯೂಬ್ ನಲ್ಲಿ ಏನೆಲ್ಲ ಪೋಸ್ಟ್ ಆಗುತ್ತೆ ಎಂಬುದನ್ನು ನೋಡುವ ಆಸೆ ವೀಕ್ಷಕರಿಗಿದೆ.
ನಿವೇದಿತಾ ಕಾಂಟ್ರವರ್ಸಿ
ಬಿಗ್ ಬಾಸ್ ಮೂಲಕ ಪ್ರಸಿದ್ಧಿ ಪಡೆದ ನಿವೇದಿತಾ ಗೌಡ, ಚಂದನ್ ಶೆಟ್ಟಿ ಮದುವೆಯಾಗಿ ಹೆಚ್ಚು ಸುದ್ದಿಗೆ ಬಂದಿದ್ದರು. ನಂತ್ರ ರಿಯಾಲಿಟಿ ಶೋನಲ್ಲಿ ಮಿಂಚಿದ್ದರು. ಆದ್ರೆ ಚಂದನ್- ನಿವೇದಿತಾ ಮದುವೆ ಹೆಚ್ಚು ದಿನ ನಡೆಯಲಿಲ್ಲ. ವಿಚ್ಛೇದನ ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು. ಆ ನಂತ್ರ ನಿವೇದಿತಾ ಇನ್ಸ್ಟಾದಲ್ಲಿ ಹಾಕ್ತಿದ್ದ ಹಾಟ್ ವಿಡಿಯೋಗಳು ಎಲ್ಲರ ಕಣ್ಣು ಕೆಂಪು ಮಾಡಿದ್ವು. ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಏನೇ ಕಮೆಂಟ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ, ತಮ್ಮ ಕೆಲ್ಸ ಮುಂದುವರೆಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

