ಹುಟ್ಟುಹಬ್ಬದಂದು ಐಷಾರಾಮಿ ಕಾರು ಖರೀದಿಸಿದ ನಮ್ರತಾ ಗೌಡ: ಕಾರ್‌ನ ವಿಶೇಷತೆ ಏನು, ಬೆಲೆ ಎಷ್ಟು ಗೊತ್ತಾ?
ಕಿರುತೆರೆ ನಟಿ ನಮ್ರತಾ ಗೌಡ ಹುಟ್ಟು ಹಬ್ಬದಂದು, ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ನಟಿ ತಮ್ಮ ಹುಟ್ಟುಹಬ್ಬದ ದಿನದಂದು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಾಗಿಣಿ 2, ಬಿಗ್ ಬಾಸ್ ಸೀಸನ್ 10 ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ ನಿನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ.
ನಟಿ ನಮ್ರತಾ ಗೌಡ ಇದೀಗ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಸಖತ್ ಕ್ಯೂಟ್ ಆಗಿರೋ MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ.
ಎಲೆಕ್ಟ್ರಿಕ್ ಕಾರ್‌ನ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ, 17.3 kWh ನ ಬ್ಯಾಟರಿ ಹೊಂದಿರುವ ಕಾರನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ 230 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ.
ಮುಂಭಾಗದ ಸೀಟ್‌ಗಳಿಗೆ ಎರಡು ಏರ್‌ಬ್ಯಾಗ್ ಅಳವಡಿಸಲಾಗಿದೆ. ನಾಲ್ಕು ಜನ ಈ ಕಾರಿನಲ್ಲಿ ಪ್ರಯಾಣಿಸಬಹುದು. ಆದರೆ ಈ ಕಾರ್‌ಗೆ ಕೇವಲ ಎರಡು ಡೋರ್‌ಗಳಿವೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಸೀರಿಯಲ್ ನಟಿ ನಮ್ರತಾ ಗೌಡ ಆಕಾಶ ದೀಪ ಧಾರವಾಹಿಯಿಂದ ನಟನೆ ಮಾಡಿ, ಬಳಿಕ ಪುಟ್ಟಗೌರಿ ಮದುವೆ ಹಾಗೂ ನಾಗಿಣಿ 2 ಸೀರಿಯಲ್‌ಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ನಮ್ರತಾ ಗೌಡ ಇತ್ತೀಚೆಗೆ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಸಿ ಫೈನಲ್ಸ್‌ಗೆ ಒಂದು ವಾರ ಮುಂಚೆ ದೊಡ್ಮನೆಯಿಂದ ಹೊರ ಬಂದರೂ ಅಭಿಮಾನಿಗಳ ಬಳಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.
ನಟನೆಯ ಜೊತೆ ನಮ್ರತಾ ಗೌಡ ಮಾಡೆಲಿಂಗ್ ಕ್ಷೇತ್ರದಲ್ಲಿ ಬಹಳ ಒಳ್ಳೆ ಮಾಡಿದ್ದಾರೆ. ಅನೇಕ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಒಳ್ಳೆ ಸಂಭಾವನೆ ಕೂಡ ಪಡೆಯುತ್ತಿದ್ದಾರೆ.