ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ ಸಹೋದರಿ ಸೀಮಂತ… ಅಣ್ಣನೇ ಮಿಸ್ಸಿಂಗ್
ಬಿಗ್ ಬಾಸ್ ನಲ್ಲಿ ಉತ್ತಮ ಸ್ಪರ್ಧೆ ನೀಡುತ್ತಿರುವ ನಟ ಕಾರ್ತಿಕ್ ಮಹೇಶ್ ತಂಗಿಯ ಸೀಮಂತ ಸಂಭ್ರಮದಿಂದ ನಡೆದಿದ್ದು, ಕಾರ್ತಿ ಮಹೇಶನ್ನು ಕುಟುಂಬದ ಸದಸ್ಯರು ಮಿಸ್ ಮಾಡಿಕೊಂಡಿದ್ದಾರೆ.
ಸಿನಿಮಾ ಸೀರಿಯಲ್‌ಗಳಲ್ಲಿ ಮಿಂಚಿ ಸದ್ಯ ಬಿಗ್ ಬಾಸ್ ನಲ್ಲಿ ಅತ್ಯುತ್ತಮ ಸ್ಪರ್ಧಿಯಾಗಿ ರುವ ನಟ ಮಹೇಶ್ ಕಾರ್ತಿಕ್ (Mahesh Karthik). ಬಿಗ್ ಬಾಸ್‌ನ ಈ ಸ್ಪರ್ಧಿ ಸದ್ಯ ಜನರ ಫೇವರಿಟ್ ಕಂಟೆಸ್ಟಂಟ್ ಆಗಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಡೋಲು ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದ ಕಾರ್ತಿಕ್, ಬಿಗ್ ಬಾಸ್ (Bigg Boss) ಮನೆಯ ಫೇವರಿಟ್ ಸ್ಪರ್ಧಿ ಜೊತೆಗೆ ತಂಗಿಯ ಪ್ರೀತಿಯ ಅಣ್ಣ ಕೂಡ ಹೌದು. ಇದೀಗ ಕಾರ್ತಿಕ್ ಮನೆಯಲ್ಲಿ ಸಂಭ್ರಮದಲ್ಲಿ ಕಾರ್ತಿಕ್ ಮಾತ್ರ ಮಿಸ್ ಆಗಿದ್ದಾರೆ.
ಕಾರ್ತಿಕ್ ಮಹೇಶ್ ತಂಗಿ ತೇಜಸ್ವಿನಿ ಮಹೇಶ್ ಅವರ ಸೀಮಂತ ಸಂಭ್ರಮ ಅವರ ಮನೆಯಲ್ಲಿ ಸಂಭ್ರಮದಿಂದ ನಡೆದಿದೆ. ಈ ಸಂಭ್ರಮದ ಫೋಟೊವನ್ನು ಕಾರ್ತಿಕ್ ಆಫೀಶಿಯಲ್ ಇನ್ ಸ್ಟಾಗ್ರಾಮ್ ಖಾತೆಯಿಂದ ಅಪ್ ಲೋಡ್ ಮಾಡಲಾಗಿದೆ.
ಕಾರ್ತಿಕ್ ಇನ್ ಸ್ಟಾ ಪೇಜ್ ನಲ್ಲಿ ಕಾರ್ತಿಕ್ ತಂಗಿ ಮತ್ತು ಅಮ್ಮ… ಕಾರ್ತಿಕ್ ತಂಗಿ ಸೀಮಂತ ಕಾರ್ಯಕ್ರಮದ ಛಾಯಾಚಿತ್ರ... ಆದರೆ ಕಾರ್ತಿಕ್ ಅವರು Missing ...ಕಾರ್ತಿಕ್ ಅವರ ಪರವಾಗಿ ಅವರ ತಂಗಿಗೆ ನಾವೆಲ್ಲರೂ ಶುಭ ಹಾರೈಸೋಣ ಎಂದು ಬರೆದು ಕೊಂಡಿದ್ದಾರೆ.
ಕಾರ್ತಿಕ್ ಅವರತಂಗಿ ತೇಜಸ್ವಿನಿಯನ್ನು ಅವರು ಪ್ರೀತಿಯಿಂದ ಪುಟ್ಟಮ್ಮ ಎಂದು ಕರೆಯುತ್ತಿದ್ದರು. ಈ ಹಿಂದೆ ತಂಗಿಯ ಹುಟ್ಟುಹಬ್ಬದ ಸಮಯದಲ್ಲೂ ತಂಗಿ ಜೊತೆಗಿನ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದರು.
ಮೂಲತಃ ಮೈಸೂರಿನವರಾದ ಕಾರ್ತಿಕ್ (Karthik Mahesh), ಮಹಾರಾಜ ಕಾಲೇಜಿನಲ್ಲಿ ಬಿಎಸ್ ಸಿ ಮಾಡಿದ್ದರು. ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದು, ಸೀರಿಯಲ್ ಗಳಿಗೆ ಹಲವಾರು ಆಡಿಶನ್ ಕೊಟ್ಟರು. ಖುಷಿ ಸೀರಿಯಲ್ ಮೂಲಕ ಇವರು ನಟನೆಗೆ ಎಂಟ್ರಿ ಕೊಟ್ಟರು.
ಮಾಡೆಲಿಂಗ್ (modeling) ಮೂಲಕ ವೃತ್ತಿ ಜೀವನ ಆರಂಭಿಸಿದ ಕಾರ್ತಿಕ್ ಗೆ, ಬಾಲ್ಯದಿಂದಲೂ ನಟನೆ ಮಾಡುವ ಕನಸು ಇತ್ತು. ಮೊದಲ ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವಾಗಲೇ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಸಿನಿಮಾದಲ್ಲಿ ನಟಿಸುವ ಚಾನ್ಸ್ ಪಡೆದರು.
ನಟಿಸಿದ ಮೊದಲ ಸಿನಿಮಾವೇ ರಾಷ್ಟ್ರಪ್ರಶಸ್ತಿ (Natinal Award) ಪಡೆದಿತ್ತು. ಈಗಾಗಲೇ ಅಕ್ಕ, ಮಹಾಕಾಳಿ, ದೇವಯಾನಿ, ಇಂತಿ ನಿಮ್ಮ ಆಶಾ, ಪುಟ್ಟಕ್ಕನ ಮಕ್ಕಳು, ಅಂತರಪಟ ಸೀರಿಯಲ್ ನಲ್ಲಿ ನಟಿಸಿದ್ದರು,. ಸದ್ಯ ಬಿಗ್ ಬಾಸ್ ನಲ್ಲಿ ಮಿಂಚುತ್ತಿದ್ದಾರೆ.