- Home
- Entertainment
- TV Talk
- ಸ್ನೇಹಿತೆ ಜೊತೆ ಕೂದಲು ಕೆಂಪು ಬಣ್ಣ ಮಾಡಿಸಿದ ಧನುಶ್ರೀ;ನಿನ್ನ ಬಾಳು ಹಾಳಾಗಿದ್ದು ಸಾಕಾಗಿಲ್ವಾ ಎಂದ ನೆಟ್ಟಿಗರು
ಸ್ನೇಹಿತೆ ಜೊತೆ ಕೂದಲು ಕೆಂಪು ಬಣ್ಣ ಮಾಡಿಸಿದ ಧನುಶ್ರೀ;ನಿನ್ನ ಬಾಳು ಹಾಳಾಗಿದ್ದು ಸಾಕಾಗಿಲ್ವಾ ಎಂದ ನೆಟ್ಟಿಗರು
ತಿಂಗಳಿಗೊಮ್ಮೆ ಕೂದಲು ಬಣ್ಣ ಬದಲಾಯಿಸುವ ಧನುಶ್ರೀ. ಈ ಸಲ ಫ್ರೆಂಡ್‌ಗೂ ಕೆಂಪು ಮಾಡಿಸಿ ಬಕ್ರ ಮಾಡ್ಬಿಟ್ರಾ?

ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ influencer ಧನುಶ್ರೀ ಎರಡು ತಿಂಗಳಿಗೆ ಒಮ್ಮೆ ಕೂದಲ ಬಣ್ಣ ಬದಲಾಯಿಸಿ ವ್ಲಾಗ್ ಮಾಡುತ್ತಾರೆ.
ಕಳೆದ ಸಲ ಬ್ಲಾಂಡ್ ಬಣ್ಣ ಅಂದ್ರೆ ಕೆಂಚು ಕೂದಲು ಮಾಡಿಸಿದ್ದರು ಆಗ ಫ್ಯಾಮಿಲಿಯಲ್ಲಿ ಯಾರೂ ಅಷ್ಟಾಗಿ ಇಷ್ಟ ಪಡದ ಕಾರಣ ಈ ಸಲ ಮನೆಯವರೇ ಬಣ್ಣ ಆಯ್ಕೆ ಮಾಡಿದ್ದಾರೆ.
ಧನುಶ್ರೀ ಅತ್ತಿಗೆ ಚೀಟಿ ಎತ್ತಿ ಕೆಂಪು ಬಣ್ಣ ಆಯ್ಕೆ ಮಾಡಿದ್ದಾರೆ. ಹೀಗಾಗಿ ಪೂನೆಯಿಂದ ಬಂದಿರುವ ಸ್ನೇಹಿತೆ ಜೊತೆ ತೆರಳಿ ಬರ್ತಡೇ ಆಚರಣೆ ಹಾಗೂ ಕೂದಲ ಬಣ್ಣ ಒಟ್ಟಿಗೆ ಮಾಡಿಸಿಕೊಂಡಿದ್ದಾರೆ.
ನಿನ್ನ ಜೀವನ ಹಾಳಾಗಿದ್ದು ಸಾಕಾಗಿಲ್ವಾ? ನೀನು ಮಾಡುವ ವಿಚಿತ್ರ ಪ್ರಯೋಗಗಳಿಗೆ ಯಾಕೆ ನಿನ್ನ ಸ್ನೇಹಿತೆಯನ್ನು ಬಲಿ ಕೊಡುತ್ತೀಯಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
'ನನ್ನ ದಿನ ಸ್ಪೆಷಲ್ ಮಾಡಿದ್ದಕ್ಕೆ ತುಂಬಾನೇ ಥ್ಯಾಂಕ್ಸ್. ಈ ಸಮಯದಲ್ಲಿ ನನ್ನ ಜೊತೆ ಯಾರಿದ್ದಾರೆ ಯಾರು ಕೇರ್ ಮಾಡುತ್ತಾರೆ ಯಾರು ನಿಲ್ಲುತ್ತಾರೆ ಅನ್ನೋದು ತಿಳಿದುಕೊಂಡೆ' ಎಂದು ಧನುಶ್ರೀ ಬರೆದಿದ್ದಾರೆ.
'ಎಷ್ಟು ವರ್ಷ ಜೊತೆಗಿದ್ದೀವಿ ಅನ್ನೋದು ಮುಖ್ಯವಲ್ಲ ಜೊತೆಗಿದ್ದಷ್ಟು ದಿನ ಎಷ್ಟು ಅರ್ಥ ಮಾಡಿಕೊಂಡಿದ್ದೀವಿ ಅನ್ನೋದು ಮುಖ್ಯ. ಈ ವರ್ಷ ತುಂಬಾ ಕೆಟ್ಟದಾಗಿ ಆದರೆ ನನ್ನ ಪಕ್ಕ ನೀನು ಇರುವೆ' ಎಂದಿದ್ದಾರೆ ಧನು.
'ಮೊದಲ ಸಲ ಇಬ್ಬರು ಒಟ್ಟಿಗೆ ಹೇರ್ ಕಲರ್ ಮಾಡಿಸಿಕೊಂಡಿದ್ದೀವಿ ಅದೂ ಕೆಂಪು ಬಣ್ಣ. ಜೀವನ ಪೂರ್ತಿ ಈ ಅದ್ಭುತವಾದ ಕ್ಷಣವನ್ನು ಎಂಜಾಯ್ ಮಾಡಲು ಇಷ್ಟ ಪಡುತ್ತೀನಿ' ಎಂದಿದ್ದಾರೆ.