ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ ಈ ಸ್ಪರ್ಧಿಯನ್ನು ಹೊರಹಾಕಲು ಫ್ಯಾನ್ಸ್ ಒತ್ತಾಯ
ಬಿಗ್ ಬಾಸ್ ಫಿನಾಸೆ ಸಮೀಪಿಸುತ್ತಿದೆ. ಮನೆಯೊಳಗಿನ ಡ್ರಾಮಾ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಈ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಎಲಿಮಿನೇಶನ್ ರೌಂಡ್ ಮತ್ತಷ್ಟು ಕುತೂಹಲ ಕೆರಳಿಸಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಭಾರಿ ಚರ್ಚೆಯಾಗುತ್ತಿದೆ. ಸ್ಪರ್ದಿಗಳ ಆಟ, ಮನೆಯೊಳಗಿನ ನಾಟಕ, ಕಿತ್ತಾಟ, ಮಾತುಗಳು ಶೋ ರೋಚಕತೆ ಹೆಚ್ಚಿಸಿದೆ. ಒಂದೆಡೆ ಕನ್ನಡ ಬಿಗ್ ಬಾಸ್ ಶೋ ಅಂತಿ ಹಂತ ತಲುಪುತ್ತಿದೆ. ಅತ್ತ ಹಿಂದಿ ಬಿಗ್ ಬಾಸ್ ಶೋ ಫಿನಾಲೆ ಸಮೀಪಿಸುತ್ತಿದೆ. ಬಿಗ್ ಬಾಸ್ 18ನೇ ಆವೃತ್ತಿಯಲ್ಲಿ ಕ್ಷಣಕ್ಷಣಕ್ಕೂ ಡ್ರಾಮಾ ಹೆಚ್ಚಾಗುತ್ತಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಅಭಿಮಾನಿಗಳು ಹಿಂದಿ ಬಾಗ್ ಬಾಶ್ ಶೋ ಸ್ಪರ್ಧಿ ಈಶಾ ಸಿಂಗ್ ಮನೆಯಿಂದ ಹೊರಹಾಕಲು ಆಗ್ರಹಿಸಿದ್ದಾರೆ. ಅಂತಿಮ ಘಟ್ಟ ತಲುಪು 6 ಮಂದಿ ಸ್ಪರ್ಧಿಗಳ ಸಾಲಿನಲ್ಲಿ ಈಶಾ ಸಿಂಗ್ ಅರ್ಹಳಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈಶಾ ಸಿಂಗ್ ಇಡೀ ಆವೃತ್ತಿಯಲ್ಲಿ ಉತ್ತಮವಾಗಿ ಪಾಲ್ಗೊಂಡಿಲ್ಲ. ಈಕೆಯ ಆಟ ಅತ್ತ ಮನೋರಂಜನೆಯೂ ನೀಡುತ್ತಿಲ್ಲ, ಇತ್ತ ಮನೆಯ ವಾತಾವರಣವೂ ಉತ್ತಮಗೊಳ್ಳುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಹಿಂಗಿ ಬಾಗ್ ಬಾಸ್ ಶೋನಲ್ಲಿ 7 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ವವಿಯನ್ ಡಿಸೇನಾ, ಚುಮ್ ದರಾಂಗ್, ಅವಿನಾಶ್ ಮಿಶ್ರ, ಕರಣ್‌ವೀರ್ ಮೆಹ್ರಾ, ರಜತ್ ದಲಾಲ್, ಈಶಾ ಸಿಂಗ್ ಹಾಗೂ ಶಿಲ್ಪಾ ಶಿರೋಡ್ಕರ್ ಉಳಿದುಕೊಂಡಿರುವ ಸ್ಪರ್ಧಿಗಳು. ಈ ಪೈಕಿ ಮಿಡ್ ವೀಕ್ ಎಲಿಮಿನೇಶನ್ ಪ್ರಕ್ರಿಯೆಯಲ್ಲಿ ಈಶಾ ಸಿಂಗ್‌ಗೆ ಗೇಟ್ ಪಾಸ್ ನೀಡಿ ಅನ್ನೋ ಕೂಗು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.
ಇತ್ತ ಹಿಂದಿ ಬಿಗ್ ಬಾಸ್ ವೋಟಿಂಗ್ ಅಪ್‌ಡೇಟ್ ಕೂಡ ಇಶಾ ಸಿಂಗ್ ಸ್ಥಾನ ಡೇಂಜರ್ ಝೋನ್‌ನಲ್ಲಿದೆ ಎಂದ ಹೇಳುತ್ತಿದೆ.7 ಸ್ಪರ್ಧಿಗಳ ಪೈಕಿ ವೋಟಿಂಗ್‌ನಲ್ಲಿ ಈಶಾ ಸಿಂಗ್ ಕೊನೆಯ ಸ್ಥಾನದಲ್ಲಿದ್ದಾರೆ. ಕರಣವೀರ್ ಮೆಹ್ರಾ ಹಾಗೂ ರಜತ್ ದಲಾಲ್ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಇಶಾ ಸಿಂಗ್ ಬಿಗ್ ಬಾಸ್ ಪಯಣ ಇಂದಿಗೆ ಅಂತ್ಯವಾಗುವ ಸಾಧ್ಯತೆ ಇದೆ.
ಹಿಂದಿ ಬಿಗ್ ಬಾಸ್ ಫಿನಾಲೆ ಜನವರಿ 19 ರಂದು ನಡೆಯಲಿದೆ. ಕಳೆದ 15 ವಾರಗಳಿಂದ ನಡೆಯುತ್ತಿರುವ 18ನೇ ಆವೃತ್ತಿ ಬಿಗ್ ಬಾಸ್ ಶೋ ಫಿನಾಲೆಯೊಂದಿಗೆ ಅಂತ್ಯಗೊಳ್ಳಲಿದೆ. ನಟ ಸಲ್ಮಾನ್ ಖಾನ್ ನಿರೂಪಣೆಯ ಹಿಂದಿ ಬಿಗ್ ಬಾಸ್ ಫಿನಾಲೆ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. ಸತತ 3 ಗಂಟೆ ಫಿನಾಲೆ ನಡೆಯಲಿದೆ.
ಹಿಂದಿ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ. ಜೊತೆಗೆ ಬಿಗ್ ಬಾಸ್ ಟ್ರೋಫಿ ಕೂಡ ಪಡೆಯಲಿದ್ದಾರೆ. ಇದೀಗ ಟ್ರೋಫಿ ಗೆಲ್ಲಲು ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಯಾರು ಈ ಬಾರಿಯ ಹಿಂದಿ ಬಿಗ್ ಬಾಸ್ ವಿನ್ನರ್ ಅನ್ನೋ ಕುತೂಹಲ ಚರ್ಚೆಗಳು ಹೆಚ್ಚಾಗುತ್ತಿದೆ.