MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಟ್ರೋಫಿ ಗೆದ್ದಿಲಾಂದ್ರೂ ಜನಪ್ರಿಯತೆಯ ಉತ್ತುಂಗಕ್ಕೇರಿದ ಬಿಗ್ ಬಾಸ್ ಸ್ಪರ್ಧಿಗಳು

ಟ್ರೋಫಿ ಗೆದ್ದಿಲಾಂದ್ರೂ ಜನಪ್ರಿಯತೆಯ ಉತ್ತುಂಗಕ್ಕೇರಿದ ಬಿಗ್ ಬಾಸ್ ಸ್ಪರ್ಧಿಗಳು

ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ ನಂತರ ಸ್ಪರ್ಧಿಗಳ ಹಣೆ ಬರಹ ಶೈನ್ ಆಗುತ್ತೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಬಾಸ್‌ನಿಂದ ಹೊರ ಬಂದ ನಂತರ ಬಿಗ್‌ಬಾಸ್ ಕಂಟೆಸ್ಟಂಟ್ಸ್ ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಇದರೊಂದಿಗೆ, ಜನಪ್ರಿಯತೆ ಕೂಡ ಹೆಚ್ಚುತ್ತೆ.  

2 Min read
Suvarna News
Published : Nov 11 2023, 05:31 PM IST
Share this Photo Gallery
  • FB
  • TW
  • Linkdin
  • Whatsapp
18

ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ (Bigg Boss Reality Show) ಮನೆಯೊಳಗೆ ಹಲವಾರು ಸ್ಪರ್ಧಿಗಳು ಪ್ರವೇಶಿಸುತ್ತಾರೆ. ಕೆಲವರು ಉದ್ಯಮದ ದೊಡ್ಡ ತಾರೆಗಳು, ಇತರರು ಸಾಮಾನ್ಯ ಜನರು ಮತ್ತು ಇತರ ಕ್ಷೇತ್ರಗಳ ಜನರು ಭಾಗವಹಿಸ್ತಾರೆ. ಆದರೆ ಕಾರ್ಯಕ್ರಮದ ಟ್ರೋಫಿ ಕೇವಲ ಒಬ್ಬ ಸ್ಪರ್ಧಿಗೆ ಹೋಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. 
 

28

ಬಿಗ್ ಬಾಸ್ ಸ್ಪರ್ಧೆಯಲ್ಲಿ ಗೆದ್ದವರು ಮಾತ್ರ ಯಶಸ್ಸು ಮತ್ತು ಜನಪ್ರಿಯತೆ ಪಡೆಯೋದು ಎನ್ನಲು ಸಾಧ್ಯವಿಲ್ಲ. ಯಾಕಂದ್ರೆ ಟ್ರೋಫಿ ಬದಲು ಸಾರ್ವಜನಿಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ಎಷ್ಟೊ ಸದಸ್ಯರು ನಮ್ಮ ಮುಂದಿದ್ದಾರೆ. ಇಂದು ಈ ಲೇಖನದಲ್ಲಿ, ಬಿಗ್ ಬಾಸ್ ಟ್ರೋಫಿ ಪಡೆಯದಿದ್ದರೂ ಜನಪ್ರಿಯತೆ ಗಳಿಸಿದ ಹಿಂದಿ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ತಿಳಿಯೋಣ. 
 

38

ಶೆಹನಾಜ್ ಗಿಲ್
ಬಿಗ್ ಬಾಸ್ ಸೀಸನ್ 13 ರ ಈ ಸ್ಪರ್ಧಿ,ಆ ಸೀಸನ್ ನಲ್ಲಿ ಸಾಕಷ್ಟು ಮೋಜು ಮಾಡಿದ್ದರು. ಅದು ಮನೋರಂಜನೆಯಾಗಿರಲಿ ಅಥವಾ ಪ್ರೀತಿಯಾಗಿರಲಿ ಎಲ್ಲದರಲ್ಲೂ ಶೆಹನಾಜ್ (Shehnaaz Gill) ಮುಂದಿದ್ದರು. ಶೆಹನಾಸ್ ಗಿಲ್ ಮತ್ತು ಸಿದ್ಧಾರ್ಥ್ ಶುಕ್ಲಾ ಕೆಮೆಸ್ಟ್ರಿಯಿಂದಾಗಿ ಆ ಸೀಸನ್ ಟಿಆರ್ ಪಿ ಕೂಡ ಹೆಚ್ಚಾಗಿತ್ತು.  ತನ್ನ ಮುದ್ದು ಮತ್ತು ಸರಳತೆಯಿಂದ, ಶಹನಾಜ್ ಗಿಲ್ ಕೆಲವೇ ದಿನಗಳಲ್ಲಿ ಕುಟುಂಬದ ಹೃದಯ ಗೆದ್ದರು. ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಕೂಡ ಶೆಹನಾಜ್ ಗಿಲ್ ಅವರನ್ನು ಇಷ್ಟಪಟ್ಟರು. 
 

48

ಶೆಹನಾಜ್ ಗಿಲ್ ತನ್ನ ವಿಭಿನ್ನತೆಯಿಂದಾಗಿಯೇ ಬಿಗ್ ಬಾಸ್ ಸೀಸನ್ 12 ರಲ್ಲಿ ಟಾಪ್ ತ್ರಿ ತಲುಪುವಲ್ಲಿ ಯಶಸ್ವಿಯಾದರು. ಅವರು ಕಾರ್ಯಕ್ರಮದ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಜನರ ಹೃದಯ ಗೆದ್ದರು. ಬಿಗ್ ಬಾಸ್ ಬಳಿಕ ತಮ್ಮದೇ ಶೋ ಆರಂಭಿಸಿದರು, ಇದೀಗ ಸಿನಿಮಾದಲ್ಲೂ ಮಿಂಚುತ್ತಿದ್ದಾರೆ. 
 

58

ಹೀನಾ ಖಾನ್ (Hina Khan)
ಈ ಪಟ್ಟಿಯಲ್ಲಿ ಹೀನಾ ಖಾನ್ ಅವರ ಹೆಸರೂ ಇದೆ. ಹಿನಾ ಖಾನ್ ಬಿಗ್ ಬಾಸ್ ಸೀಸನ್ 11ರಲ್ಲಿ ಕಾಣಿಸಿಕೊಂಡರು. 'ಅಕ್ಷರಾ' ಪಾತ್ರದಿಂದ ಜನರು ಹಿನಾ ಖಾನ್ ಅವರನ್ನು ತಿಳಿದಿದ್ದರು, ಆದರೆ ಈ ರಿಯಾಲಿಟಿ ಶೋ ಅವರಿಗೆ ನಿಜವಾದ ಗುರುತನ್ನು ನೀಡಿತು. ಈ ಸೀಸನ್ ನಲ್ಲಿ ಹಿನಾ ಖಾನ್ ತನ್ನ ಸ್ಟ್ರಾಂಗ್ ವ್ಯಕ್ತಿತ್ವದಿಂದ ಎಲ್ಲರ ಹೃದಯ ಗೆದ್ದರು. ಬಿಗ್ ಬಾಸ್ ನ ಹೊಸ ಸೀಸನ್ ಗಳಲ್ಲಿ ಹಿನಾ ಖಾನ್ ಅವರನ್ನು ಯಾವಾಗಲೂ ಅತಿಥಿಯಾಗಿ ಕರೆಯಲು ಇದು ಕಾರಣವಾಗಿದೆ.  

68

ಶಿವ ಠಾಕ್ರೆ (Shiv Thakare)
ಶಿವ ಠಾಕ್ರೆ ಬಿಗ್ ಬಾಸ್ ಮರಾಠಿ ಸೀಸನ್ 2 ರ ವಿಜೇತರಾಗಿದ್ದಾರೆ. ಅವರು ಎಂಟಿವಿಯ ಅತ್ಯಂತ ಯಶಸ್ವಿ ಶೋ 'ರೋಡೀಸ್' ಸೀಸನ್ 19ನಲ್ಲೂ ಭಾಗವಹಿಸಿದ್ದರು. ಎರಡೂ ರಿಯಾಲಿಟಿ ಶೋಗಳಲ್ಲೂ ಶಿವನನ್ನು ಜನರು ಇಷ್ಟಪಟ್ಟಿದ್ದರು. ನಂತರ ಇವರು ಹಿಂದಿ ಬಿಗ್ ಬಾಸ್ ಸೀಸನ್ 16 ರಲ್ಲಿ ಕಾಣಿಸಿಕೊಂಡರು. ಅವರು ಈ ಸೀಸನ್  ಟ್ರೋಫಿಯನ್ನು ಪಡೆಯದಿದ್ದರೂ, ಸಾಮಾನ್ಯ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. 

78

ಅಸಿಮ್ ರಿಯಾಜ್ (Asin Riyas)
ಅಸಿಮ್ ರಿಯಾಜ್ ಅವರನ್ನು ಯಾರು ಮರೆಯಲು ಸಾಧ್ಯ? ಅಸಿಮ್ ಬಿಗ್ ಬಾಸ್ ಸೀಸನ್ 13 ರ ಸ್ಪರ್ಧಿಯಾಗಿದ್ದರು. ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ಅವರ ಸ್ನೇಹ ಪ್ರಶಂಶೆಗೂ ಅರ್ಹವಾಗಿತ್ತು. ಅಸೀಮ್ ತುಂಬಾನೆ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದರು. ಇದಕ್ಕೆ ಕಾರಣ ಅವರ ಶುದ್ಧ ಹೃದಯ. ರಿಯಾಲಿಟಿ ಶೋದಲ್ಲೂ, ಅವರು ತಮ್ಮ ನಿಜವಾದ ವ್ಯಕ್ತಿತ್ವವನ್ನು ತೋರಿಸಿದರು, ಅದು ಸಾರ್ವಜನಿಕರಿಗೆ ತುಂಬಾ ಇಷ್ಟವಾಯಿತು. ಬಿಗ್ ಬಾಸ್ ಸೀಸನ್ 13 ರಲ್ಲಿ ಅಸಿಮ್ ಎರಡನೇ ರನ್ನರ್ ಅಪ್ ಆಗಿದ್ದರು. ಟ್ರೋಫಿ ಪಡೆಯದಿದ್ದರೂ ಜನರ ಹೃದಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದರು. 
 

88

ಮನು ಪಂಜಾಬಿ 
ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನರು ಸಹ ಮನೆಯೊಳಗೆ ಪ್ರವೇಶಿಸಿದರು. ಇದು ಬಿಗ್ ಬಾಸ್ ಸೀಸನ್ 10ರ ವಿಷಯ. ಈ ಸೀಸನ್ ನ ಟಿಆರ್ಪಿ ಕೂಡ ಅನೇಕ ದಾಖಲೆಗಳನ್ನು ನಿರ್ಮಿಸಿತ್ತು. ಈ ಸೀಸನ್ ನಲ್ಲಿ ಮನು ಪಂಜಾಬಿ ತಮ್ಮ ಮಾತು, ಕಾಮಿಡಿಗಳಿಂದ ಎಲ್ಲರನ್ನೂ ರಂಜಿಸಿದರು. ಟಾಸ್ಕ್ ಗಳಿಂದ ಹಿಡಿದು ಮನೆ ಕೆಲಸಗಳವರೆಗೆ ಮನ್ನು ಪಂಜಾಬಿ ಸದಾ ಮುಂದಿದ್ದರು. ಬಿಗ್ ಬಾಸ್ ಟೈಟಲ್ ಗೆಲ್ಲದಿದ್ದರು, ಇವರು ಜನಮನ ಗೆದ್ದಿದರು. 

About the Author

SN
Suvarna News
ಬಿಗ್ ಬಾಸ್
ರಿಯಾಲಿಟಿ ಶೋ
ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved