- Home
- Entertainment
- TV Talk
- Sonu Gowda ಬೇಬಿ ಯಾರು ಗೊತ್ತಾ?: ಕಾರ್ ಇದ್ದರೂ ವಿಮಾನ ಹೋದ್ರೂ ಬಿಕಿನಿ ಬ್ಯೂಟಿಗೆ ಇವಳೇ ಬೇಕಂತೆ!
Sonu Gowda ಬೇಬಿ ಯಾರು ಗೊತ್ತಾ?: ಕಾರ್ ಇದ್ದರೂ ವಿಮಾನ ಹೋದ್ರೂ ಬಿಕಿನಿ ಬ್ಯೂಟಿಗೆ ಇವಳೇ ಬೇಕಂತೆ!
ಸೋಷಿಯಲ್ ಮೀಡಿಯಾದಲ್ಲಿ ಸದಾ ಹಲ್‌ಚಲ್ ಸೃಷ್ಟಿಸುವ ಬಿಗ್ಬಾಸ್ ಬ್ಯೂಟಿ ಸೋನು ಶ್ರೀನಿವಾಸ್ ಗೌಡ ದಸರಾ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸೋನು ಗೌಡ ಅವರು ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ.
ದಸರಾ ಹಬ್ಬದ ಪ್ರಯುಕ್ತ ಸೋನು ಗೌಡ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು! ಬ್ಲ್ಯಾಕ್ ಡ್ರೆಸ್ ಹಾಗೂ ಜೀನ್ಸ್ ತೊಟ್ಟು ವಿವಿಧ ಭಂಗಿಗಳಲ್ಲಿ ಸೋನು ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದೆ.
'ಕಾರ್ ಇದ್ದರೂ ವಿಮಾನ ಹೋದ್ರೂ ನಾನ್ ಬೇಬಿ ಇವಳೇ' ಎಂದು ತಮ್ಮ ದ್ವಿಚಕ್ರ ವಾಹನಕ್ಕೆ ಪೂಜೆ ಮಾಡಿರುವ ಫೋಟೋಗಳನ್ನು ಸೋನು ಗೌಡ ಹಂಚಿಕೊಂಡು ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು, ಶುಭವಾಗಲಿ ಸದಾ ಒಳಿತಾಗಲಿ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಸೋನು ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಸರಳವಾಗಿ ಪಕ್ಕಾ ಹಳ್ಳಿ ಸ್ಟೈಲ್ನಲ್ಲಿ ಸೀರೆಯುಟ್ಟು ಕಾಣಿಸಿಕೊಂಡಿದ್ದರು. ಸಿಂಪಲ್ ಆಗಿರುವ ಚಿಕ್ಕದಾದ ಝುಮುಕಿ ಧರಿಸಿದ ಸೋನು ಗೌಡ ಆಕರ್ಷಕವಾದ ಕೆಂಪು ಬಣ್ಣದ ಬಿಂದಿ ಇಟ್ಟಿದ್ದರು.
ವಿಶೇಷವಾಗಿ ಸೋನು ಗೌಡ ಹಳದಿ ಬಣ್ಣದ ಫ್ಲೋರಲ್ ಸೀರೆ, ಪಿಂಕ್ ಕಲರ್ ಫುಲ್ ಸ್ಲೀವ್ ಬ್ಲೌಸ್ ಧರಿಸಿದ್ದರು. ಪಿಂಕ್ ಬಣ್ಣದ ಬ್ಲೌಸ್ನಲ್ಲಿ ಆಕರ್ಷಕವಾದ ಒಂದು ಗೊಂಬೆ ಡಿಸೈನ್ ಕೂಡಾ ಇತ್ತು. ಅವರ ಔಟ್ಫಿಟ್ನಲ್ಲಿ ಈ ಗೊಂಬೆ ಹೈಲೈಟ್ ಆಗಿತ್ತು.
ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.
ಈ ಹಿಂದೆ ಸೋನು ಗೌಡರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.