ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ್ ಬಿಗ್ ಬಾಸ್ ಸ್ಪರ್ಧಿ, ಮನೆಕೆಲಸದವನ ವಿರುದ್ಧ ದೂರು
ಖ್ಯಾತ ಬಿಗ್ ಬಾಸ್ ಸ್ಪರ್ಧಿ ರಿಯಾಲಿಟಿ ಶೋ ಹಾಗೂ ತಮ್ಮ ನಟೆಯಿಂದಲೂ ಭಾರಿ ಗಮನಸೆಳೆದಿದ್ದಾರೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ವಿರುದ್ದವೇ ದೂರು ದಾಖಲಿಸಿದ್ದಾರೆ.

ಬಿಗ್ ಬಾಸ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದ ನಟಿ ಕಾಶಿಶ್ ಕಪೂರ್ ತಲೆನೋವು ಹೆಚ್ಚಾಗಿದೆ. ಹಿಂದಿ ಬಿಗ್ ಬಾಸ್ ಮೂಲಕ ಭಾರಿ ಜನಮನ್ನಣೆಗಳಿಸಿದ್ದ ಕಾಶಿಶ್ ಕಪೂರ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 24ರ ಹರೆಯದ ಕಾಶಿಶ್ ಕಪೂರ್ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಶಿಶ್ ಕಪೂರ್ ಮನೆಯಲ್ಲಿ ಬರೋಬ್ಬರಿ 4 .5 ಲಕ್ಷ ರೂಪಾಯಿ ಕಳುವಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ.
ಕಬೋರ್ಡ್‌ನಲ್ಲಿಟ್ಟಿದ 4.5 ಲಕ್ಷ ರೂಪಾಯಿ ಕಾಣೆಯಾಗಿದೆ. ಈ ಸಂಬಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಚಿನ್ ಕುಮಾರ್ ಚೌಧರಿ ವಿರುದ್ದ ದೂರು ದಾಖಲಿಸಿದ್ದಾರೆ. ಪ್ರತಿ ದಿನ ಚಧರಿ 11 ಗಂಟೆಗೆ ಮನೆ ಕೆಲಸಕ್ಕಾಗಿ ಮನೆಗೆ ಆಗಮಿಸುತ್ತಿದ್ದ, ಬಳಿಕ 1 ಗಂಟೆ ಕಲಸ ಮುಗಿಸಿ ತೆರಳುತ್ತಿದ್ದ. ಆತನ ಪ್ರಶ್ನಿಸಿದಾಗ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ದೂರಿನಲ್ಲಿಕಾಶಿಶ್ ಕಪೂರ್ ಉಲ್ಲೇಖಿಸಿದ್ದಾರೆ.
ಬಿಹಾರ ಮೂಲದ ಕಾಶಿಶ್ ಕಪೂರ್ ಮುಂಬೈನಲ್ಲಿ ನೆಲೆಸಿದ್ದಾರೆ. ಟಿವಿ ಸಿರೀಯಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಶಿಶ್ ಕಪೂರ್ ಕಾಣಿಸಿಕೊಂಡಿದ್ದಾರೆ. ಕೆಲಸದಿಂದ ಸಿಕ್ಕ ಸಂಭಾವನೆ 7.5 ಲಕ್ಷ ರೂಪಾಯಿ ಹಣವನ್ನು ಕಬೋರ್ಡ್‌ನಲ್ಲಿ ಇಡಲಾಗಿತ್ತು. ಈ ಪೈಕಿ ತಾಯಿಗೆ ಒಂದಿಷ್ಟು ಹಣ ಬ್ಯಾಂಕ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಹೀಗಾಗಿ ಕಬೋರ್ಡ್‌ನಲ್ಲಿಟ್ಟಿದ್ದ ಹಣದಲ್ಲಿ ಒಂದಿಷ್ಟು ಹಣ ಬ್ಯಾಂಕ್‌ಗೆ ಜಮೆ ಮಾಡಲು ನಟಿ ಮುಂದಾಗಿದ್ದರು.
ಆದರೆ ಕಬೋರ್ಡ್‌ನಲ್ಲಿ 2 ಲಕ್ಷ ರೂಪಾಯಿ ಮಾತ್ರ ಲಭ್ಯವಾಗಿದೆ. ಇನ್ನುಳಿದ 4.5 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಈ ಕುರಿತು ಮನೆಗೆಲೆಸದ ಸಚಿನ್ ಕುಮಾರ್ ಚೌಧರಿಯನ್ನು ವಿಚಾರಿಸಿದ್ದಾರೆ. ಗೊತ್ತಿಲ್ಲ ಎಂಬ ಉತ್ತರ ನೀಡಿದ ಸಚಿನ್ ಮೇಲೆ ಅನುಮಾನ ಹೆಚ್ಚಾಗಿದೆ. ಸಚಿನ್ ಹೊರತು ಇನ್ಯಾರು ಕೋಣೆ ಪ್ರವೇಶಿಸಿಲ್ಲ. ಹೀಗಾಗಿ ಆತನ ಜೇಬು, ಬ್ಯಾಗ್ ಪರಿಶೀಲಿಸಲು ಮುಂದಾಗಿದ್ದಾಳೆ. ಆದರೆ ಇದಕ್ಕೆ ಸಚಿನ್ ಕುಮಾರ್ ಚೌಧರಿ ಅವಕಾಶ ನೀಡಿಲ್ಲ.
ತನ್ನ ಬ್ಯಾಗ್ ಎತ್ತಿಕೊಂಡು 50,000 ರೂಪಾಯಿ ನೋಟುಗಳುನ್ನು ಕೋಣೆಯತ್ತ ಎಸೆದು ಸಚಿನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗಾಗಿ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ಕಾಶಿಶ್ ಕಪೂರ್ ದೂರು ದಾಖಲಿಸಿದ್ದಾರೆ. ಸದ್ಯ ಸಚಿನ್ ಕುಮಾರ್ ಚೌಧರಿ ನಾಪತ್ತೆಯಾಗಿದ್ದಾನೆ. ಇತ್ತ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.