- Home
- Entertainment
- TV Talk
- ನೀವು ಬಿಟ್ಟೋದ ಮೇಲೆ ಜೀವನ ತುಂಬಾ ಬದಲಾಗಿದೆ; ತಾಯಿ ನೆನೆದು ಭಾವುಕರಾದ ಬಿಗ್ ಬಾಸ್ ಐಶ್ವರ್ಯ ಶಿಂಧೋಗಿ
ನೀವು ಬಿಟ್ಟೋದ ಮೇಲೆ ಜೀವನ ತುಂಬಾ ಬದಲಾಗಿದೆ; ತಾಯಿ ನೆನೆದು ಭಾವುಕರಾದ ಬಿಗ್ ಬಾಸ್ ಐಶ್ವರ್ಯ ಶಿಂಧೋಗಿ
ತಾಯಿ ನೆನೆದು ಕಣ್ಣೀರಿಟ್ಟ ಐಶ್ವರ್ಯ ಶಿಂಧೋಗಿ. ಅಮ್ಮ ಇಲ್ಲದೆ ಜೀವನ ಒಂದೇ ರೀತಿ ಇಲ್ಲ ಎಂದ ನಟಿ......

ಕನ್ನಡ ಕಿರುತೆರೆ ನಟಿ ಐಶ್ವರ್ಯ ಶಿಂಧೋಗಿ ತಾಯಿಯ ಹುಟ್ಟುಹಬ್ಬ ಇಂದು. ಅಗಲಿರುವ ತಾಯಿಯನ್ನು ನೆನೆದು ಭಾವುಕರಾಗಿ ಹಳೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿ ವರ್ಷವೂ ತಾಯಿ ಹುಟ್ಟುಹಬ್ಬಕ್ಕೆ ಪೋಸ್ಟ್ ಹಾಕುತ್ತಾರೆ. 'ನೀವು ಇಲ್ಲದೆ ನನ್ನ ಜೀವನ ಮೊದಲಿನಂತೆ ಇಲ್ಲ. ಪದಗಳಲ್ಲಿ ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಎಂದು ಹೇಳಲು ಆಗದು' ಎಂದು ಐಶ್ವರ್ಯ ಬರೆದುಕೊಂಡಿದಾರೆ.
'ಕೆಲವೊಮ್ಮೆ ನೀವು ವಾಪಸ್ ಬರಬಾರದೇ ಅನಿಸುತ್ತದೆ. ನಿಮ್ಮ ಹುಟ್ಟುಹಬ್ಬದ ದಿನ ಅದೆಷ್ಟೋ ನೆನಪುಗಳು ನನಗೆ. ನಿಮ್ಮ ಹಿಂಪಾದ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತೀನಿ ಮತ್ತು ನಗುವನ್ನು ಮಿಸ್ ಮಾಡಿಕೊಳ್ಳುತ್ತೀನಿ'
ನೀವು ಇಂದು ಉತ್ತ ಸ್ಥಾನದಲ್ಲಿ ಇದ್ದೀರಿ ಅಂದುಕೊಂಡಿದ್ದೀನಿ. ನನಗೆ ನೀನು ಕೊಟ್ಟಿರುವ ಪ್ರೀತಿ ಹಾಗೂ ನಮ್ಮಿಬ್ಬರ ನಡುವೆ ಇದ್ದ ಸ್ನೇಹಕ್ಕೆ ನಾನು ಈಗಲೂ ನಿನ್ನ ಬರ್ತಡೇ ಆಚರಿಸುತ್ತೀನಿ'
ಯಾವುದೇ ಸೀರಿಯಲ್, ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗಿಯಾದರೂ ತಮ್ಮ ತಂದೆ ತಾಯಿಯನ್ನು ಐಶ್ವರ್ಯ ನೆನಪಿಸಿಕೊಳ್ಳುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುವಾಗ ಬರಲು ಯಾರೂ ಇರಲಿಲ್ಲ ಹಾಗೂ ಪತ್ರ ಬರೆದಿಲ್ಲ ಎಂದು ಕಣ್ಣೀರಿಟ್ಟಾಗ ಸುದೀಪ್ ಸಪೋರ್ಟ್‌ಗೆ ನಿಂತರು.