- Home
- Entertainment
- TV Talk
- 4 ರೊಮ್ಯಾನ್ಸ್, 2 ಲೀವ್ ಇನ್ ರಿಲೇಶನ್‌ಶಿಪ್, 2 ಮದುವೆ, ಲೈಫ್ ಕತೆ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ
4 ರೊಮ್ಯಾನ್ಸ್, 2 ಲೀವ್ ಇನ್ ರಿಲೇಶನ್‌ಶಿಪ್, 2 ಮದುವೆ, ಲೈಫ್ ಕತೆ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ
4 ರೊಮ್ಯಾನ್ಸ್, 2 ಲೀವ್ ಇನ್ ರಿಲೇಶನ್‌ಶಿಪ್, 2 ಮದುವೆ, ಲೈಫ್ ಕತೆ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ, ಈಕೆಯ ಮಾತು ಕೇಳಿ ಇತರ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಅಷ್ಟಕ್ಕೂ ಲವ್ ಹಾಗೂ ಮ್ಯಾರೇಜ್ ಲೈಫ್ ಕುರಿತು ಬಿಗ್ ಬಾಗ್ ಸ್ಪರ್ಧಿ ಹೇಳಿದ್ದೇನು?

ಬಿಗ್ ಬಾಸ್ ಮನೆಯೊಳಗಿನ ಮಾತು ಬಹಿರಂಗ
ಬಿಗ್ ಬಾಸ್ ಮನೆಯೊಳಗಿನ ಮಾತು ಬಹಿರಂಗ
ಬಿಗ್ ಬಾಸ್ ಮನೆಯೊಳಗೆ ಹಲವರು ಹಳೆ ಕತೆಗಳನ್ನು ತೆರೆದಿಟ್ಟು ಭಾರಿ ಸಂಚಲನ ಮೂಡಿಸಿದ್ದಾರೆ. ಪ್ರತಿ ಆವೃತ್ತಿಯಲ್ಲೂ ಈ ರೀತಿಯ ಬೆಳವಣಿಗೆ ಹೊಸದೇನಲ್ಲ. ಆದರೆ ಈ ಬಾರಿ ಮಹಿಳಾ ಬಿಗ್ ಬಾಸ್ ಸ್ಪರ್ಧಿ ಹೇಳಿದ ಲೈಫ್ ಕತೆಗೆ ಇತರ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಬಿಗ್ ಬಾಸ್ 19ರ ಸ್ಪರ್ಧಿ ಕುನಿಕಾ ಸದಾನಂದ್ ತಮ್ಮ ರಿಯಲ್ ಲೈಫ್ ಜರ್ನಿ ಕತೆ ಹೇಳಿದ್ದಾರೆ.
ನಾಲ್ವರ ಜೊತೆ ರೊಮ್ಯಾನ್ಸ್
ನಾಲ್ವರ ಜೊತೆ ರೊಮ್ಯಾನ್ಸ್
ಹಿಂದಿ ಬಿಗ್ ಬಾಸ್ ಶೋದಲ್ಲಿ ಕುನಿಕಾ ಸದಾನಂದ್, ತಮ್ಮ ಡೊಮಿನೆಂಟ್ ವ್ಯಕ್ತಿತ್ವ, ನಿಷ್ಠುರ ಮಾತುಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ಇದರ ನಡುವೆ ಇತರ ಸ್ಪರ್ಧಿಗಳ ಜೊತೆ ತಮ್ಮ ಲೈಫ್ ಕತೆ ಹೇಳಿದ್ದಾರೆ. ತಾವು ನಾಲ್ವರ ಜೊತೆ ರೊಮ್ಯಾನ್ಸ್, ಇಬ್ಬರ ಜೊತೆ ಲೀವ್ ಇನ್ ರಿಲೇಶನ್‌ಶಿಪ್ ಹಾಗೂ ಇಬ್ಬರನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ.
60ರ ವರೆಗೆ ಎಲ್ಲವೂ ಒಕೆ
60ರ ವರೆಗೆ ಎಲ್ಲವೂ ಒಕೆ
ಗೌರವ್ ಖನ್ನ, ಮೃದುಲ್ ತಿವಾರಿ ಹಾಗೂ ಪ್ರನಿತ್ ಮೊರೆ ಜೊತೆ ಮಾತನಾಡುತ್ತಾ ಕುನಿಕಾ ಸದಾನಂದ್ ತಮ್ಮ ಬದುಕಿನ ಕತೆ ಬಿಚ್ಚಿಟ್ಟಿದ್ದಾರೆ. 60ರ ವರೆಗೆ ಎಲ್ಲವೂ ಒಕೆ ಎಂದು ಕುನಿಕಾ ಸದಾನಂದ್ ಹಾಸ್ಯ ಮಾಡಿದ್ದಾರೆ. ನಾಲ್ವರ ಜೊತೆ ರೊಮ್ಯಾನ್ಸ್ ಮಾಡಿದ್ದೇನೆ. ಸಮಯ, ಸಂದರ್ಭಗಳು ಹಾಗಿತ್ತು ಎಂದಿದ್ದಾರೆ.
ಬ್ರೇಕ್ ಬಳಿಕ ನನ್ನ ಸ್ಥಿತಿ ಯಾರಿಗೂ ಬೇಡ
ಬ್ರೇಕ್ ಬಳಿಕ ನನ್ನ ಸ್ಥಿತಿ ಯಾರಿಗೂ ಬೇಡ
ಪ್ರೀತಿಯಲ್ಲಿದ್ದ ಸಂಬಂಧ ಬ್ರೇಕ್ ಅಪ್ ಆಗಿತ್ತು. ಈ ವೇಳೆ ನಾನು ಕುಡಿತ ಚಟ ಶುರು ಮಾಡಿದ್ದೆ. ಪ್ರತಿ ದಿನ ಕುಡಿಯುತ್ತಿದ್ದೆ. ನಾನು ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದೆ, ಎಲ್ಲವನ್ನೂ ಕಳೆದುಕೊಂಡಂತೆ ಆಗಿತ್ತು. ಹೀಗಾಗಿ ಕುಡಿತದ ಹಿಂದೆ ಬಿದ್ದೆ. ಅಂದಿನ ದಿನಗಳು ಅತೀವ ಸಂಕಷ್ಟದಿಂದ ಕೂಡಿತ್ತು ಎಂದು ಕುಮಿಕಾ ಸದಾನಂದ್ ಹೇಳಿದ್ದಾರೆ.
ನಾನು ನಟರನ್ನು ಡೇಟ್ ಮಾಡಿಲ್ಲ
ನಾನು ನಟರನ್ನು ಡೇಟ್ ಮಾಡಿಲ್ಲ
ನಾನು ಹಲವು ಸಂಬಂಧ ಹೊಂದಿದ್ದೆ, ಆದರೆ ನಟರ ಜೊತೆ ಡೇಟಿಂಗ್ ಮಾಡಿಲ್ಲ. ಕಾರಣ ನಟರು ಇತರರನ್ನು ಪ್ರೀತಿಸುವುದು ಕಡಿಮೆ. ಅವರು ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಾರೆ. ತಾವೇ ಮೇಲು, ತಮ್ಮದೇ ಎಲ್ಲಾ ಅನ್ನೋ ಭಾವನೆ ಇರುತ್ತದೆ. ಹೀಗಾಗಿ ನಟರ ಜೊತೆ ಡೇಟಿಂಗ್ ಮಾಡಿಲ್ಲ ಎಂದು ಕುಮಿಕಾ ಸದಾನಂದ್ ಹೇಳಿದ್ದಾರೆ.
ಎರಡು ಮದುವೆ ಡಿವೋರ್ಸ್
ಎರಡು ಮದುವೆ ಡಿವೋರ್ಸ್
ಕುನಿಕಾ ಸದಾನಂದ್ ಮೊದಲ ಹಾಗೂ ಎರಡನೇ ಮದುವೆ ಎರಡೂ ಕೂಡ ಡಿವೋರ್ಸ್‌ನಲ್ಲಿ ಅಂತ್ಯಗೊಂಡಿದೆ. ಮೊದಲ ಮದುವೆ ಅಭಯ್ ಕೊಠಾರಿ ಜೊತೆ ಆಗಿತ್ತು. ಎರಡನೇ ಮದುವೆ ವಿನಯ್ ಲಾಲ್ ಜೊತೆ ನಡೆದಿತ್ತು. ಎರಡು ಮದುವೆಯಲ್ಲಿ ಇಬ್ಬರು ಮಕ್ಕಳಿದ್ದಾರೆ.