- Home
- Entertainment
- TV Talk
- ಯಾವಾಗ ಬೇಕಿದ್ರೂ ಸಾಯಬಹುದಾದ ಹಣ್ಣು ಮುದುಕ ನನ್ನ ಮುಟ್ಟಿದ್ದ: ಬಿಗ್ ಬಾಸ್ ಸ್ಪರ್ಧಿ ಕಣ್ಣೀರು
ಯಾವಾಗ ಬೇಕಿದ್ರೂ ಸಾಯಬಹುದಾದ ಹಣ್ಣು ಮುದುಕ ನನ್ನ ಮುಟ್ಟಿದ್ದ: ಬಿಗ್ ಬಾಸ್ ಸ್ಪರ್ಧಿ ಕಣ್ಣೀರು
ʼಬಿಗ್ ಬಾಸ್ 18ʼ ರಿಯಾಲಿಟಿ ಶೋ ಖ್ಯಾತಿಯ ಎಡಿನ್ ರೋಸ್ ಅವರು 21ನೇ ವಯಸ್ಸಿನಲ್ಲಿ ಆದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಪ್ರಾಜೆಕ್ಟ್‌ವೊಂದಕ್ಕೆ ಸಹಿ ಹಾಕಲು ಆಫೀಸ್‌ಗೆ ಹೋದಾಗ ಮುದುಕನೊಬ್ಬ ಅನುಚಿತವಾಗಿ ಮುಟ್ಟಿದ ಬಗ್ಗೆ ಅವರು ಹೇಳಿದ್ದಾರೆ.

ʼಬಿಗ್ ಬಾಸ್ 18ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರದಲ್ಲಿ ಎಡಿನ್ ರೋಸ್ ಅವರು ಜನಪ್ರಿಯತೆ ಪಡೆದರು. ಈ ನಟಿಯಿಂದಲೇ ಶೋನ ಗ್ಲಾಮರ್ ಹೆಚ್ಚಿತು ಎಂದು ಕೆಲವರು ಭಾವಿಸಿದ್ದರು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು 21ನೇ ವಯಸ್ಸಿನಲ್ಲಿ ಆದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಪ್ರಾಜೆಕ್ಟ್‌ವೊಂದಕ್ಕೆ ಸಹಿ ಹಾಕಲು ಆಫೀಸ್‌ಗೆ ಹೋದಾಗ ಮುದುಕನೊಬ್ಬ ಅನುಚಿತವಾಗಿ ಮುಟ್ಟಿದ ಬಗ್ಗೆ ಅವರು ಮಾತನಾಡಿದ್ದಾರೆ.
“ನನ್ನನ್ನು ಮುದುಕನೊಬ್ಬ ಆಫೀಸ್‌ಗೆ ಕರೆದ. ಅಲ್ಲಿ ಅವನು ಅನುಚಿತವಾಗಿ ಮುಟ್ಟಿದ. ಅವನ ಕೈಗಳು ನನ್ನ ದೇಹದ ಮೇಲೆ ಇತ್ತು. ಅಲ್ಲೆಲ್ಲ ಕ್ಯಾಮರಾ ಕೂಡ ಇದ್ದವು” ಎಂದು ಎಡಿನ್ ರೋಸ್ ಅವರು ಹೇಳಿದ್ದಾರೆ.
“ಆ ಮುದುಕನ ಮನೆಯಲ್ಲಿ ಆಫೀಸ್ ಇತ್ತು. ಅಲ್ಲಿ ಕ್ಯಾಮರಾಗಳು ಇದ್ದರೂ ಕೂಡ ಅವನು ಯಾಕೆ ಹೀಗೆ ಮಾಡಿದ ಅಂತ ಗೊತ್ತಾಗಲಿಲ್ಲ” ಎಂದು ಎಡಿನ್ ಹೇಳಿದ್ದಾರೆ.
“ಆ ಮುದುಕ ಯಾವಾಗ ಬೇಕಿದ್ದರೂ ಸಾಯಬಹುದಿತ್ತು. ಆದರೂ ಈ ರೀತಿ ಮಾಡಿದ್ದು ನನಗೆ ಶಾಕ್ ಆಗಿದೆ. ನಾನು ಊಹಿಸಿಯೂ ಇರಲಿಲ್ಲ” ಎಂದು ಎಡಿನ್ ಹೇಳಿದ್ದಾರೆ.
“ನಾನು ಮೊದಲ ಬಾರಿಗೆ ಅವನ ಆಫೀಸ್‌ಗೆ ಮಧ್ಯಾಹ್ನ ಒಂದು ಗಂಟೆಗೆ ಹೋಗಿದ್ದೆ, ಮರುದಿನ ಏಳು ಗಂಟೆಗೆ ಬಾ ಅಂತ ಅವನು ಹೇಳಿದ್ದನು. ನನ್ನ ಮುಖದ ಹತ್ತಿರ ಬರೋದು, ಕುತ್ತಿಗೆ ಹತ್ತಿರ ಬಂದಿದ್ದು ನೋಡಿ ಭಯ ಆಗಿತ್ತು” ಎಂದು ಎಡಿನ್ ರೋಸ್ ಹೇಳಿದ್ದಾರೆ.