- Home
- Entertainment
- TV Talk
- ಭಗವಂತ-ಮನುಷ್ಯ ಸಂಬಂಧದ ಅರ್ಥ ಹೇಳುವ ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 100 ಸಂಚಿಕೆಗಳ ಸಂಭ್ರಮ
ಭಗವಂತ-ಮನುಷ್ಯ ಸಂಬಂಧದ ಅರ್ಥ ಹೇಳುವ ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 100 ಸಂಚಿಕೆಗಳ ಸಂಭ್ರಮ
ಝೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ ಹತ್ತು ಗಂಟೆಗೆ ಪ್ರಸಾರ ಆಗ್ತಿರೋ ಭೂಮಿಗೆ ಬಂದ ಭಗವಂತ ಧಾರಾವಾಹಿ ( Bhoomige Banda Bhagavantha Serial ) ನೂರು ಸಂಚಿಕೆಗಳನ್ನ ಪೂರೈಸಿದೆ. ಭಗವಂತ ಮತ್ತು ಮನುಷ್ಯನ ಸಂಬಂಧದ ಕತೆ ಇದಾಗಿದ್ದು, ಮಿಡಲ್ ಕ್ಲಾಸ್ ಕತೆಗಳನ್ನ ಹೇಳ್ತಾ ಭಗವಂತ ಮೂಲಕ ಬದುಕಿನ ಅರ್ಥ ಹೇಳ್ತಿರೋ ಮೊದಲ ಸೀರಿಯಲ್ ಇದಾಗಿದೆ.

ಭಗವಂತ ಮತ್ತು ಮನುಷ್ಯನ ಸಂಬಂಧದ ಕತೆ ಇದಾಗಿದ್ದು, ಮಿಡಲ್ ಕ್ಲಾಸ್ ಕತೆಗಳನ್ನ ಹೇಳ್ತಾ ಭಗವಂತ ಮೂಲಕ ಬದುಕಿನ ಅರ್ಥ ಹೇಳ್ತಿರೋ ಮೊದಲ ಸೀರಿಯಲ್ ಇದಾಗಿದೆ.
ಮಿಡಲ್ ಕ್ಲಾಸ್ ಜನರ ಬದುಕಿನ ಜಂಜಾಟದಲ್ಲಿ ದೇವರು ಇದ್ದಾನೆ ಎನ್ನೋದು ಒಂದು ಶಕ್ತಿಯೂ ಹೌದು, ಧೈರ್ಯವೂ ಹೌದು ಎಂಬುದನ್ನು ಈ ಧಾರವಾಹಿ ತುಂಬಾ ಅಚ್ಚುಕಟ್ಟಾಗಿ ಹೇಳಲಾಗಿದೆ.
2023ರ ಮಾರ್ಚ್ 20ರಂದು ಪ್ರಸಾರ ಆರಂಭಿಸಿದ ಈ ಧಾರಾವಾಹಿ ಆರಂಭದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 9.30ಕ್ಕೆ ಪ್ರಸಾರವಾಗುತ್ತಿತ್ತು. ಈಗ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ.
ಖ್ಯಾತ ನಟ, ನಿರ್ದೇಶಕ ನವೀನ್ ಕೃಷ್ಣ ಅವರು ನಾಯಕನ ಪಾತ್ರದಲ್ಲಿ ಮಿಂಚಿದ್ದು, ನಟಿ ಕೃತ್ತಿಕಾ ರವೀಂದ್ರ ನಾಯಕಿಯಾಗಿದ್ದಾರೆ, ಹಿರಿಯ ನಟ ಉಮೇಶ್, ಬಾಲ ಕಲಾವಿದರಾದ ಅಂಕಿತಾ ಜಯರಾಮ್ , ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್ ಮತ್ತು ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ ಹೀಗೆ ದೊಡ್ಡ ತಾರಾಬಳಗ ಈ ಧಾರವಾಹಿಯಲ್ಲಿದೆ.
ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದು, ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿ ವಿ ಸಾಹಿತ್ಯ ರಚಿಸಿದ್ದಾರೆ. ಹೆಸರಾಂತ ಗಾಯಕ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ.
ತಾಂಡವ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ನಿರ್ಮಾಣವಾಗಿದ್ದು, ಆರೂರು ಜಗದೀಶ್ ಪ್ರಧಾನ ನಿರ್ದೇಶಕರಾಗಿದ್ದಾರೆ, ರಾಕೇಶ್ ಈ ಧಾರಾವಾಹಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಸಂಚಿಕೆ ನಿರ್ದೇಶನ ಕುಮಾರ್ ಕೆರಗೋಡು ಇವರದ್ದಾಗಿದೆ.