- Home
- Entertainment
- TV Talk
- Bhagyalakshmi: ತಲೆ ಮೇಲೆ ಚಪ್ಪಡಿ ಕಲ್ಲು ಹಾಕ್ಕೊಂಡ ತಾಂಡವ್: ಕುಡಿದ ಅಮಲಿನಲ್ಲಿ ಆದಿ ಎದುರು ಸತ್ಯ ಕಕ್ಕಿಯೇ ಬಿಟ್ಟ!
Bhagyalakshmi: ತಲೆ ಮೇಲೆ ಚಪ್ಪಡಿ ಕಲ್ಲು ಹಾಕ್ಕೊಂಡ ತಾಂಡವ್: ಕುಡಿದ ಅಮಲಿನಲ್ಲಿ ಆದಿ ಎದುರು ಸತ್ಯ ಕಕ್ಕಿಯೇ ಬಿಟ್ಟ!
ಶ್ರೇಷ್ಠಾಳ ಕುತಂತ್ರದಿಂದ ಮಗಳು ತನ್ವಿ ಕಾಣೆಯಾಗಿದ್ದಕ್ಕೆ ತಾಂಡವ್ ಕಂಗಾಲಾಗಿದ್ದಾನೆ. ಕುಡಿದ ಅಮಲಿನಲ್ಲಿ ಆದಿ ಮುಂದೆಯೇ ಭಾಗ್ಯಳನ್ನು ದೂಷಿಸುತ್ತಾ, ತಾನೇ ತನ್ವಿಯ ತಂದೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಇದರಿಂದ ಭಾಗ್ಯ ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದ ರಹಸ್ಯ ಆದಿ ಮುಂದೆ ಬಯಲಾಗಿದೆ.

ಅಗತ್ಯಕ್ಕಿಂತ ಒಳ್ಳೆಯವಳು
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ (Bhagyalakshmi Serial) ಭಾಗ್ಯ ಅಗತ್ಯಕ್ಕಿಂತ ಹೆಚ್ಚು ಒಳ್ಳೆಯ ನಾಯಕಿ. ತಾಂಡವ್ ತನಗೆ ಎಷ್ಟೇ ಕಷ್ಟ ಕೊಟ್ಟಿದ್ದರೂ, ತನ್ನ ಬದುಕನ್ನು ನರಕ ಮಾಡಿದ್ದರೂ ಆತನಿಗೆ ಕೇಡು ಮಾಡದ ಪತ್ನಿ ಅವಳು.
ಗಂಡನ ಗುಟ್ಟು ಬಿಡದ ಭಾಗ್ಯ
ಇದೇ ಕಾರಣಕ್ಕೆ ತಾಂಡವ್ ನನ್ನ ಗಂಡ ಎನ್ನುವ ವಿಷಯವನ್ನು ಅವಳು ಆದಿಯಿಂದ ಮುಚ್ಚಿಟ್ಟಿದ್ದಾಳೆ. ಒಂದು ವೇಳೆ ಆದಿಗೆ ಈ ವಿಷಯ ಗೊತ್ತಾದರೆ, ತಾಂಡವ್ ಕೆಲಸಕ್ಕೆ ಕುತ್ತು ಮಾತ್ರವಲ್ಲದೇ, ಆದಿ ತಾಂಡವ್ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಧಕ್ಕೆ ಬರುತ್ತದೆ ಎನ್ನುವುದು ಆಕೆಗೆ ಗೊತ್ತು.
ಕುಸುಮಾಳಿಗೂ ತಡೆ
ಖುದ್ದು ಕುಸುಮಾ ಈ ವಿಷಯವನ್ನು ಆದಿಯ ಬಳಿ ಹೇಳಲು ಹೋದಾಗಲೂ ಅದನ್ನು ತಡೆದವಳು ಭಾಗ್ಯ. ಏಕೆಂದರೆ ಆಕೆ ಆದರ್ಶ ಪತ್ನಿಯಾಗಿದ್ದಾಳೆ. ಆದಿಯ ಜೊತೆ ಅವಳ ಮದುವೆಗೆ ಕುಸುಮಾ ಕನಸು ಕಾಣುತ್ತಿದ್ದರೆ, ನನ್ನ ಲೈಫ್‌ನಲ್ಲಿ ಬೇರೆ ಯಾರಿಗೂ ಎಂಟ್ರಿ ಇಲ್ಲ ಎಂದು ಆದಿ ಎದುರೇ ಖಡಾಖಂಡಿತವಾಗಿ ಹೇಳಿದ್ದಾಳೆ ಭಾಗ್ಯ.
ತನ್ವಿ ಕಾಣೆ
ಇವೆಲ್ಲವುಗಳ ನಡುವೆಯೇ ಈಗ ಶ್ರೇಷ್ಠಾಳ ಕುತಂತ್ರದಿಂದಾಗಿ ಭಾಗ್ಯ ಮಗಳ ತನ್ವಿ ಕಾಣೆಯಾಗಿದ್ದಾಳೆ. ಪತ್ನಿಯ ಮೇಲೆ ಪ್ರೀತಿ ಇಲ್ಲದಿದ್ದರೂ ಮಕ್ಕಳ ಮೇಲೆ ಜೀವ ಇಟ್ಟುಕೊಂಡವನು ತಾಂಡವ್. ಈ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾನೆ.
ಭಾಗ್ಯಳಿಗೆ ಬೈದ ತಾಂಡವ್
ಇದೇ ಕಾರಣಕ್ಕೆ ಆಕೆ ಕುಡಿದಿದ್ದಾನೆ. ಆದಿಯ ಎದುರು ಭಾಗ್ಯಳ ವಿರುದ್ಧ ಒಂದೇ ಸಮನೆ ಬೈಗುಳಗಳ ಸುರಿಮಳೆಗೈಯುತ್ತಿದ್ದಾನೆ. ತನ್ವಿಯನ್ನು ಕಳೆದುಕೊಂಡು ಭಾಗ್ಯ ಸಂಕಟಪಡುತ್ತಿದ್ದರೆ, ಇವನಿಗೆ ಏಕೆ ಇಷ್ಟು ಹಿಂಸೆ ಎನ್ನುವುದು ಆದಿಗೆ ಗೊತ್ತಾಗಲಿಲ್ಲ.
ಆದಿಯ ಮುಂದೆ ಭಾಗ್ಯಳ ವಿರುದ್ಧ ಮಾತು
ಕೊನೆಗೆ, ನಿಮಗ್ಯಾಕೆ ಇಷ್ಟು ಸಂಕಟ ಎಂದಾಗ ಕೋಪದಿಂದ ಆದಿ ಇರೋ ವಿಷಯವನ್ನೆಲ್ಲಾ ಕುಡಿದ ಅಮಲಿನಲ್ಲಿ ಹೇಳಿಬಿಟ್ಟಿದ್ದಾರೆ. ಆ ಎಮ್ಮೆ ಭಾಗ್ಯನಿಂದಲೇ ತನ್ವಿ ಕಳೆದು ಹೋಗಿದ್ದಾಳೆ. ಅಮ್ಮನಾಗಿ ಅವಳಿಗೆ ಸ್ವಲ್ಪವೂ ಕಾಳಜಿ ಇಲ್ಲ. ಅಪ್ಪನಾದ ನನಗೆ ಎಷ್ಟು ಸಂಕಟವಾಗ್ತಿದೆ ಎನ್ನೋದು ಅವಳಿಗೆ ಗೊತ್ತಾಗ್ತಿಲ್ಲ ಎಂದಿದ್ದಾನೆ.
ಸತ್ಯದ ಅನಾವರಣ
ಇದನ್ನು ಕೇಳಿ ಆದಿಗೆ ಫುಲ್ ಶಾಕ್ ಆಗಿ ಹೋಗಿದೆ. ಅಲ್ಲಿಗೆ ಭಾಗ್ಯ ಇವನದ್ದೇ ಪತ್ನಿ ಎನ್ನುವುದು ತಿಳಿದಿದೆ. ಅಲ್ಲಿಯೂ ಭಾಗ್ಯ ಎಂಟ್ರಿ ಕೊಟ್ಟು ಏನೋ ಒಂದು ಹೇಳಿ ತಪ್ಪಿಸುತ್ತಾಳೋ ಗೊತ್ತಿಲ್ಲ.
ಮುಂದೇನು?
ಒಟ್ಟಿನಲ್ಲಿ ಇಲ್ಲಿಯವರೆಗಿನ ಸಿಚುಯೇಷನ್‌ನಲ್ಲಿ ತಾಂಡವ್‌ನ ಕುತಂತ್ರ ಬುದ್ಧಿ, ಆತನ ಕೆಟ್ಟ ಗುಣ ಆದಿ ಮುಂದೆ ಅನಾವರಣಗೊಂಡಿದೆ. ಈ ಮೂಲಕ ತನ್ನದೇ ತಲೆಯ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡಿದ್ದಾನೆ ತಾಂಡವ್. ಮುಂದೇನು?