ಕಾಂಪೌಂಡ್ ಹಾರಿಸಿ ಗರ್ಲ್‌ಫ್ರೆಂಡ್‌ನ ಮನೆಯಿಂದ ಎಸ್ಕೇಪ್ ಮಾಡಿದ ಕಿರುತೆರೆ ನಟ ಅರುಣ್!
ಕಾಲೇಜ್ ಲವ್ ಸ್ಟೋರಿನ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಹಂಚಿಕೊಂಡ ಕಿರುತೆರೆ ನಟ ಅರುಣ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ 2 ರಿಯಾಲಿಟಿ ಶೋನಲ್ಲಿ ಮಾಸ್ಟರ್ ಆನಂದ್ ಸಹೋದರ ಅರುಣ್ ಮತ್ತು ಅವರ ಪತ್ನಿ ಮಾಧುರ್ಯ ಸ್ಪರ್ಧಿಸುತ್ತಿದ್ದಾರೆ.
ಈ ವೇಳೆ ತಮ್ಮ ಜೀವನದ ಮರೆಯಲಾಗದ ಘಟನೆಯನ್ನು ರಿವೀಲ್ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಅರುಣ್ ತಮ್ಮ ಗರ್ಲ್‌ಫ್ರೆಂಡ್ ಮಾಧುರ್ಯ ಮತ್ತು ಸ್ನೇಹಿತನನ್ನು ಗ್ರೂಪ್ ಸ್ಟಡಿ ಮಾಡಲು ಕರೆಸಿಕೊಂಡಿದ್ದರಂತೆ.
ಮೂವರು ಮನೆಯಲ್ಲಿ ರುಚಿರಚಿಯಾಗಿ ಅಡುಗೆ ಮಾಡಿಕೊಂಡು ಎಂಜಾಯ್ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಡೋರ್ ಬೇಲ್ ಸೌಂಡ್ ಆಗಿದೆ. ಯಾರು ಅಂತ ಅರುಣ್ ನೋಡಿದ್ದರೆ ಅವರ ತಂದೆ ನಿಂತಿದ್ದಾರೆ.
ಗಾಬರಿಗೊಂಡ ಮೂವರು ಮಾಧುರ್ಯರನ್ನು ಹಿಂದಿನ ಬಾಗಿಲಿನಿಂದ ಕಾಂಪೌಂಡ್ ಹಾರಿಸಿ ಎಸ್ಕೇಪ್ ಮಾಡಿಸಿದ್ದಾರೆ. ಮಜಾ ಏನೆಂದರೆ ಮಾಧುರ್ಯ ಹಿಂದಿನಿಂದ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ.
ಅಲ್ಲದೆ ಮನೆಯಲ್ಲಿ ಏನೋ ನಡೆಯುತ್ತಿದೆ ಪತ್ತೆ ಮಾಡಬೇಕು ಎಂದು ಅರುಣ್ ತಂದೆ ಮಾಧುರ್ಯ ಬಿಟ್ಟಿದ್ದ ಚಪ್ಪಲಿ ಮೇಲೆ ಅವರ ಚಪ್ಪಲಿ ಬಿಟ್ಟಿದ್ದಾರೆ.
ಊಟ ಮಾಡಲು ಮೂರು ತಟ್ಟೆ ಇಟ್ಟುಕೊಂಡಿದ್ದರಂತೆ, ಯಾಕೆ ಮೂರು ತಟ್ಟೆ ಎಂದು ಪ್ರಶ್ನೆ ಮಾಡಿದ್ದರಂತೆ. ಆಗ ಇಲ್ಲ ಅದನ್ನು ಕೆಲಸ ಮಾಡುವ ಆಂಟಿಗೆ ಕೊಡಲು ಎಂದು ಸುಳ್ಳು ಹೇಳಿದ್ದರಂತೆ.
ಒಂದಾದ ಮೇಲೊಂದು ಸುಳ್ಳು ಹೇಳಬೇಕು ಎಂದು ಒಂದು ದಿನ ಅರುಣ್ ಮನೆಯಲ್ಲಿ ಏನಾಯ್ತು ಎಂದು ತಂದೆಗೆ ತಿಳಿಸಿದ್ದಾರೆ. ಅಣ್ಣ ಆನಂದ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮದುವೆಯಾಗಿದ್ದಾರೆ.