Archana Jois: ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿ ಬಿಟ್ರು KGF ಮಮ್ಮಿ
ಕೆಜಿಎಫ್ ಚಿತ್ರದಲ್ಲಿ ರಾಕಿ ಭಾಯಿ ತಾಯಿ ಪಾತ್ರದಲ್ಲಿ ಮಿಂಚಿದ ಅರ್ಚನಾ ಜೋಯಿಸ್ ಗೊತ್ತೇ ಇದೆ ಅಲ್ವಾ? ವಯಸ್ಸಲ್ಲಿ ಚಿಕ್ಕವರಾದರೂ ತಾಯಿಯ ಪಾತ್ರದಲ್ಲಿ ಅದ್ಭುತ ನಟನೆ ನೀಡಿದ್ದರು ಅರ್ಚನಾ ಜೋಯಿಸ್. ಈ ನಟಿ ಈವಾಗ ಏನ್ ಮಾಡ್ತಿದ್ದಾರೆ ನೋಡೋಣ.

ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ನಟಿ ಅರ್ಚನಾ ಜೋಯಿಸ್ ಮತ್ತೆ ಜನಪ್ರಿಯತೆ ಪಡೆದಿದ್ದು, ದೇಶಾದ್ಯಂತ ಹೆಸರು ಮಾಡಿದ್ದು ಮಾತ್ರ ಕೆಜಿಎಫ್ ಚಿತ್ರದ ಮೂಲಕ. ಕೆಜಿಎಫ್ ಚಿತ್ರದಲ್ಲಿ (KGF Film) ರಾಕಿ ಭಾಯಿ ತಾಯಿಯಾಗಿ, ಚಿತ್ರಕತೆಯ ಅಡಿಪಾಯ ಆಗಿ, ಅದ್ಭುತವಾಗಿ ನಟಿಸಿದ್ದರು.
ಝೀ ಕನ್ನಡದ `ಮಹಾದೇವಿ' ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ (smallscreen) ಪ್ರವೇಶಿಸಿದ ಅರ್ಚನಾ ನಂತರ ಸುವರ್ಣ ವಾಹಿನಿಯ `ದುರ್ಗಾ' ಧಾರಾವಾಹಿಯಲ್ಲಿ `ದುರ್ಗಾ' ಪಾತ್ರದ ಮೂಲಕ ಮನೆ ಮಾತಾದರು. ಇವರು ಭರತನಾಟ್ಯ ಕಲಾವಿದೆಯೂ ಹೌದು.
ಬಾಲ್ಯದಲ್ಲಿಯೇ ನೃತ್ಯದಲ್ಲಿ ಆಸಕ್ತಿ ಇದ್ದ ಇವರಿಗೆ `ಮಾಯಾರಾವ್ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಾಫಿ' ಯಿಂದ ನೃತ್ಯದಲ್ಲಿ ಪದವಿ ಪಡೆದರು. ಕಥಕ್ ಮಾತ್ರವಲ್ಲದೇ ಭರತನಾಟ್ಯ, ಇಂಡಿಯನ್ ಮಾರ್ಷಲ್ ಆರ್ಟ್ಸ್ (Martial arts) ಮತ್ತು ಇಂಡಿಯನ್ ಕಾಂಟೆಪರರಿಯನ್ನು ಕಲಿತಿರುವ ಇವರು ಅದ್ಭುತ ನಟಿ ಹೌದು.
ಕೆಜಿಎಫ್ ಚಿತ್ರದ ನಟನೆಗಾಗಿ ಸೈಮಾ ಅತ್ತ್ಯುತ್ತಮ ಪೋಷಕ ಪ್ರಶಸ್ತಿ ಪಡೆದಿರುವ ಅರ್ಚನಾ. ಇದುವರೆಗೆ ದೇಶ -ವಿದೇಶಗಳಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇಂದಿಗೂ ಅವರುಯೋಗ ಮತ್ತು ಜಿಮ್ನಾಸ್ಟಿಕ್ ನಲ್ಲಿ ತಮ್ಮನ್ನೌ ತಾವು ತೊಡಗಿಕೊಂಡಿದ್ದಾರೆ.
ಮಹಾದೇವಿ ಸೀರಿಯಲ್ ನಲ್ಲಿ ಇವರ ಅಮೋಘ ಅಭಿನಯದಿಂದ, ಇವರು ಹೆಚ್ಚಾಗಿ ಪೌರಾಣಿಕ, ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಹಾದೇವಿ, ದುರ್ಗಾ, ನೀಲಿ, ಶ್ರೀ ವಿಷ್ಣು ದಶವತಾರಂ, ಮಹಾಮಾಯಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಿರುತೆರೆಯ ಥಕಧಿಮಿತ ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಸ್ಟಾರ್ ಕಂಟೆಸ್ಟಂಟ್ ಆಗಿ ಭಾಗವಹಿಸಿದ್ದರು.
ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಕೆಜಿಎಫ್ chapter 1, 2 ರಲ್ಲಿ, ವಿಜಯರಥ, ರಾಜ್ ಕುಮಾರ್ ಎಂಬ ಮರಾಠಿ ಚಿತ್ರ, ಹೊಂದಿಸಿ ಬರೆಯಿರಿ ಕನ್ನಡಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಮ್ಯೂಟ್ ಎಂಬ ಚಿತ್ರದಲ್ಲೂ ಇವರು ನಟಿಸಲಿದ್ದಾರೆ.
ಕೆಜಿಎಫ಼್ ಬಳಿಕ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಹಲವಾರು ಸಿನಿಮಾ ಆಫರ್ ಗಳು ಬಂದಿತ್ತಂತೆ, ಆದ್ರೆ ಮತ್ತೆ ಮತ್ತೆ ತಾಯಿ ಪಾತ್ರ ಮಾಡಲು ಇಷ್ಟವಿಲ್ಲದೇ ಇವರು ಅದನ್ನು ನಿರಾಕರಿಸಿದ್ದರಂತೆ. ಬೇರೆ ಭಾಷೆಗಳಿಂದಲೂ ಇವರಿಗೆ ಆಫರ್ ಬಂದಿದ್ದೂ, ಸದ್ಯ ಕನ್ನಡದಲ್ಲಿ ಬ್ಯುಸಿಯಾಗಿರೋದರಿಂದ ಬೇರೆ ಭಾಷೆಗಳಿಂದ ಸ್ವಲ್ಪ ದೂರ ಉಳಿದಿದ್ದಾರೆ.
ಸದ್ಯ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಅರ್ಚನಾ ಜೋಯಿಸ್ ಬ್ಯುಸಿಯಾಗಿದ್ದು. ಹೊಂದಿಸಿ ಬರೆಯಿರಿ ಈಗಾಗಲೇ ಬಿಡುಗಡೆಯಾಗಿದೆ. ಇನ್ನು ಕ್ಷೇತ್ರಪತಿ, ಹ್ಯಾಷ್‌ಟ್ಯಾಗ್, ಮ್ಯೂಟ್ ಸಿನಿಮಾಗಳು ಸಹ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ನಟಿ ಘೋಸ್ಟ್ ಸಿನಿಮಾದಲ್ಲೂ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.