- Home
- Entertainment
- TV Talk
- Anupama Serial: ಅನುಪಮಾ ಅನುಜ್ ಇನ್ಟಿಮೇಟ್ ಸೀನ್ಸ್ ಲೀಕ್, ಫ್ಯಾನ್ಸ್ ಪ್ರತಿಕ್ರಿಯೆ ಇದು!
Anupama Serial: ಅನುಪಮಾ ಅನುಜ್ ಇನ್ಟಿಮೇಟ್ ಸೀನ್ಸ್ ಲೀಕ್, ಫ್ಯಾನ್ಸ್ ಪ್ರತಿಕ್ರಿಯೆ ಇದು!
ಹಿಂದಿ ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಅನುಪಮಾ (Anupama) ಪ್ರತಿ ಮನೆಯಲ್ಲೂ ಪ್ರಸಿದ್ಧ. ವರದಿಗಳ ಪ್ರಕಾರ ಧಾರವಾಹಿಯ ಕಥೆಯಲ್ಲಿ, ಅನುಪಮಾ ಅಂದರೆ ರೂಪಾಲಿ ಗಂಗೂಲಿ ಮತ್ತು ಅನುಜ್ ಅಂದರೆ ಗೌರವ್ ಖನ್ನಾ ಅವರ ಇನ್ಟೀಮೇಟ್ ಸೀನ್‌ಗಳನ್ನು ತೋರಿಸಲಾಗುತ್ತದೆ. ಈಗಾಗಲೇ ಇಬ್ಬರ ನಡುವಿನ ಚುಂಬನದ ದೃಶ್ಯದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಹೇಗೆ ರಿಯಾಕ್ಟ್ ಮಾಡಿದ್ದಾರೆ ನೋಡಿ.

ಅನುಪಮಾ-ಅನುಜ್ ಕೌಟುಂಬಿಕ ಕಲಹಗಳಿಂದ ಒಬ್ಬರಿಗೊಬ್ಬರು ಸಮಯ ನೀಡಲು ಸಾಧ್ಯವಾಗಲಿಲ್ಲ ಮತ್ತು ಈಗ ಇಬ್ಬರೂ ಎಲ್ಲವನ್ನೂ ಮರೆತು ಹೊಸ ಆರಂಭ ಮಾಡಲು ಹೊರಟಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.
ಅನುಪಮಾ ಧಾರಾವಾಹಿಯ ಕಥೆಯಲ್ಲಿ ಈಗ ಅನುಜ್ ಮತ್ತು ಅನುಪಮಾ ಅನ್ಯೋನ್ಯವಾಗಿರುವುದನ್ನು ಕಾಣಬಹುದು. ಮುಂಬರುವ ಎಪಿಸೋಡ್‌ನಲ್ಲಿ ಅನುಪಮಾ ಅವರು ಕಳೆದ ವರ್ಷ ಏನಾಯಿತು ಎಂಬುದನ್ನು ಮರೆತು ಹೊಸದಾಗಿ ಪ್ರಾರಂಭಿಸಲು ಬಯಸುತ್ತಿರುವ ಕಾರಣ ಅನುಜ್‌ಗಾಗಿ ರೋಮ್ಯಾಂಟಿಕ್ ಡೇಟ್ ಯೋಜಿಸಿದ್ದಾರೆ ಎಂದು ನೋಡಬಹುದು.
ಲೀಕ್ ಆಗಿ ವೈರಲ್ ಆಗಿರುವ ಫೊಟೋಗಳಲ್ಲಿ ಅನುಪಮಾ ಮತ್ತು ಅನುಜ್ ಪರಸ್ಪರ ಪ್ರೀತಿಯಲ್ಲಿ ಕಳೆದುಹೋಗಿರುವುದನ್ನು ಕಾಣಬಹುದು. ಇದನ್ನು ನೋಡಿದಾಗ ಈ ಶೋನ ಹೊಸ ಕಂತುಗಳಲ್ಲಿ ವೀಕ್ಷಕರು ಪ್ರಣಯದ ಛಾಯೆಯನ್ನು ನೋಡುತ್ತಾರೆ.
Image: Stills from the show
ಅನುಜ್ ಮತ್ತು ಅನುಪಮಾ ಅವರ ಚುಂಬನದ ದೃಶ್ಯವನ್ನು ನೋಡಿ ಫ್ಯಾನ್ಸ್ ಹೀಗೆ ಕಾಮೆಂಟ್ ಮಾಡಿದ್ದಾರೆ- ಅನುಪಮಾ ತುಂಬಾ ಸುಂದರವಾಗಿದ್ದಾರೆ. ಟ್ರ್ಯಾಕ್ ನಿಜವಾಗಿಯೂ ಒಂದು ತಿರುವನ್ನು ತೆಗೆದುಕೊಳ್ಳುತ್ತಿದೆ, ಅಲ್ಲಿ #MaAn ಅವರ ಭಾವನೆಗಳು ಅವರ ಸಂಬಂಧವು ಗಟ್ಟಿಯಾಗುತ್ತಿದೆ ಎಂದು ಭಾವಿಸಬಹುದು ಎಂದು ಬರೆದ್ದಾರೆ.
ಅದೇ ಸಮಯದಲ್ಲಿ, ಕೆಲವರು ಈ ದೃಶ್ಯವನ್ನು ಹಾಟ್ ಮತ್ತು ರೊಮ್ಯಾಂಟಿಕ್ ಎಂದು ವಿವರಿಸಿದ್ದಾರೆ. ಕೆಲವರು ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಸಹ ಹಂಚಿಕೊಂಡಿದ್ದಾರೆ.
2020 ರಲ್ಲಿ ಪ್ರಾರಂಭವಾದ ಅನುಪಮಾ ಧಾರಾವಾಹಿ ಕೆಲವೇ ಸಮಯದಲ್ಲಿ ಮನೆಮಾತಾಗಿದೆ. ಕಾರ್ಯಕ್ರಮದ ಪ್ರಮುಖ ನಟಿ ರೂಪಾಲಿ ಗಂಗೂಲಿ ಈಗ ಅನುಪಮಾ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಈ ಮೂರು ವರ್ಷಗಳಲ್ಲಿ, ಕೆಲವು ತಾರೆಯರು ಸಹ ಪ್ರದರ್ಶನದಿಂದ ಹೊರಗುಳಿದರೂ ಇನ್ನೂ ಧಾರಾವಾಹಿ ಟಿಆರ್‌ಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿಯೇ ಉಳಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.