MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅನುಪಮಾ ಗೌಡ ಆತ್ಮಹತ್ಯೆಗೆ ಯೋಚಿಸಿದ್ದೇಕೆ? ನಿರೂಪಕಿಯಾಗಿ ಪಡೆಯೋ ಸಂಬಳ ಎಷ್ಟು?

ಅನುಪಮಾ ಗೌಡ ಆತ್ಮಹತ್ಯೆಗೆ ಯೋಚಿಸಿದ್ದೇಕೆ? ನಿರೂಪಕಿಯಾಗಿ ಪಡೆಯೋ ಸಂಬಳ ಎಷ್ಟು?

ನಟಿ, ನಿರೂಪಕಿ ಅನುಪಮಾ ಗೌಡ ರ್ಯಾಪಿಡ್ ರಶ್ಮಿಯೊಂದಿಗಿನ ಸಂದರ್ಶನದಲ್ಲಿ ತಮ್ಮ ಆತ್ಮಹತ್ಯೆ ಯೋಚನೆ, ಸೋಲುಗಳು, ಸ್ನೇಹಿತರು, ಬದುಕು, ಸಂಭಾವನೆ ಎಲ್ಲ ವಿಷಯಗಳ ಬಗ್ಗೆಯೂ ಹಂಚಿಕೊಂಡಿದ್ದಾರೆ. 

2 Min read
Author : Suvarna News
| Updated : Apr 30 2024, 12:55 PM IST
Share this Photo Gallery
  • FB
  • TW
  • Linkdin
  • Whatsapp
110

ನಟಿ, ನಿರೂಪಕಿ ಅನುಪಮಾ ಗೌಡ ಅಂದ್ರೆ ಬಹಳ ಸ್ಟ್ರಾಂಗ್, ಸ್ವಾವಲಂಬಿ ಮಹಿಳೆ ಎಂದು ಸಾಮಾನ್ಯ ಜನರ ನಂಬಿಕೆ. ಆದರೆ, ಆಕೆಯೂ ಒಮ್ಮೆ ಆತ್ಮಹತ್ಯೆಗೆ ಯೋಚಿಸಿದ್ದು, ಹಲವು ಸಮಯ ಖಿನ್ನತೆಯಲ್ಲಿದ್ದರು. 

210

ಇದಕ್ಕೆ ಲವ್ ಬ್ರೇಕಪ್ ಕಾರಣ ಎಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ. ಆದರೆ, ಅದೊಂದೇ ಅಲ್ಲ ಎಂದಿದ್ದಾರೆ ಅನು. ರ್ಯಾಪಿಡ್ ರಶ್ಮಿಯೊಂದಿಗಿನ ಸಂದರ್ಶನದಲ್ಲಿ ನಟಿ, ನಿರೂಪಕಿ ತಮ್ಮ ಜೀವನದ ಅನೇಕ ವಿಷಯಗಳ ಕುರಿತಾಗಿ ಮಾತನಾಡಿದ್ದಾರೆ. 

310

ಸುಮಾರು 7-8 ವರ್ಷಗಳ ಹಿಂದಿನ ಮಾತು. ಅನುಪಮಾ ಆಗ ಅಕ್ಕ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗ ಡಬಲ್ ಆ್ಯಕ್ಟ್ ಮಾಡುತ್ತಿದ್ದ ನಟಿಯ ಒಂದು ಪಾತ್ರ ಸಂಪೂರ್ಣ ನೆಗೆಟಿವ್ ಶೇಡ್‌ನದು. 

410

ಈ ಪಾತ್ರ ಅವರ ದಿನದ ಮೇಲೆ ಸಾಕಷ್ಟು ಪರಿಣಾಮ ಬೀರಲಾಂಭಿಸಿತ್ತಂತೆ. ಶೂಟಿಂಗ್ ಮುಗಿಸಿ ಮನೆಗೆ ಹೋದಾಗ ಅಪ್ಪ ಅಮ್ಮ ಮಾತಾಡಿದರೂ ವಸ್ತುಗಳನ್ನು ಎಸೆಯುವಷ್ಟು ಪಾತ್ರದಲ್ಲಿ ಮುಳುಗಿ ಹೋಗಿದ್ದರಂತೆ.

510

ಇದರೊಂದಿಗೆ ಬಿಸ್ನೆಸೊಂದಕ್ಕೆ ಕೈ ಹಾಕಿ ಸುಮಾರು 70 ಲಕ್ಷ ರೂ.ಗಳಷ್ಟು ಕಳೆದುಕೊಂಡಿದ್ದು ಕೂಡಾ ಅನುಪಮಾ ಖಿನ್ನತೆಗೆ ಜಾರಲು ಕಾರಣವಾಗಿತ್ತು. ಇನ್ನು ಅಕ್ಕ ಧಾರಾವಾಹಿಯ ಶೂಟಿಂಗ್ ತಿಂಗಳಿಗೆ ಕೇವಲ 10 ದಿನ ನಡೆದರೆ ಆಕೆಯ ಕೈಗೆ 20,000 ಬರುತ್ತಿತ್ತು. ಈ ಎಲ್ಲ ಕಾರಣಗಳು ಸೇರಿ ನಟಿ ಕುಗ್ಗಿ ಹೋಗಿದ್ದರು. 

610

ಈ ಸಂದರ್ಭದಲ್ಲಿ ಸದಾ ಜೊತೆಯಾಗಿ ನಿಂತಿದ್ದು ಸ್ನೇಹಿತರು ಎನ್ನುವ ಅನುಪಮಾ, ಅವರ ಪಾತ್ರ ತನ್ನ ಬದುಕಿನಲ್ಲಿ ಸಾಕಷ್ಟಿದೆ ಎಂದು ಹೇಳಿದ್ದಾರೆ. 

710

ಅನುಪಮಾ ಸಂಭಾವನೆಗಳೆಷ್ಟು?

ನಟಿಯಾಗಿ, ನಿರೂಪಕಿಯಾಗಿ ತಾವು ಪಡೆದ ಸಂಭಾವನೆ ವಿಚಾರವನ್ನೂ ನೇರವಾಗಿ ಹಂಚಿಕೊಂಡಿದ್ದಾರೆ ಅನು. ಅವರು ಆರಂಭದಲ್ಲಿ ರಿಯಾಲಿಟಿ ಶೋವೊಂದರಲ್ಲಿ ಮಾಡಿದಾಗ 30000 ರೂ. ಪಡೆದಿದ್ದರಂತೆ. 

810

ನಂತರ ಅಣ್ಣತಂಗಿ ಧಾರಾವಾಹಿಗೆ ದಿನವೊಂದರ ಶೂಟಿಂಗ್‌ಗೆ 2,500 ರೂ.ಗಳನ್ನೂ, ಅಕ್ಕ ಧಾರಾವಾಹಿಗೆ 2000 ರೂ.ಗಳನ್ನೂ ಪಡೆಯುತ್ತಿದ್ದರಂತೆ. ಆದರೆ ಶೂಟಿಂಗ್ ಇರುತ್ತಿದ್ದುದೇ ತಿಂಗಳಲ್ಲಿ 10-12 ದಿನಗಳು, ಹೀಗಾಗಿ ಹಣ ಸಾಲುತ್ತಿರಲಿಲ್ಲ ಎಂದಿದ್ದಾರೆ. 

910

ಬಿಗ್ ಬಾಸ್ ಬಳಿಕ ನಿರೂಪಣೆಗೆ ಇಳಿದ ಅನುಪಮಾಗೆ ದಿನವೊಂದರ ನಿರೂಪಣೆಗೆ ಆರಂಭದಲ್ಲಿ 30,000 ರೂ. ಸಿಗುತ್ತಿತ್ತು. ಪ್ರತಿ ಶೋಗೂ ಇದು ಶೇ,10ರಷ್ಟು ಹೆಚ್ಚುತ್ತಾ ಹೋಗಿದೆಯಂತೆ. 

1010

ಈಗ ಹಣ ಚೆನ್ನಾಗಿ ಹರಿದು ಬರುತ್ತಿದೆ, ಆದರೆ ಅಷ್ಟೇ ಕಮಿಟ್‌ಮೆಂಟ್‌ಗಳೂ ಇವೆ ಎನ್ನುವ ನಟಿ, ಈಗಲೂ ಕೆಲವೊಮ್ಮೆ ತಮ್ಮ ಆಪ್ತರಿಗಾಗಿ 30,000 ರೂಗಳಿಗೂ ನಿರೂಪಣೆ ಮಾಡಿಕೊಡುತ್ತೇನೆ ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಅನುಪಮಾ ಗೌಡ
ನಟಿ

Latest Videos
Recommended Stories
Recommended image1
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!
Recommended image2
Bhargavi LLB Serial ಮುಗಿಯಲಿದೆ ಎನ್ನುವಷ್ಟರಲ್ಲಿ ಹೊಸ ಅವತಾರದಲ್ಲಿ ಬಂದ ಭಾರ್ಗವಿ!
Recommended image3
Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved