- Home
- Entertainment
- TV Talk
- ರಾಣಿ ಡೈಲಾಗ್ ಕೇಳಿ ಸೌತ್‌ನ ಈ ಸೂಪರ್ ಸ್ಟಾರ್ ಸಿನಿಮಾ ನೆನಪಾಯ್ತಂತೆ, ಯಾವ್ದು ಅಂತ ನಿಮ್ಗೆ ಗೊತ್ತಾಯ್ತಾ?
ರಾಣಿ ಡೈಲಾಗ್ ಕೇಳಿ ಸೌತ್‌ನ ಈ ಸೂಪರ್ ಸ್ಟಾರ್ ಸಿನಿಮಾ ನೆನಪಾಯ್ತಂತೆ, ಯಾವ್ದು ಅಂತ ನಿಮ್ಗೆ ಗೊತ್ತಾಯ್ತಾ?
Famous movie lines: ಈಗ ರಾಣಿ-ಮನು ಮೊದಲಿನಂತಿಲ್ಲ. ನಾಗೇಗೌಡ, ಅವನ ಹೆಂಡತಿ, ತಮ್ಮ ಸೋಮೇಗೌಡ ಹಾಗೂ ಅಜ್ಜಿಗೆ ಸರಿಯಾಗಿ ಬುದ್ಧಿ ಕಲಿಸಲು ಸರಿಯಾಗಿ ಪ್ಲಾನ್ ಮಾಡಿಕೊಂಡೇ ಬಂದಿರುವಂತೆ ಕಾಣುತ್ತಿದೆ.

ನಾಗೇಗೌಡನ ಪ್ಲಾನ್
ಊರಿನ ಹಬ್ಬದ ಸಮಯದಲ್ಲಿ ಆಸ್ತಿಗಾಗಿ ರಾಣಿ-ಮನುವನ್ನ ಸಾಯಿಸಲು ನಾಗೇಗೌಡ ಮತ್ತು ಮನೆಯವರು ಪ್ಲಾನ್ ಮಾಡಿದ್ದರು. ಆದರೆ ಅವರ ಪ್ಲಾನ್ ಫ್ಲಾಫ್ ಮಾಡಿದವಳು ನಮ್ಮ ಪಾರು. ಬೊಂಬೆಯ ಹಿಂದೆ ರಾಣಿ-ಮನುವನ್ನ ಕಟ್ಟಿ ಹಾಕಿ, ಬೊಂಬೆಗೆ ಬೆಂಕಿ ಹಚ್ಚಿದಾಗ ಅವರಿಬ್ಬರನ್ನ ಸಾಯಿಸುವುದು ನಾಗೇಗೌಡನ ಪ್ಲಾನ್ ಆಗಿತ್ತು.
ರಾಣಿ-ಮನು ಮೊದಲಿನಂತಿಲ್ಲ
ಆದರೆ ಹೇಗೋ ಪಾರು ಆ ಸಮಯಕ್ಕೆ ಅಲ್ಲಿಗೆ ಬಂದಾಗ ಬೊಂಬೆಯ ಹಿಂದೆ ಹಗ್ಗದ ಹಿಂದೆ ಕಟ್ಟಿ ಹಾಕಿದ್ದ ಮನು-ರಾಣಿಯನ್ನ ಕಾಪಾಡಿ, "ನೀವು ಬೆಂಕಿಚೆಂಡುಗಳಾಗಿ ಮನೆಗೆ ಕಾಲಿಡಬೇಕು" ಎನ್ನುತ್ತಾಳೆ. ಅಂತೆಯೇ ಈಗ ರಾಣಿ-ಮನು ಮೊದಲಿನಂತಿಲ್ಲ. ನಾಗೇಗೌಡ, ಅವನ ಹೆಂಡತಿ, ತಮ್ಮ ಸೋಮೇಗೌಡ ಹಾಗೂ ಅಜ್ಜಿಗೆ ಸರಿಯಾಗಿ ಬುದ್ಧಿ ಕಲಿಸಲು ಸರಿಯಾಗಿ ಪ್ಲಾನ್ ಮಾಡಿಕೊಂಡೇ ಬಂದಿರುವಂತೆ ಕಾಣುತ್ತಿದೆ.
ಸ್ಟಾರ್ ಸಿನಿಮಾ ನೆನಪಾಯ್ತು
ಸದ್ಯ ಒಂದು ಪ್ರೊಮೊ ಬಿಡಲಾಗಿದೆ. ಅದರಲ್ಲಿ ಮನು-ರಾಣಿ ಪೆದ್ದ ನಾಗೇಗೌಡನ ಕಾಲು ಒತ್ತುತ್ತಾ ಅವನಿಗೆ ಪುಸಲಾಯಿಸುತ್ತಿದ್ದಾರೆ. ನಿನಗೆ ಈ ಮನೆಯಲ್ಲಿ ಪ್ರಾಮುಖ್ಯತೆಯೇ ಇಲ್ಲ. ಊರಿನಲ್ಲಿ ಒಳ್ಳೆಯ ಹೆಸರಿದೆ ಎಂದು ಹೇಳುತ್ತಿದ್ದಾರೆ. ಅವರ ಈ ಮಾತು ಸೋಮೇಗೌಡನಿಗೆ ಸರಿ ಅನಿಸಿದೆ. ಸದ್ಯ ರಾಣಿಯ ಡೈಲಾಗ್ ಕೇಳಿದ ವೀಕ್ಷಕರು ನಮ್ಮ ಕನ್ನಡದ ಸೂಪರ್ ಸ್ಟಾರ್ ಸಿನಿಮಾವನ್ನ ನೆನಪಿಸಿಕೊಳ್ಳುತ್ತಿದ್ದಾರೆ.
ಮೋಜುಗಾರ-ಸೊಗಸುಗಾರ ಸಿನಿಮಾ
ಹೌದು. ರಾಣಿಯ ಡೈಲಾಗ್ ಕೇಳಿದ ವೀಕ್ಷಕರಿಗೆ ಮೋಜುಗಾರ-ಸೊಗಸುಗಾರ ಸಿನಿಮಾ ನೆನಪಾಗಿದೆ. ನಟ ಡಾ. ವಿಷ್ಣುವರ್ಧನ್ ಅವರ ಕರಿಯರ್‌ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಿವೆ. ಅಂತಹ ಸಿನಿಮಾಗಳ ಸಾಲಿನಲ್ಲಿ 'ಮೋಜುಗಾರ ಸೊಗಸುಗಾರ' ಕೂಡ ಸೇರುತ್ತದೆ. 1995ರಲ್ಲಿ ತೆರೆಕಂಡ ಈ ಚಿತ್ರವನ್ನು ವಿಜಯ್ ರೆಡ್ಡಿ ನಿರ್ದೇಶನ ಮಾಡಿದ್ದರು.
ಅದ್ಭುತ ನಟನೆ
ಇನ್ನು ಮೋಜುಗಾರ ಸೊಗಸುಗಾರ' ಸಿನಿಮಾದ ಕಥೆಯ ಬಗ್ಗೆ ಹೇಳುವುದಾದರೆ ಇದು ಅವಳಿ ಸಹೋದರರ ಕಥೆಯಾಗಿದ್ದು, ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿ ವಿಜಯ್ ಮುಗ್ಧ, ವಿನೋದ್ ಮಾಸ್ ಹುಡುಗ. ಶ್ರೀಮಂತ ಕುಟುಂಬದಲ್ಲಿ ವಿಜಯ್ ಬೆಳೆದರೆ, ಹಳ್ಳಿಯಲ್ಲಿ ವಿನೋದ್ ವಾಸ ಮಾಡುತ್ತಿರುತ್ತಾನೆ. ಚಿತ್ರದಲ್ಲಿ ಇವರಿಬ್ಬರು ಹೇಗೆ ಒಂದಾಗುತ್ತಾರೆ? ಅವಳಿ ಸಹೋದರರು ಬೇರೆಯಾಗಲು ಕಾರಣವೇನು? ಎಂಬ ಕುತೂಹಲಗಳೊಂದಿಗೆ ಈ ಸಿನಿಮಾ ಸಾಗುತ್ತದೆ. ಎರಡು ಬೇರೆ ಬೇರೆ ಶೇಡ್‌ಗಳುಳ್ಳ ದ್ವಿಪಾತ್ರದಲ್ಲಿ ವಿಷ್ಣುವರ್ಧನ್ ಅವರು ಅದ್ಭುತವಾಗಿ ನಟಿಸಿದ್ದರು.
ಕಾಮೆಂಟ್‌ನಲ್ಲಿ ಏನಿದೆ?
ಈ ಚಿತ್ರದಂತೆ ಅಣ್ಣಯ್ಯ ಧಾರಾವಾಹಿಯಲ್ಲೂ ರಾಣಿ-ಮನು ಈಗ ಫುಲ್ ಮಾಸ್ ಆಗಿ ಮನೆಗೆ ತೆಳಿದ್ದಾರೆ. ಅದು ಮನೆಯವರಿಗೆ ಗೊತ್ತಾಗುತ್ತಿಲ್ಲ. ಅದು ಯಾವ ಲೆವೆಲ್‌ಗೆ ಅಂದ್ರೆ ಮನು ಈಗ ಪೆದ್ದನಾಗಿ ಉಳಿದಿಲ್ಲ. ರಾಣಿ ಸೈಲೆಂಟಾಗಿ ಕಾಣಿಸ್ತಿಲ್ಲ. ಈ ಕುರಿತು ವೀಕ್ಷಕರ ಅನಿಸಿಕೆ ಹೀಗಿದೆ.. "ಸೂಪರ್ ರಾಣಿ ಮೋಜುಗಾರ ಸೊಗಸುಗಾರ ಮೂವಿ ಡೈಲಾಗ್ ಹೊಡಿತಿದಿಯಾ", "ರಾಣಿ ನೀನು ನಿನ್ನ ಮಾತು ಸೂಪರ್. ಹಾಗಾದ್ರೆ ತಾನೆ ಮನೆ ಹಾಳರಿಗೆ ಕಿಚ್ಚು ಹಚ್ಚಲು ಸಾಧ್ಯ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನ ನೋಡಬಹುದು.