- Home
- Entertainment
- TV Talk
- ಕನ್ನಡಕ್ಕೆ ಅನುಶ್ರೀ ಹೇಗೋ ತೆಲುಗಿಗೆ ಸುಮಾ ಕನಕಾಲ ಬೆಸ್ಟ್ ಆ್ಯಂಕರ್; ಈ ಕಾರಣಕ್ಕೆ ನಿರೂಪಣೆಗೆ ಗುಡ್‌ಬೈ!
ಕನ್ನಡಕ್ಕೆ ಅನುಶ್ರೀ ಹೇಗೋ ತೆಲುಗಿಗೆ ಸುಮಾ ಕನಕಾಲ ಬೆಸ್ಟ್ ಆ್ಯಂಕರ್; ಈ ಕಾರಣಕ್ಕೆ ನಿರೂಪಣೆಗೆ ಗುಡ್‌ಬೈ!
ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಬೆಸ್ಟ್ ಆ್ಯಂಕರ್ ಅನುಶ್ರೀ ಹೇಗೋ ಟಾಲಿವುಡ್‌ಗೆ ಸುಮಾ ಕನಕಾಲ ಫೇಮಸ್ ಆ್ಯಂಕರ್ ಆಗಿದ್ದಾರೆ. ಸಿನಿಮಾ ರಿಲೀಸ್ ಈವೆಂಟ್‌ಗಳನ್ನ ಸುಮಾ ಕಾರ್ಯಕ್ರಮ ನಿರ್ವಹಿಸಿದರೆ, ಅದಕ್ಕೊಂದು ಕಿಕ್ ಇರುತ್ತದಂತೆ. ಹಲವು ಹೀರೋಗಳ ಸಿನಿಮಾ ರಿಲೀಸ್ ಈವೆಂಟ್‌ಗಳಿಗೆ ಸುಮಾ ಅವರೇ ಆ್ಯಂಕರ್ ಆಗಿರುತ್ತಾರೆ. ಆದರೆ, ಈಗ ಈ ಒಂದು ಕಾರಣಕ್ಕೆ ನಿರೂಪಣೆಗೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ.

ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಬೆಸ್ಟ್ ಆ್ಯಂಕರ್ ಅನುಶ್ರೀ ಹೇಗೋ ಟಾಲಿವುಡ್‌ಗೆ ಸುಮಾ ಕನಕಾಲ ಫೇಮಸ್ ಆ್ಯಂಕರ್ ಆಗಿದ್ದಾರೆ. ಸಿನಿಮಾ ರಿಲೀಸ್ ಈವೆಂಟ್‌ಗಳನ್ನ ಸುಮಾ ಕಾರ್ಯಕ್ರಮ ನಿರ್ವಹಿಸಿದ್ರೆ, ಅದಕ್ಕೊಂದು ಕಿಕ್ ಇರುತ್ತೆ. ಹಲವು ಹೀರೋಗಳ ಸಿನಿಮಾ ರಿಲೀಸ್ ಈವೆಂಟ್‌ಗಳಿಗೆ ಸುಮಾ ಅವರೇ ಆ್ಯಂಕರ್ ಆಗಿರಬೇಕು ಅನ್ನೋ ಸೆಂಟಿಮೆಂಟ್ ಇದೆ. ಸಂದರ್ಭಕ್ಕೆ ತಕ್ಕಂತೆ ಹಾಸ್ಯ ಮಾಡ್ತಾ, ನಗ್ತಾ, ಚಟುವಟಿಕೆಯಿಂದ ಕಾರ್ಯಕ್ರಮ ನಿರ್ವಹಿಸೋದ್ರಲ್ಲಿ ಸುಮಾ ನಿಸ್ಸೀಮರು. ಸುಮಾ ಕಾರ್ಯಕ್ರಮ ನಿರ್ವಹಿಸಿದ್ರೆ ಯಾರಿಗೂ ಬೋರ್ ಆಗೋದಿಲ್ಲ ಅನ್ನೋ ಅಭಿಪ್ರಾಯ ಇದೆ.
ನಮ್ಮ ಅನುಶ್ರೀ ಅವರಂತೆ ಟಾಲಿವುಡ್‌ನಲ್ಲಿ ಆ್ಯಂಕರ್‌ಗಳು ಆ್ಯಂಕರಿಂಗ್‌ಗೆ ಸೀಮಿತವಾಗಿಲ್ಲ. ನಟನೆಯಲ್ಲೂ ಮಿಂಚಬೇಕು ಅಂತ ಬಯಸ್ತಾರೆ. ಹಲವು ಆ್ಯಂಕರ್‌ಗಳು ನಟನೆಯಲ್ಲೂ ಯಶಸ್ಸು ಗಳಿಸಿದ್ದಾರೆ. ಅನಸೂಯ ಈಗ ಬೇಡಿಕೆಯ ಪೋಷಕ ನಟಿ. ರಂಗಸ್ಥಳಂ, ಪುಷ್ಪ, ಕ್ಷಣಂ ಸಿನಿಮಾಗಳು ಅನಸೂಯಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಶ್ರೀಮುಖಿ ಕೂಡಾ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಆ್ಯಂಕರ್ ಪ್ರದೀಪ್ ಹೀರೋ ಆಗಿ ಅದೃಷ್ಟ ಪರೀಕ್ಷೆ ಮಾಡ್ಕೊಳ್ತಿದ್ದಾರೆ.
ಶ್ಯಾಮಲ, ಝಾನ್ಸಿ ಹೀಗೆ ಹಲವು ಆ್ಯಂಕರ್‌ಗಳು ನಟಿಯರಾಗಿ ಯಶಸ್ಸು ಗಳಿಸಿದ್ದಾರೆ. ಆದ್ರೆ ಸುಮಾ ಮಾತ್ರ ಆ್ಯಂಕರಿಂಗ್ ಮೇಲೆಯೇ ಹೆಚ್ಚು ಗಮನ ಹರಿಸಿದ್ದಾರೆ. ಹಿಂದೆ ಸುಮಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಆ ಪಾತ್ರಗಳು ಅಷ್ಟಾಗಿ ಹೆಸರು ತಂದುಕೊಡಲಿಲ್ಲ. ಎರಡು ವರ್ಷಗಳ ಹಿಂದೆ 'ಜಯಮ್ಮ ಪಂಚಾಯಿತಿ' ಸಿನಿಮಾದಲ್ಲಿ ಲೀಡ್ ರೋಲ್ ಮಾಡಿದ್ರು. ಆಮೇಲೆ ಬೇರೆ ಯಾವ ಸಿನಿಮಾಗೂ ಸೈನ್ ಮಾಡಿರಲಿಲ್ಲ.
ಈಗ ಸುಮಾ ಒಂದು ಹೊಸ ಸಿನಿಮಾಗೆ ಸೈನ್ ಮಾಡಿದ್ದಾರೆ. ಆದ್ರೆ ಲೀಡ್ ರೋಲ್ ಅಲ್ಲ. ಒಂದು ಮುಖ್ಯ ಪಾತ್ರದಲ್ಲಿ ನಟಿಸ್ತಿದ್ದಾರಂತೆ. ಪ್ರಿಯದರ್ಶಿ, ಆನಂದಿ ಹೀರೋ ಹೀರೋಯಿನ್. ಈ ಸಿನಿಮಾದಲ್ಲಿ ಸುಮಾ ಪವರ್‌ಫುಲ್ ರೋಲ್ ಮಾಡ್ತಿದ್ದಾರಂತೆ. ಪಾತ್ರ ಚೆನ್ನಾಗಿದೆ ಅಂತ ಸುಮಾ ಒಪ್ಪಿಕೊಂಡಿದ್ದಾರೆ. ಏಷ್ಯನ್ ಸುನಿಲ್ ಕುಮಾರ್ ಪುತ್ರಿ ಜಾನ್ವಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ, ರಾಣಾ ದಗ್ಗುಬಾಟಿ ಈ ಸಿನಿಮಾ ಪ್ರೆಸೆಂಟರ್.
ನವನೀತ್ ಶ್ರೀರಾಮ್ ಅನ್ನೋ ಹೊಸ ನಿರ್ದೇಶಕ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಪೂಜೆಗೆ ಸಂದೀಪ್ ವಂಗಾ ಬಂದಿದ್ರು. ಈ ಸಿನಿಮಾ ಹಿಟ್ ಆದ್ರೆ, ಸುಮಾ ಕನಕಾಲಗೆ ಇನ್ನೂ ಹೆಚ್ಚು ಆಫರ್‌ಗಳು ಬರುತ್ತೆ. ಆಗ ಸುಮಾ ಕೂಡಾ ಅನಸೂಯ ತರ ಆ್ಯಂಕರಿಂಗ್ ಬಿಟ್ಟುಬಿಡಬಹುದು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.