ಅಮ್ಮ, ಮಗನ ಜೊತೆ ಕಾಮಾಕ್ಯ ದೇವಿ ದರ್ಶನ ಪಡೆದ ನಟಿ, ನಿರೂಪಕಿ ಜಾಹ್ನವಿ
ನಟಿ ಮತ್ತು ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಜಾಹ್ನವಿ ಇದೀಗ ತಮ್ಮ ಶೂಟಿಂಗ್ ನಿಂದ ಬ್ರೇಕ್ ಪಡೆದು ತಮ್ಮ ತಾಯಿ ಮತ್ತು ಮಗನ ಜೊತೆಗೆ ಅಸ್ಸಾಂನ ವಿವಿಧ ಸುಂದರ ಜಾಗಗಳಲ್ಲಿ ಟ್ರಾವೆಲ್ ಮಾಡ್ತಿದ್ದಾರೆ.
ಟಿವಿ ನ್ಯೂಸ್ ರೀಡರ್ ಆಗಿ ಜನಪ್ರಿಯತೆ ಪಡೆದಿದ್ದ ಜಾಹ್ನವಿ (Jhanvi), ಸದ್ಯಕ್ಕೆ ನ್ಯೂಸ್ ಗಳಿಂದ ದೂರ ಉಳಿದು, ಕನ್ನಡ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಟಿ ನಿರೂಪಕಿಯಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಸೀಸನ್ 2 ಮತ್ತು ಫ್ಯಾಮಿಲಿ ಗ್ಯಾಂಗ್‌ಸ್ಟರ್‌ನಲ್ಲೂ ಸಹ ಮಿಂಚಿದ್ದರು ಇದೀಗ ಸವಿರುಚಿ ಕಾರ್ಯಕ್ರಮದಲ್ಲಿ ಚಂದ್ರು ಜೊತೆ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಜಾಹ್ನವಿ.
ಸಿಂಗಲ್ ಪೇರೆಂಟ್ ಆಗಿದ್ದುಕೊಂಡು, ಮಗನನ್ನು ನೋಡಿಕೊಳ್ಳುತ್ತಾ, ತಮ್ಮ ವೃತ್ತಿ ಜೀವನವನ್ನು ಸಾಗಿಸುತ್ತಿರುವ ಜಾಹ್ನವಿ, ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೋಕಿವಾಲ ಮತ್ತು ಅಧಿಪತ್ರ ಸಿನಿಮಾಗಳಲ್ಲಿ ಜಾಹ್ನವಿ ನಟಿಸಿದ್ದಾರೆ.
ಇಲ್ಲಿವರೆಗೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಜಾಹ್ನವಿ, ಇದೀಗ ದಸರಾ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ಶೂಟಿಂಗ್, ಕೆಲಸಗಳಿಗೆ ಬ್ರೇಕ್ ಕೊಟ್ಟು ತಮ್ಮ ತಾಯಿ ಮತ್ತು ಮಗನ ಜೊತೆಗೆ ಅಸ್ಸಾಂನ ಸುಂದರ ತಾಣಗಳನ್ನು ಎಕ್ಸ್ ಪ್ಲೋರ್ ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಜಾಹ್ನವಿ, ತಾಯಿ, ಮಗ ಮತ್ತು ಇನ್ನೊಬ್ಬ ಪುಟಾಣಿ ಜೊತೆಗೆ ಅಸ್ಸಾಂನ ವಿವಿಧ ತಾಣಗಳಲ್ಲಿ ಬೋಟಿಂಗ್ ಮಾಡುತ್ತಾ, ಪ್ರಕೃತಿ ಸೌಂದರ್ಯ ಸವೆಯುತ್ತಾ, ಎಂಜಾಯ್ ಮಾಡುತ್ತಿರುವ ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲ ಗುವಾಹಟಿಯ ಅತ್ಯಂತ ಜನಪ್ರಿಯ ಕಾಮಾಕ್ಯ ಮಂದಿರಕ್ಕೆ ಜಾಹ್ನವಿ ತಮ್ಮ ಫ್ಯಾಮಿಲಿ ಜೊತೆ ಭೇಟಿ ನೀಡಿದ್ದು, ಕಾಮಾಕ್ಯ ದೇವಿಯ (Kamakhya Temple) ದರ್ಶನ ಪಡೆದು ಬಂದಿದ್ದಾರೆ. ಅಲ್ಲದೇ ಅಲ್ಲಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜಾಹ್ನವಿ ಅವರು ಈಗಾಗಲೇ ಗಂಡನಿಂದ ಬೇರೆಯಾಗಿ, ತಾವೇ ಮಗನನ್ನು ಸಿಂಗಲ್ ಪೇರೆಂಟ್ ಆಗಿ ನೋಡಿಕೊಳ್ಳುತ್ತಿದ್ದಾರೆ. ಕಿರುತೆರೆ, ಹಿರಿತೆರೆ ಜೊತೆಗೆ ತಮ್ಮ ಪರ್ಸನಲ್ ಲೈಫನ್ನೂ ಕೂಡ ನಟಿ ಸದ್ಯ ಎಂಜಾಯ್ ಮಾಡುತ್ತಿದ್ದು, ಫ್ಯಾಮಿಲಿ ಜೊತೆಗೆ ಸದ್ಯ ದೇಶ ಸುತ್ತುತ್ತಿದ್ದಾರೆ.