ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಈ ನಿರೂಪಕಿ, ನನ್ನಮ್ಮ ಸೂಪರ್ ಸ್ಟಾರ್ ಫೇಮ್ ಜಾಹ್ನವಿ
ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿ, ಬಳಿಕ ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ಕಿರುತೆರೆಗೆ ಪರಿಚಿತರಾದ ಜಾಹ್ನವಿ ಯಾವುದೇ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಂತಹ ಸೌಂದರ್ಯವತಿ.
ರಾಜ್ಯದ ಪ್ರತಿಷ್ಠಿತ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿ ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದ ಜಾಹ್ನವಿ (Jahnavi). ತಮ್ಮ ನಿರರ್ಗಳ ಮಾತು, ಸ್ಪಷ್ಟ ಕನ್ನಡ, ನೇರ, ದಿಟ್ಟ ಮಾತುಗಳ ಮೂಲಕ ಜೊತೆಗೆ ಸೌಂದರ್ಯದಿಂದಲೂ ನ್ಯೂಸ್ ವೀಕ್ಷಕರ ಗಮನ ಸೆಳೆದ ನಿರೂಪಕಿ.
ಬಳಿಕ ಮಗನ ಜೊತೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ನಮ್ಮಮ್ಮ ಸೂಪರ್ ಸ್ಟಾರ್ (Nammamma Super Star) ಶೋದಲ್ಲಿ ಭಾಗಿಯಾಗುವ ಮೂಲಕ ಭರ್ಜರಿ ಮನರಂಜನೆ ನೀಡಿದ್ದರು, ಜೊತೆಗೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು.
ಜಾಹ್ನವಿ ನಿರೂಪಣೆ ಜೊತೆಗೆ ತಮ್ಮ ಸೌಂದರ್ಯದಿಂದಲೂ ಮನಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಾಹ್ನವಿ, ತಮ್ಮ ಫೋಟೋ ಶೂಟ್ (Photoshoot) ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಇವರನ್ನು ನೋಡಿದ್ರೆ ಯಾವುದೇ ಹೀರೋಯಿನ್ ಗೆ ಕಡಿಮೆ ಇಲ್ಲ ಎನ್ನುತ್ತಾರೆ.
ಸಕಲೇಶಪುರ ಮೂಲದ ನಿರೂಪಕಿಯಾಗಿರುವ ಜಾಹ್ನವಿ ಹಲವು ವರ್ಷಗಳಿಂದ ಟಿವಿ ನಿರೂಪಕಿಯಾಗಿ (TV Anchor) ಗುರುತಿಸಿಕೊಂಡಿದ್ದರು. ಬಹಳ ಸಣ್ಣ ವಯಸಿನಲ್ಲೇ ಮದುವೆಯಾಗಿರೋ ಜಾಹ್ನವಿಗೆ ಗ್ರಂಥ್ ಎಂಬ ಮಗ ಕೂಡ ಇದ್ದಾನೆ, ಇವರನ್ನ ನೋಡಿದ್ರೆ ಒಂದು ಮಗುವಿನ ಅಮ್ಮ ಅಂತ ಸಹ ಯಾರೂ ಹೇಳೋದಿಲ್ಲ ಹಾಗಿದ್ದಾರೆ ಜಾಹ್ನವಿ.
ನಮ್ಮಮ್ಮ ಸೂಪರ್ ಸ್ಟಾರ್ (Nammamma Superstar) ಮತ್ತು ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡುವ ಮೂಲಕ ಮತ್ತು ನಟನೆಯ ಮೂಲಕ ಜನಪ್ರಿಯತೆ ಪಡೆದಿರುವ ಜಾಹ್ನವಿ ರನ್ನರ್ ಅಪ್ ಕೂಡ ಆಗಿದ್ದರು. ಇದೀಗ ಸಿನಿಮಾದಲ್ಲೂ ಸಹ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 9 (Bigg Boss Season 9) ವಿನ್ನರ್ ಆಗಿರುವ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಅಧಿಪತ್ರ ಸಿನಿಮಾದಲ್ಲಿ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ನೈಜ್ಯ ಘಟನೆ ಆಧಾರಿತ ಚಿತ್ರ ಇದಾಗಿದ್ದು, ಮಂಗಳೂರು ಮತ್ತು ಉಡುಪಿ ಸುತ್ತಮುತ್ತ ಶೂಟಿಂಗ್ ನಡೆದಿದೆ.
ಜಾಹ್ನವಿ ತಮ್ಮ ಪ್ರೊಫೆಶನ್ ಜೊತೆಗೆ ಪರ್ಸನಲ್ ವಿಷಯದಿಂದಲೂ ಸುದ್ದಿಯಾಗಿದ್ದರು, ಇವರ ಸಂಸಾರದಲ್ಲಿ ಅಪಸ್ವರ ಮೂಡಿ, ಈಗ ಗಂಡನಿಂದ ವಿಚ್ಚೇದನ ಪಡೆದು ಸಿಂಗಲ್ ಪೇರೆಂಟ್ ಆಗಿ ಮಗನನ್ನು ಬೆಳೆಸುತ್ತಿದ್ದಾರೆ. ಸದ್ಯ ಎಲ್ಲಾ ನೆಗೆಟೀವ್ ಗಳಿಂದ ದೂರ ಉಳಿದು ಹೊಸ ಸಿನಿಮಾ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.