- Home
- Entertainment
- TV Talk
- Amruthadhaare: ಜೈದೇವ್ಗೆ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದ ಗೌತಮ್! ಮುಂದಿದೆ ಮಾರಿಹಬ್ಬ
Amruthadhaare: ಜೈದೇವ್ಗೆ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದ ಗೌತಮ್! ಮುಂದಿದೆ ಮಾರಿಹಬ್ಬ
ಗೌತಮ್‌ನ ಆಸ್ತಿಯನ್ನು ಪಡೆದರೂ ತೃಪ್ತರಾಗದ ಜೈದೇವ್ ಮತ್ತು ಶಕುಂತಲಾ, ಇದೀಗ ಮಲ್ಲಿಯ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಜೈದೇವ್, ಮಲ್ಲಿಯನ್ನು ಪತ್ತೆಹಚ್ಚಿ ಆಸ್ತಿಗೆ ಸಹಿ ಹಾಕುವಂತೆ ಬೆದರಿಸಿದಾಗ, ಗೌತಮ್ ಆಕೆಗೆ ಮುಕ್ತಿ ನೀಡಲು ಒಂದು ಯೋಜನೆ ರೂಪಿಸುತ್ತಾನೆ.

ಧನದಾಹಿಗಳಿಗೆ ತೃಪ್ತಿಯೇ ಇಲ್ಲ
ಜೈದೇವ್ ಮತ್ತು ಶಕುಂತಲಾಗೆ ಗೌತಮ್ ತನ್ನ ಎಲ್ಲಾ ಆಸ್ತಿ ಬರೆದುಕೊಟ್ಟು ಬಂದರೂ ಅವರಿಗೆ ನೆಮ್ಮದಿ ಇಲ್ಲ. ಇದೀಗ ಮಲ್ಲಿಯ ಆಸ್ತಿಯ ಮೇಲೂ ಕಣ್ಣುಬಿದ್ದಿದೆ. ಮಲ್ಲಿಗೆ ಅಪ್ಪ ಮಾಡಿಟ್ಟಿರೋ ಆಸ್ತಿಯನ್ನು ಲಪಟಾಯಿಸಲು ಅವರು ಸಂಚು ಹೂಡಿದ್ದಾರೆ.
ಮಲ್ಲಿಯ ಬಗ್ಗೆ ತಿಳಿದ ಜೈದೇವ್
ಆದರೆ ಮಲ್ಲಿ ಎಲ್ಲಿ ಇದ್ದಾಳೆ ಎನ್ನುವುದು ತಿಳಿದಿರಲಿಲ್ಲ. ಆದರೆ, ರೌಡಿಗಳನ್ನು ಬಿಟ್ಟು ಅದನ್ನು ಕಂಡು ಹಿಡಿದಿದ್ದಾನೆ ಜೈದೇವ. ಸಾಲದು ಎನ್ನುವುದಕ್ಕೆ ಅವಳ ಹೊಸ ಫೋನ್ ನಂಬರ್ ಕೂಡ ಕಲೆಕ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಕೊನೆಗೆ ಫೋನ್ ಮಾಡಿದ್ದಾನೆ.
ಜೈದೇವ್ ಕರೆ
ಜೈದೇವ್ ಎಂದು ಅರಿಯದ ಮಲ್ಲಿ, ಫೋನ್ ರಿಸೀವ್ ಮಾಡಿ ಇವನ ಆವಾಜ್ ಕೇಳಿ ಕಟ್ ಮಾಡಿದ್ದಾಳೆ. ಕೊನೆಗೆ ಗೌತಮ್ನಲ್ಲಿ ಬಂದು ವಿಷಯವನ್ನು ತಿಳಿಸಿದ್ದಾಳೆ.
ಮಲ್ಲಿ ಮಾಡಿದಳು ಫೋನ್
ಜೈದೇವ್ಗೆ ಬೇಕಾಗಿರುವುದು ಏನು ಎಂದು ತಿಳಿದುಕೊಳ್ಳುವ ಸಲುವಾಗಿ ಮಲ್ಲಿಗೆ ವಾಪಸ್ ಫೋನ್ ಮಾಡಿ ಸ್ಪೀಕರ್ನಲ್ಲಿ ಇಡುವಂತೆ ಗೌತಮ್ ಹೇಳಿದ್ದಾನೆ. ಮಲ್ಲಿ ಕಾಲ್ಮಾಡಿದಾಗ ಜೈದೇವ್ ನಿನ್ನ ಆಸ್ತಿಗೆ ಸಹಿ ಹಾಕಿ ಹೋಗು. ನಿನಗೆ ನಾನು ಏನೂ ಮಾಡುವುದಿಲ್ಲ ಎಂದಿದ್ದಾನೆ.
ಮುಹೂರ್ತ ಫಿಕ್ಸ್
ಗೌತಮ್, ಓಕೆ ನಾಳೆ ಬರುತ್ತೇನೆ ಎಂದು ಹೇಳು ಎಂದು ಸನ್ನೆ ಮಾಡಿ ಹೇಳಿದಾಗ, ಮಲ್ಲಿ ಹಾಗೆಯೇ ಮಾಡಿದ್ದಾಳೆ. ಬಳಿಕ ಗೌತಮ್ ನಿನಗೆ ಅವನಿಂದ ಮುಕ್ತಿ ಬೇಕು, ಅವನಿಗೆ ನಿನ್ನ ಆಸ್ತಿ ಬೇಕು ಎನ್ನುತ್ತಲೇ ಏನು ಮಾಡಬೇಕು ಎನ್ನುವ ಪ್ಲ್ಯಾನ್ ಹೇಳಿದ್ದಾನೆ.
ಮಲ್ಲಿಗೆ ಮುಕ್ತಿ
ಅಲ್ಲಿಗೆ ಜೈದೇವ್ ಮತ್ತು ಮಲ್ಲಿ ಅಧಿಕೃತವಾಗಿ ಬೇರೆಬೇರೆಯಾಗಿ ಮಲ್ಲಿಗೆ ಮುಕ್ತಿ ಸಿಗಲಿದೆ. ಜೈದೇವ್ಗೆ ಗೌತಮ್ ಮುಹೂರ್ತ ಫಿಕ್ಸ್ ಮಾಡಿರುವ ಕಾರಣ, ಮುಂದೆ ಏನಾಗುತ್ತದೆ ಎನ್ನುವ ಕುತೂಲಹವಿದೆ.