- Home
- Entertainment
- TV Talk
- Amruthadhaare Gowtam is Back: ಸುಸ್ತಾದ ದೀಪಿಕಾ- ಬೆಚ್ಚಿಬಿದ್ದ ಶಕುಂತಲಾ; ಮುಂದೇನು
Amruthadhaare Gowtam is Back: ಸುಸ್ತಾದ ದೀಪಿಕಾ- ಬೆಚ್ಚಿಬಿದ್ದ ಶಕುಂತಲಾ; ಮುಂದೇನು
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ವಿದೇಶದಿಂದ ಹಿಂದಿರುಗಿದ್ದು, ದೀಪಿಕಾಳ ವಿಚಿತ್ರ ವರ್ತನೆಯಿಂದ ಶಕುಂತಲಾಗೆ ರಹಸ್ಯ ಬಯಲಾಗುವ ಆತಂಕ ಶುರುವಾಗಿದೆ. ಭೂಮಿಕಾ ಸತ್ಯ ತಿಳಿಸಿದರೆ ಶಕುಂತಲಾ ಮತ್ತು ಜೈದೇವ್ ಅವರ ಅಸಲಿ ಮುಖ ಗೌತಮ್ಗೆ ತಿಳಿಯಲಿದ್ದು, ಧಾರಾವಾಹಿ ಮುಕ್ತಾಯದ ಹಂತ ತಲುಪಿದೆ.

ವಾಪಸ್ ಬಂದ ಗೌತಮ್
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಗೌತಮ್ ಫಾರಿನ್ನಿಂದ ವಾಪಸ್ ಬಂದಾಗಿದೆ. ಮೊದಲಿಗೆ ಮುಖವಾಡ ಧರಿಸಿ ಬಂದ ಗೌತಮ್ನನ್ನು ಕಂಡು ದೀಪಿಕಾ ಬೆಚ್ಚಿಬಿದ್ದಿದ್ದಳು.
ದೀಪಿಕಾ ಸುಸ್ತು
ಕೊನೆಗೆ ಗೌತಮ್ ಮುಖವಾಡ ತೆಗೆದು ನಾನ್ರೀ, ಇದೇನಿದು ಇಷ್ಟು ಹೆದರಿದ್ರಿ ಎಂದು ಕೇಳಿ ದೀಪಿಕಾಳನ್ನು ಪತ್ನಿ ಎಂದು ತಿಳಿದು ಹತ್ತಿರ ಬರಲು ಹೋದಾಗ, ಅವಳು ಹೆದರಿ ತನ್ನದೇ ಆದ ಭಾಷೆ ಮಾತನಾಡಿದ್ದಾಳೆ.
ಶಕುಂತಲಾ ಶಾಕ್
ಇದನ್ನು ಕೇಳಿ ಗೌತಮ್ಗೆ ಶಾಕ್ ಆಗಿದೆ. ಏನ್ರೀ ಇದೆಲ್ಲಾ, ಇದೆಂಥ ಭಾಷೆ ಎಂದಾಗ ಶಕುಂತಲಾಗೆ ಶಾಕ್ ಆಗಿ ಹೋಗಿದೆ. ಎಲ್ಲಿ ರಹಸ್ಯ ಬಯಲಾಗುವುದೋ ಎನ್ನುವ ಆತಂಕ ಕಾಡಿದೆ.
ದೀಪಿಕಾ ಮೇಲೆ ಎಲ್ಲವೂ
ಇನ್ನೇನಿದ್ದರೂ ದೀಪಿಕಾ ಎಲ್ಲವನ್ನೂ ಸಂಭಾಳಿಸಬೇಕು. ಭೂಮಿಕಾ ಗೌತಮ್ಗೆ ಕರೆ ಮಾಡಿ ಇರುವ ವಿಷಯವನ್ನು ಹೇಳಬೇಕಿದೆ.
ಶಕುಂತಲಾ ಅಸಲಿ ಮುಖ
ಇಷ್ಟಾದರೆ ಶಕುಂತಲಾಳ ಮೋಸ, ಜೈದೇವನ ವಂಚನೆ ಎಲ್ಲವೂ ಗೌತಮ್ಗೆ ತಿಳಿಯಲಿದೆ. ಜೈದೇವ್ ಬಗ್ಗೆ ಇದಾಗಲೇ ಗೌತಮ್ಗೆ ಗೊತ್ತು. ಆದರೆ ಶಕುಂತಲಾ ಬದಲಾಗಿದ್ದಾಳೆ ಎಂದುಕೊಂಡಿರುವ ಗೌತಮ್ಗೆ ಅಸಲಿ ವಿಷಯ ತಿಳಿಯಬೇಕಿದೆ.
ಮುಂದೇನು?
ಅಲ್ಲಿಗೆ ಅಮೃತಧಾರೆ ಸೀರಿಯಲ್ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನೇನು ಟ್ವಿಸ್ಟ್ ಕೊಡುತ್ತಾರೆಯೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

