ಧರ್ಮಸ್ಥಳ ಮಂಜುನಾಥ, ಸೌತಡ್ಕ ಗಣಪತಿ ದರ್ಶನ ಮಾಡಿದ ಸಾರಾ ಅಣ್ಣಯ್ಯ
ಕನ್ನಡತಿ ಮತ್ತು ಅಮೃತಧಾರೆ ಧಾರಾವಾಹಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ, ಸದ್ಯ ಶೂಟಿಂಗ್‌ನಿಂದ ಬಿಡುವು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಖ್ಯಾತ ದೇಗುಲಗಳ ದರ್ಶನ ಮಾಡಿ ಪುನೀತರಾಗಿದ್ದಾರೆ.
ಕನ್ನಡತಿ (Kannadathi) ಧಾರಾವಾಹಿಯಲ್ಲಿ ವರುಧಿನಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಸಾರಾ ಅಣ್ಣಯ್ಯ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗೌತಮ್ ದಿವಾನ್ ರ ಪ್ರೀತಿಯ ತಂಗಿ ಮಹಿಮಾ ಆಗಿ ಸದ್ಯ ಜನರನ್ನು ರಂಜಿಸುತ್ತಿದ್ದಾರೆ. ಮೊದಲಿಗೆ ತಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎನ್ನುವ ಹಠಮಾರಿ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಹಿಮಾ ಈಗ ಬದಲಾಗಿ ಮನೆಯವರಿಗಾಗಿಯೇ ಒಳಿತು ಬಯಸುವ ಸೊಸೆಯಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ ಸೀರಿಯಲ್(serial) ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಸಾರಾ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದು, ದೇಗುಲಗಳ ದರ್ಶನ ಮಾಡಿ, ವಿವಿಧ ಕಡೆಗಳಲ್ಲಿ ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ.
ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಸಾರಾ, ಧರ್ಮಸ್ಥಳ ಮಂಜುನಾಥನ (Dharmasthala) ಸನ್ನಿಧಿ, ಸೌತಡ್ಕ ಗಣಪತಿ ಸನ್ನಿಧಿಗೆ ಭೇಟಿ ನೀಡಿ ಪೂಜಿ ಸಲ್ಲಿಸಿದ್ದು, ಅಲ್ಲಿ ತೆಗೆಸಿಕೊಂಡಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗುಲಾಬಿ ಬಣ್ಣದ ಸೀರೆ ಜೊತೆಗೆ ನೀಲಿ ಬಣ್ಣದ ಬ್ಲೌಸ್ ಧರಿಸಿರುವ ಸಾರಾ,ಇತಿಹಾಸ ಪ್ರಸಿದ್ಧ ಧರ್ಮಸ್ಥಳ ದೇಗುಲದ ಎದುರು ಮತ್ತು ಸೌತಡ್ಕ ಗಣಪತಿ (Sauthadka Ganapathi temple) ದೇಗುಲದ ಎದುರು ನಿಂತು ವಿವಿಧ ರೀತಿಯ ಪೋಸ್ ಕೊಟ್ಟು ಫೋಟೊ ತೆಗೆದುಕೊಂಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೀರಿಯಲ್‌ನಲ್ಲಿ ಸದಾ ಮಾಡರ್ನ್ ಡ್ರೆಸ್ಸಿನಲ್ಲಿ ಕಾಣಿಸಿಕೊಳ್ಳುವ ಸಾರಾ ದೇವರ ದರ್ಶನಕ್ಕೆ ಸೀರೆಯುಟ್ಟು ಬಂದಿದ್ದು, ಫೋಟೋಸ್ ನೋಡಿದ ಫ್ಯಾನ್ಸ್ ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತೀರಿ, ಟ್ರೆಡಿಶನಲ್ ಬ್ಯೂಟಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ನೀವು ಅಲ್ಲಿಗೆ ಹೋಗ್ತಿದ್ದೀರಿ ಅಂತ ಮೊದಲೇ ಗೊತ್ತಿದ್ರೆ ನಾವು ಬರ್ತಿದ್ವಿ ಮೇಡಂ, ದೇವರ ದರ್ಶನದ ಜೊತೆಗೆ, ನಿಮ್ಮ ದರ್ಶನವೂ ಆಗ್ತಿತ್ತು ಎಂದು ಸಹ ಹೇಳಿದ್ದಾರೆ. ಸಾರಾ ತಮ್ಮ ಸ್ನೇಹಿತ ಹಾಗೂ ನಿರ್ದೇಶಕರಾಗಿರುವ ನವನೀತ್ ಕುಮಾರ್ ಜೊತೆ ದೇಗುಲ ದರ್ಶನ ಮಾಡಿದ್ದಾರೆ.