ಮತ್ತೆ ಸೀರೆಯುಟ್ಟು ಪೋಸ್ ನೀಡಿದ ಸಾರಾ ಅಣ್ಣಯ್ಯ ಅಂದಕ್ಕೆ ಫ್ಯಾನ್ಸ್ ಫಿದಾ
ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯ ನೀಲಿ ಮತ್ತು ಹಸಿರು ಬಣ್ಣದ ಜರಿ ಸೀರೆಯಲ್ಲಿ ದೇವತೆಯಂತೆ ಮಿಂಚುತ್ತಿದ್ದು, ಸಾರಾ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಸಾರಾ ಅಣ್ಣಯ್ಯ (Sara Annaiah) ತಮ್ಮ ಸ್ಟೈಲ್ ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಕನ್ನಡತಿ ಸೀರಿಯಲ್ ನಲ್ಲಿ (Serial)ವರುಧಿನಿ ಪಾತ್ರದ ಮೂಲಕ ಜನಕ್ಕೆ ಹತ್ತಿರವಾದ ನಟಿ ಸಾರಾ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೂ, ಆಕೆಯ ಸೈಕೋ ಕ್ಯಾರೆಕ್ಟರ್ ಜನರಿಗೆ ತುಂಬಾನೆ ಇಷ್ಟವಾಗಿತ್ತು.
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಈ ಮೂರು ಸೀರಿಯಲ್ ನಲ್ಲೂ ಸಾರಾ ತುಂಬಾನೆ ಮಾಡರ್ನ್ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗೇ ನೋಡಿದ್ರೆ ಸಾರಾ ಮಾಡರ್ನ್ ಡ್ರೆಸ್ಸಲ್ಲೂ, ಸೀರೆಯಲ್ಲು ಅದ್ಭುತ ಬ್ಯೂಟಿ ಅನ್ನೋದ್ರಲ್ಲಿ ತಪ್ಪಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಪ್ರತಿದಿನ ತಮ್ಮ ಮಾಡರ್ನ್ ಮತ್ತು ಟ್ರೆಡಿಶನಲ್ ಫೋಟೋ ಶೂಟ್ (Traditional Photo Shoot) ಮಾಡಿಸುತ್ತಾ, ಶೇರ್ ಮಾಡುತ್ತಿರುತ್ತಾನೆ, ಆ ಮೂಲಕ ಜನರನ್ನು ಮತ್ತಷ್ಟು ಕನೆಕ್ಟ್ ಆಗುತ್ತಾರೆ ನಟಿ.
ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಈ ಬೋಲ್ಡ್ ಬ್ಯೂಟಿ (Bold Beauty) ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತುಂಬಾನೆ ಫೇಮಸ್. ಮಾಡೆಲ್ ಆಗಿರುವ ಇವರು ತುಂಬಾನೆ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಮೂಲಕವೂ ಪಡ್ಡೆಗಳ ನಿದ್ದೆ ಕದ್ದಿದ್ದರು.
ಕನ್ನಡ ಸಿನಿಮಾ, ತಮಿಳು ವೆಬ್ ಸೀರೀಸ್ ಗಳಲ್ಲೂ(web series) ನಟಿಸಿರುವ ಸಾರಾ, ಸದ್ಯ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಆಗಿ ನೆಗೆಟೀವ್ ಅಲ್ಲದ, ಪಾಸಿಟೀವ್ ಕೂಡ ಅಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ನಟಿ ಸೀರಿಯಲ್ ಸೆಟ್ ನಲ್ಲಿ ಫೋಟೊ ಶೂಟ್ ಮಾಡಿಸಿ ಶೇರ್ ಮಾಡಿದ್ದು, ನೀಲಿ ಬಣ್ಣದ ಮೈ ಮತ್ತು ಹಸಿರು ಬಣ್ಣದ ಬಾರ್ಡರ್ ಹೊಂದಿರುವ ಜರತಾರಿ ಸೀರೆಯುಟ್ಟು ಅದಕ್ಕೆ ಮ್ಯಾಚ್ ಆಗಿರುವ ನೆಕ್ಲೇಸ್, ಕಿವಿಯೋಲೆ, ಮುಂದಾಲೆ ಸೊಂಟದ ಪಟ್ಟಿ ಧರಿಸಿದ್ದಾರೆ.
ಮತ್ತೆ ಸೀರೆಯಲ್ಲಿ ಸಾರಾ ಸೌಂದರ್ಯವನ್ನು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬೆಂಕಿಯ ಉಂಡೆಯಂತೆ ಕಾಣಿಸ್ತಿದ್ದೀರಿ, ನೀವು ತುಂಬಾನೆ ಚೆನ್ನಾಗಿದ್ದೀರಿ, ನಿಮ್ಮ ಆಕ್ಟೀಂಗ್ ಅಂತೂ ಅದಕ್ಕಿಂತಲೂ ಸುಂದರವಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.