- Home
- Entertainment
- TV Talk
- ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ನಲ್ಲಿ ಯಾರಿಗೆಲ್ಲ ಸಿಗ್ತಿದೆ ವೇದಿಕೆ? ಬಿಗ್ ಬಾಸ್ ನಂತ್ರ ಡಬಲ್ ಮಜಾ ನೀಡಲು ಪಂಟ್ರು ರೆಡಿ
ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ನಲ್ಲಿ ಯಾರಿಗೆಲ್ಲ ಸಿಗ್ತಿದೆ ವೇದಿಕೆ? ಬಿಗ್ ಬಾಸ್ ನಂತ್ರ ಡಬಲ್ ಮಜಾ ನೀಡಲು ಪಂಟ್ರು ರೆಡಿ
ಬಿಗ್ ಬಾಸ್ ನಂತ್ರ ಏನು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ರಿಯಾಲಿಟಿ ಶೋ ನಂತ್ರ ಗಿಚ್ಚಿ ಗಿಲಿ ಗಿಲಿ ಪ್ರಸಾರ ಆಗಲಿದೆ. ಈ ಬಾರಿ ಶೋ ಸಿಕ್ಕಾಪಟ್ಟೆ ಡಿಫರೆಂಟ್ ಆಗಿರಲಿದ್ದು, ಮೊದಲ ಪ್ರೋಮೋ ಬಿಡುಗಡೆಯಾಗಿದೆ.

ಬಿಗ್ ಬಾಸ್ ಫಿನಾಲೆಗೆ ವಾರ ಬಾಕಿ
ಕಳೆದ ಮೂರು ತಿಂಗಳಿಂದ ವೀಕೆಂಡ್ ನಲ್ಲಿ ಏನು ಮಾಡ್ಬೇಕು ಎನ್ನುವ ಪ್ರಶ್ನೆ ವೀಕ್ಷಕರಿಗೆ ಇರ್ಲಿಲ್ಲ. ರಾತ್ರಿ 9 ಗಂಟೆಯಾಗ್ತಿದ್ದಂತೆ ಟಿವಿ ಮುಂದೆ ವೀಕ್ಷಕರು ಸೇರ್ತಿದ್ರು. ಕಿಚ್ಚ ಸುದೀಪ್ ಪಂಚಾಯ್ತಿ ನೋಡಲು, ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಯಾರು ಮನೆಯಿಂದ ಹೊರಗೆ ಹೋಗ್ತಾರೆ ಎಂಬುದನ್ನು ನೋಡುವ ಕುತೂಹಲ ಎಲ್ಲರಿಗೂ ಇತ್ತು. ಶನಿವಾರದ ಪಂಚಾಯ್ತಿ ಬಗ್ಗೆ ಚರ್ಚೆ ಆಗ್ತಿರುವಾಗ್ಲೇ ಭಾನುವಾರ ಬಂದು, ಸ್ಪರ್ಧಿ ಹೊರಬಿದ್ದು ಆ ಚರ್ಚೆಯಲ್ಲೇ ವೀಕ್ಷಕರು ವಾರ ಕಳೆಯುತ್ತಿದ್ದರು. ಆದ್ರೀಗ ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರ ಇದೆ. ಜನವರಿ 17 ಮತ್ತು 18 ರಂದು ಬಿಗ್ ಬಾಸ್ ಫಿನಾಲೆ ಮುಗಿಯಲಿದೆ.
ಬಿಗ್ ಬಾಸ್ ನಂತ್ರ ಏನು?
ಬಿಗ್ ಬಾಸ್ ಗುಂಗಿನಲ್ಲಿರುವ ವೀಕ್ಷಕರಿಗೆ ಅದ್ರ ನಂತ್ರ ಏನು ಮಾಡ್ಬೇಕು ಎನ್ನುವ ಪ್ರಶ್ನೆ ಕಾಡ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಾಗಿದೆ. ಕಲರ್ಸ್ ಕನ್ನಡ ಗಿಚ್ಚಿ ಗಿಲಿ ಗಿಲಿ ಜ್ಯೂನಿಯರ್ ಶೋ ಶುರು ಮಾಡ್ತಿದೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಶೋ ಆರಂಭವಾಗಲಿದೆ.
ಗಿಚ್ಚಿ ಗಿಲಿ ಗಿಲಿ ಜ್ಯೂನಿಯರ್ಸ್
ಈ ಬಾರಿ ಗಿಚ್ಚಿ ಗಿಲಿಗಿಲಿ ಸ್ವಲ್ಪ ಡಿಫರೆಂಟ್ ಸ್ಟೈಲ್ ನಲ್ಲಿ ಬರಲಿದೆ. ಇಷ್ಟು ದಿನ ಗಿಚ್ಚಿ ಗಿಲಿಗಿಲಿಯಲ್ಲಿ ಸೀನಿಯರ್ಸ್ ಮನರಂಜನೆ ನೀಡ್ತಿದ್ದರು. ಆದ್ರೆ ಈಗ ಮಕ್ಕಳ ಮನರಂಜನೆ ವೀಕ್ಷಕರಿಗೆ ಸಿಗಲಿದೆ.
ಯಾರೆಲ್ಲ ಜಡ್ಜ್
ಕಲರ್ಸ್ ಕನ್ನಡ ಗಿಚ್ಚಿ ಗಿಲಿ ಗಿಲಿ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ. ಅದ್ರ ಪ್ರಕಾರ, ಈ ಬಾರಿ ನಟಿ ಶ್ರುತಿ, ಸೃಜನ್ ಲೋಕೇಶ್ ಹಾಗೂ ಸಾಧು ಕೋಕಿಲಾ ಜಡ್ಜ್ ಸೀಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮಾ ಗೌಡ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಸೀನಿಯರ್ಸ್ ಗೂ ಅವಕಾಶ
ಗಿಚ್ಚಿ ಗಿಲಿಗಿಲಿ ಈ ಬಾರಿ ಶೋನಲ್ಲಿ ಮಕ್ಕಳು ಮಾತ್ರವಲ್ಲ ಸೀನಿಯರ್ಸ್ ಕೂಡ ವೀಕ್ಷಕರನ್ನು ನಗಿಸಲಿದ್ದಾರೆ. ಚಿಲ್ಲರ್ ಮಂಜು, ರಾಘು, ಮಾನಸಾ, ತುಕಾಲಿ ಸಂತೋಷ್ ಸೇರಿದಂತೆ ಅನೇಕ ಕಲಾವಿದರಿಗೆ ವೇದಿಕೆ ನೀಡಲಾಗಿದೆ.
ಸಿರಿ ಸಿಂಚನಾ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ನಿನಗಾಗಿ ಸೀರಿಯಲ್ ನಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಸಿರಿ ಸಿಂಚನಾ ಈ ಬಾರಿ ಗಿಚ್ಚಿ ಗಿಲಿ ಗಿಲಿಗೆ ಬರ್ತಿದ್ದಾರೆ. ಸಿರಿ ಸಿಂಚನಾ, ನಿನಗಾಗಿ ಸೀರಿಯಲ್ ನಲ್ಲಿ ಕೃಷ್ಣ ಆಗಿ ಎಲ್ಲರ ಮನಸ್ಸು ಗೆದ್ದಿದ್ದರು. ಮೂಲತಃ ಬೆಂಗಳೂರಿನ ಬಾಲಕಿ, ನಟನೆ ಮೂಲಕ ವೀಕ್ಷಕರ ಅಚ್ಚುಮೆಚ್ಚಿನ ಮಗಳಾಗಿದ್ದು, ತಮಾಷೆಯಲ್ಲಿ ಎಷ್ಟು ಮಾರ್ಕ್ಸ್ ಪಡೀತಾಳೆ ನೋಡ್ಬೇಕಿದೆ.
ಜ್ಯೂನಿಯರ್ ಕಲಾವಿದರು
ಗಿಚ್ಚಿ ಗಿಲಿ ಗಿಲಿ ಜ್ಯೂನಿಯರ್ ಶೋಗಾಗಿಯೇ ಕಲರ್ಸ್ ಕನ್ನಡ ಅನೇಕ ಕಡೆ ಆಡಿಷನ್ ನಡೆಸಿತ್ತು. ಆಡಿಷನ್ ವೇಳೆ ಸಾಕಷ್ಟು ಗದ್ದಲ ಕೂಡ ನಡೆದಿತ್ತು. ಆಡಿಷನ್ ಸರಿಯಾಗಿ ನಡೆದಿಲ್ಲ, ಮಕ್ಕಳ ಟ್ಯಾಲೆಂಟ್ ನೋಡಿಲ್ಲ ಎಂಬ ಆರೋಪದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹಾಗಾಗಿ ಸದ್ಯ ಎಲ್ಲರ ದೃಷ್ಟಿ ಮಕ್ಕಳ ಮೇಲಿದೆ. ಯಾವ ಜ್ಯೂನಿಯರ್ಸ್ ಗೆ ಕಲರ್ಸ್ ಕನ್ನಡ ಅವಕಾಶ ನೀಡಿದೆ ಎಂಬ ಕುತೂಹಲದಲ್ಲಿ ವೀಕ್ಷಕರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

