- Home
- Entertainment
- Cine World
- Allu Sirish Engagement Photos: 38ನೇ ವಯಸ್ಸಿಗೆ ಕೊನೆಗೂ ನಿಶ್ಚಿತಾರ್ಥ ಮಾಡ್ಕೊಂಡೆ; ಅಲ್ಲು ಅರ್ಜುನ್ ತಮ್ಮ
Allu Sirish Engagement Photos: 38ನೇ ವಯಸ್ಸಿಗೆ ಕೊನೆಗೂ ನಿಶ್ಚಿತಾರ್ಥ ಮಾಡ್ಕೊಂಡೆ; ಅಲ್ಲು ಅರ್ಜುನ್ ತಮ್ಮ
Actor Allu Sirish And Nayanika Reddy Engagement Photos: ನಟ ಅಲ್ಲು ಸಿರೀಶ್ ಅವರು ಅಕ್ಟೋಬರ್ 31ರಂದು ನಯನಿಕಾ ರೆಡ್ಡಿ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಎಂಗೇಜ್ ಆಗೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿ.

ಮೊದಲೇ ಹೇಳಿದ್ರು
ತಿಂಗಳುಗಳಿಂದ ಈ ನಿಶ್ಚಿತಾರ್ಥಕ್ಕೆ ಪ್ಲ್ಯಾನ್ ನಡೆದಿತ್ತು. ಈಗ ಎಂಗೇಜ್‌ಮೆಂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಖಾಸಗಿ ಸಮಾರಂಭವಿದು
ಈ ಖಾಸಗಿ ಸಮಾರಂಭದಲ್ಲಿ ಆಪ್ತ ಸ್ನೇಹಿತರು, ಅಲ್ಲು ಅರವಿಂದ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬಸ್ಥರು ಭಾಗವಹಿಸಿದ್ದರು.
ಅಲ್ಲು ಸಿರೀಶ್ ಏನಂದ್ರು?
ಅಲ್ಲು ಸಿರೀಶ್ ಅವರು "ನನ್ನ ಜೀವನದ ಪ್ರೀತಿ ನಯನಿಕಾ ರೆಡ್ಡಿ ಜೊತೆ ಕೊನೆಗೂ ಖುಷಿಯಿಂದಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ!" ಎಂದು ಕ್ಯಾಪ್ಶನ್ ನೀಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಎರಡು ಕುಟುಂಬಸ್ಥರು
ಈ ನಿಶ್ಚಿತಾರ್ಥದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಇತ್ತೀಚೆಗೆ ಮೆಗಾಸ್ಟಾರ್ ಹಾಗೂ ಅಲ್ಲು ಅರವಿಂದ್ ಕುಟುಂಬಸ್ಥರು ಖಾಸಗಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಡೀ ಕುಟುಂಬವು ಖಾಸಗಿಯಾಗಿ ಸಮಯ ಕಳೆಯಲು ಬಯಸುವುದು.
ಯಾರು ಯಾರು ಬಂದಿದ್ರು?
ಈ ಕಾರ್ಯಕ್ರಮದಲ್ಲಿ ಅಲ್ಲು ಸಿರೀಶ್ ಅಣ್ಣ ಅಲ್ಲು ಅರ್ಜುನ್ ದಂಪತಿ, ಚಿರಂಜೀವಿ, ರಾಮ್ ಚರಣ್, ವರುಣ್ ತೇಜ್ ದಂಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
'ಬಡ್ಡಿ' ಸಿನಿಮಾ
ಅಲ್ಲು ಸಿರೀಶ್ ಅವರು ಕೊನೆಯದಾಗಿ 2024 ರ 'ಬಡ್ಡಿ' ಎಂಬ ಆಕ್ಷನ್ ಕಾಮಿಡಿ ಫ್ಯಾಂಟಸಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.