ತಲೆತುಂಬ ಮಲ್ಲಿಗೆ, ಕೆಂಪು ಸೀರೆ, ಕೈಯಲ್ಲಿ ವೀಣೆ…. ಶಾರದೆಯಾದ ಕನ್ನಡ ಕಿರುತೆರೆ ನಟಿ
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿ ಜೊತೆ ತನ್ನ ಸೋಶಿಯಲ್ ವರ್ಕ್ ಗಳಿಂದಲೂ ಸುದ್ದಿಯಲ್ಲಿರುವ ನಟಿ ಶ್ವೇತಾ ಪ್ರಸಾದ್ ಇದೀಗ ಮಂಗಳೂರು ಶಾರದೆಯ ರೂಪದಲ್ಲಿ ಕಂಗೊಳಿಸ್ತಿದ್ದಾರೆ.
ಕನ್ನಡದ ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ ಜನರನ್ನು ರಂಜಿಸಿದ ನಟಿ ಶ್ವೇತಾ ಪ್ರಸಾದ್ (Shwetha Prasad), ಸದ್ಯ ನಟನೆಯಿಂದ ದೂರ ಇದ್ರೂ ಸಹ ತಮ್ಮ ಸೋಶಿಯಲ್ ಮಿಡಿಯಾ ಮೂಲಕ ಜನರೊಂದಿಗೆ ಕನೆಕ್ಟ್ ಆಗುತ್ತಿರುತ್ತಾರೆ ಈ ಬೆಡಗಿ.
ಶ್ವೇತಾ ಪ್ರಸಾದ್ ತಮ್ಮ ನಟನೆಯ ಜೊತೆಗೆ ಸೋಶಿಯಲ್ ವರ್ಕ್ ಮೂಲಕವೂ ಸುದ್ದಿಯಾಗಿದ್ದರು, ಜೊತೆಗೆ ದೇಶ ವಿದೇಶ ಟ್ರಾವೆಲ್ ಮಾಡುತ್ತಾ, ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಾ, ತಮ್ಮ ಪ್ಯಾಷನ್ ಫಾಲೋ ಮಾಡೋ ನೀಳ ಸುಂದರಿ.
ಶ್ವೇತಾ ಪ್ರಸಾದ್ ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾದ ಫೋಟೋ ಹಂಚಿಕೊಂಡಿದ್ದು, ನಟಿ ಶಾರದಾ ದೇವಿಯ ರೂಪದಲ್ಲಿ ಕಂಗೊಳಿಸ್ತಿದ್ದಾರೆ. ತಲೆತುಂಬಾ ಮಲ್ಲಿಗೆ ಮುಡಿದು, ಕೆಂಪು ಸೀರೆಯುಟ್ಟು, ಕೈಯಲ್ಲಿ ವೀಣೆ, ತಾವರೆ ಹೂವನ್ನು ಹಿಡಿದು ಮಂಗಳೂರಿನ ಕುದ್ರೋಳಿಯ ಶಾರದಾ (Mangalore Sharade) ಮಾತೆಯಂತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ತಾವು ತಲೆಗೆ ಮುಡಿದಿರುವ ಹೂವಿನ ಬಗ್ಗೆ ಬರೆದುಕೊಂಡಿರುವ ಶ್ವೇತಾ, 'ಶಾರದಾ ಜಲ್ಲಿ' (Sharada Jalli) ಅಥವಾ ಸೋನ್ಫೂಲ್ ಕೇಶವಿನ್ಯಾಸವು ಒಂದು ಕಲೆ. ಇದಕ್ಕೆ ನಿಖರತೆ ಮತ್ತು ಪರಿಣತಿಯ ಅಗತ್ಯವಿದೆ. ಇದು ಗುಲಾಬಿ ದಳಗಳನ್ನು ಹೊಂದಿರುವ ಕ್ಲಾಸಿಕ್ ಮಂಗಳೂರು ಮಲ್ಲಿಗೆ ಕೇಶವಿನ್ಯಾಸ. ಅಂತಹ ಒಂದು ಅದೃಷ್ಟದ ಅವಕಾಶ ನನಗೆ ಸಿಕ್ಕಿದ್ದು, ತಾಯಿ ಶಾರದೆಯಾಗಲು ಅವಕಾಶ ಸಿಕ್ಕಿತು. ನೀವು ನೋಡುವಂತೆ ನನ್ನ ಕೂದಲು ಸಂಪೂರ್ಣವಾಗಿ ಮಂಗಳೂರು ಮಲ್ಲಿಗೆಯಿಂದ ಆವೃತವಾಗಿದೆ. ಈ ಹೂವನ್ನು ಸ್ಟೈಲಿಂಗ್ ಮಾಡುವ ಕಲೆ ಸುಲಭವಲ್ಲಇದಕ್ಕೆ 4 - 5 ಗಂಟೆ ಬೇಕಾಗುತ್ತದೆ ಎಂದು ಬರೆದಿದ್ದಾರೆ.
ಅಷ್ಟೇ ಅಲ್ಲ ಈ ಕೇಶವಿನ್ಯಾಸಕಾರರ ಹೆಸರು ಶಾರದಾ ಜಲ್ಲಿ. ಶಾರದಾ ಎಂಬುದು ಸರಸ್ವತಿ ದೇವಿಯ ಹೆಸರು ಎಂದು ಸಹ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಜೊತೆಗೆ ಮಂಗಳೂರಿನ ಸುಂದರಿಯರು ಯಾರೆಲ್ಲಾ ಈ ಹೂವಿನ ಅಲಂಕಾರ ಮಾಡಿದ್ದೀರಿ, ನಿಮ್ಮ ಫೋಟೋಗಳನ್ನು ನನಗೆ ಟ್ಯಾಗ್ ಮಾಡಿ ಎಂದು ಸಹ ಬರೆದುಕೊಂಡಿದ್ದಾರೆ.
ಶಾರದೆಯಾಗಿ ಶ್ವೇತಾರನ್ನು ಕಣ್ತುಂಬಿಕೊಂಡ ಫ್ಯಾನ್ಸ್, ಮಾಹಾಲಕ್ಷ್ಮೀ ನಮ್ಮ ಶ್ವೇತಾ ಮಿಸ್ಸು ಎಂದರೆ, ಮತ್ತೊಬ್ಬರು ಎಂಥ ಅಂದ, ಎಂಥ ಚೆಂದ ಶಾರದಮ್ಮ, ನಿನ್ನ ನೋಡಲೆರಡು ಕಣ್ಣು ಎನಗೆ ಸಾಲದಮ್ಮ ಎಂದು ಹಾಡೇ ಹಾಡಿದ್ದಾರೆ. ಇನ್ನು ಕೆಲವರು ಸಾಕ್ಷಾತ್ ದೇವಿಯಂತೆ ಕಾಣುತ್ತೀರಿ ಎಂದು ಆಶೀರ್ವಾದ ಮಾಡುವಂತೆ ಕೇಳಿದ್ದಾರೆ.
ಇನ್ನು ಕರಿಯರ್ ವಿಷ್ಯಕ್ಕೆ ಬರೋದಾದ್ರೆ ಶ್ವೇತಾ ಸದ್ಯ ಯಾವುದೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸುತ್ತಿಲ್ಲ, ಆದರೆ ಇವರ ಸಖತ್ ಪ್ರೊಡಕ್ಷನ್ ಹೌಸ್ ನಿಂದ ಮರ್ಯಾದೆ ಪ್ರಶ್ನೆ (Maryade Prashne) ಎನ್ನುವ ಹೆಸರಿನಿಂದಲೇ ಕುತೂಹಲ ಹುಟ್ಟಿಸಿದ ಸಿನಿಮಾ ಬರುತ್ತಿದೆ. ಈ ಸಿನಿಮಾಕ್ಕೆ ಇವರ ಪತಿ ಆರ್ ಜೆ ಪ್ರದೀಪ ಕಥೆ ಬರೆದಿದ್ದಾರೆ.