- Home
- Entertainment
- TV Talk
- Amruthadhaare Serial: ಪಾತ್ರ ಮುಗಿಯುತ್ತಿದ್ದಂತೆ ಧಾರಾವಾಹಿಯಿಂದ ಹೊರಬಿದ್ದ ನಟಿ! ಯಾರದು?
Amruthadhaare Serial: ಪಾತ್ರ ಮುಗಿಯುತ್ತಿದ್ದಂತೆ ಧಾರಾವಾಹಿಯಿಂದ ಹೊರಬಿದ್ದ ನಟಿ! ಯಾರದು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಅಮೃತಧಾರೆʼ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವಿದೆ. ಈ ಸೀರಿಯಲ್‌ನಿಂದ ಓರ್ವ ನಟಿ ಹೊರಗಡೆ ಬಂದಿದ್ದಾರೆ. ಯಾರು?

'ಅಮೃತಧಾರೆ' ಧಾರಾವಾಹಿಯಲ್ಲಿ ಮಧುರಾ ಎನ್ನುವ ಹೊಸ ಪಾತ್ರದಲ್ಲಿ ನಟಿ ಶ್ವೇತಾ ಆರ್ ಪ್ರಸಾದ್ ಅವರು ಕಾಣಿಸಿಕೊಂಡಿದ್ದರು. ಈ ಹಿಂದೆ ಅವರು ʼರಾಧಾ ರಮಣʼ, ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿಸಿದ್ದರು.
ʼಅಮೃತಧಾರೆʼ ಧಾರಾವಾಹಿಯಲ್ಲಿ ಶ್ವೇತಾ ಆರ್ ಪ್ರಸಾದ್ ಅವರು ಮಧುರಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಅಂತ್ಯವಾಗಿದೆ.
ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾಗೆ ಮಕ್ಕಳಾಗಲ್ಲ ಅಂತ ಗೌತಮ್‌ಗೆ ಇನ್ನೊಂದು ಮದುವೆ ಮಾಡಬೇಕು ಅಂತ ಶಕುಂತಲಾ ಪ್ಲ್ಯಾನ್ ಮಾಡಿದ್ದಳು. ಹೀಗಾಗಿ ಅವಳು ಮಧುರಾಳನ್ನು ಭೇಟಿ ಮಾಡಿದ್ದಳು.
ಮಧುರಾ ಜೊತೆ ಮದುವೆ ಆಗೋಕೆ ಗೌತಮ್‌ಗೆ ಇಷ್ಟವೇ ಇರಲಿಲ್ಲ. ಶಕುಂತಲಾ ಹಾಗೂ ಭೂಮಿ ಒತ್ತಾಯಕ್ಕೆ ಅವನು ಮದುವೆಗೆ ಒಪ್ಪಿದ್ದನು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟನು.
ಮಧುರಾ ಹಾಗೂ ಗೌತಮ್ ಮಾತನಾಡಿಕೊಂಡರು. ಅದರಂತೆ ಇನ್ನೇನು ತಾಳಿ ಕಟ್ಟುವ ಸಮಯದಲ್ಲಿ ಗೌತಮ್, ಭೂಮಿಕಾಗೆ ಮತ್ತೆ ತಾಳಿ ಕಟ್ಟಿದ್ದನು. ನಾನು, ಮಧುರಾ ಮೊದಲೇ ಮಾತನಾಡಿಕೊಂಡು, ನಾಟಕ ಮಾಡಿದ್ದೆವು ಎಂದು ಗೌತಮ್ ಹೇಳಿದ್ದನು.
ʼಅಮೃತಧಾರೆʼ ಧಾರಾವಾಹಿಯಲ್ಲಿ ಮಧುರಾ ತುಂಬ ಒಳ್ಳೆಯ ಹುಡುಗಿ. ಮನಸ್ಸು ಮಾಡಿದ್ದರೆ ನಮ್ಮನ್ನು ಕೋರ್ಟ್‌ಗೆ ಎಳೆಯಬಹುದಿತ್ತು, ಆದರೆ ಅವಳು ಆ ರೀತಿ ಮಾಡಲಿಲ್ಲ ಎಂದು ಮಧುರಾ ಬಗ್ಗೆ ಗೌತಮ್ ಒಳ್ಳೆಯ ಮಾತನಾಡಿದ್ದನು.
ಗೌತಮ್ ಮಧುರಾಳನ್ನು ಹೊಗಳಿದ್ದು ಭೂಮಿಕಾಗೆ ಸಿಟ್ಟು ತರಿಸಿತ್ತು. ಈ ಪೊಸೆಸ್ಸಿವ್‌ನೆಸ್ ಮೊದಲೇ ಇರಬೇಕಿತ್ತು ಅಂತ ಪತ್ನಿಗೆ ಗೌತಮ್ ತಿಳಿ ಹೇಳಿದ್ದನು.
ಅಮೃತಧಾರೆ ಧಾರಾವಾಹಿ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಶ್ವೇತಾ ಆರ್ ಪ್ರಸಾದ್ ಅವರು, "ಛಾಯಾ ಸಿಂಗ್, ರಾಜೇಶ್ ನಟರಂಗ ಜೊತೆ ಕೆಲಸ ಮಾಡಿದ್ದು ಖುಷಿಯಾಯಿತು. ಇದು ಚಿಕ್ಕ ಪಾತ್ರವಾದರೂ ಕೂಡ ಖುಷಿ ಕೊಟ್ಟಿದೆ. ಆದಷ್ಟು ಬೇಗ ತೆರೆ ಮೇಲೆ ಬರುವೆ" ಎಂದು ಹೇಳಿದ್ದಾರೆ.