ಸಿಂಪಲ್ ಸೀರೆಯಲ್ಲೂ ಸಿಕ್ಕಾಪಟ್ಟೆ ಕ್ಯೂಟ್ ಸಾರಾ… ನಟಿಯ ಸೌಂದರ್ಯಕ್ಕೆ ಪಡ್ಡೆಗಳು ಫಿದಾ
ಅಮೃತಧಾರೆ ಸೀರಿಯಲ್ ನಿಂದ ಮಿಸ್ ಆಗಿರುವ ನಟಿ ಸಾರಾ ಅಣ್ಣಯ್ಯ ಹಲವು ದಿನಗಳ ಬಳಿಕ ಸೀರೆಯುಟ್ಟು ಸಖತ್ತಾಗಿ ಪೋಸ್ ಕೊಟ್ಟ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಾರಾ ಅಣ್ಣಯ್ಯ
ಕನ್ನಡ ಕಿರುತೆರೆಯ ಸಖತ್ ಬೋಲ್ಡ್ ಹಾಗೂ ಸ್ಟೈಲಿಶ್ ನಟಿ ಅಂದ್ರೆ ಅದು ಸಾರಾ ಅಣ್ಣಯ್ಯ (Sara Annaiah). ನಟಿಸಿದ್ದು, ಬೆರಳೆಣಿಕೆಯಷ್ಟು ಪಾತ್ರದಲ್ಲಾದರೂ ಮಾಡಿದ ಎಲ್ಲಾ ಸೀರಿಯಲ್ ಗಳಲ್ಲೂ ಬೋಲ್ಡ್ ಆಗಿರುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದರು ಸಾರಾ ಅಣ್ಣಯ್ಯ
ಕನ್ನಡತಿ ಧಾರಾವಾಹಿಯ ವರು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ (Kannadathi Serial) ಭುವಿ ಗೆಳತಿ ವರುಧಿನಿ, ವರು ಪಾತ್ರಕ್ಕೆ ಜೀವ ತುಂಬುವ ಮೂಲಕ ಕನ್ನಡದ ಮನೆಮನೆಗೂ ಹತ್ತಿರವಾದ ಪಾತ್ರ ಸಾರಾ ಅಣ್ಣಯ್ಯ ಅವರದು.
ನಮ್ಮ ಲಚ್ಚಿ ಸೀರಿಯಲ್ ನಲ್ಲಿ ನಟನೆ
ಕನ್ನಡತಿ ಮುಗಿಯುತ್ತಿದ್ದಂತೆ, ನಂತರ ಸಾರಾ ಬಣ್ಣ ಹಚ್ಚಿದ್ದು, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಸಂಗಮ್ ಹೆಂಡತಿ ಪಾತ್ರಕ್ಕೆ, ಆದರೆ ಆ ಸೀರಿಯಲ್ ನಿಂದ ಅಚಾನಕ್ ಆಗಿ ಹೊರಬಂದಿದ್ದರು ನಟಿ.
ಅಮೃತಧಾರೆಗೆ ಎಂಟ್ರಿ
ಬಳಿಕ ಸಾರಾ ನಟಿಸಿದ್ದು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ (Amruthadhare). ಈ ಸೀರಿಯಲ್ ನಲ್ಲಿ ಗೌತಮ್ ದಿವಾನ್ ಮುದ್ದಿನ ತಂಗಿಯಾಗಿ ನಟಿಸುತ್ತಿದ್ದಾರೆ ಸಾರಾ ಅಣ್ಣಯ್ಯ.
ಮಹಿಮಾ
ಅಮೃತಧಾರೆಯಲ್ಲೂ ಸಾರಾ ನಟಿಸಿದ್ದು ಬೋಲ್ಡ್ ಆಗಿರುವ ಪಾತ್ರದಲ್ಲೇ, ಈ ಸೀರಿಯಲ್ ನಲ್ಲಿ ಅವರು ಫ್ಯಾಷನ್ ಡಿಸೈನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿಕಾ ತಮ್ಮ ಜೀವನ್ ನನ್ನು ಇಷ್ಟಪಡುವ ಮಹಿಮಾ ಪಾತ್ರ ಇವರದ್ದು.
ನೆಗೆಟಿವ್ ಟು ಪಾಸಿಟಿವ್
ಅಮೃತಧಾರೆ ಧಾರಾವಾಹಿಯಲ್ಲಿ ಆರಂಭದಲ್ಲಿ ನೆಗೆಟಿವ್ ಪಾತ್ರ (negative role) ಮಾಡುತ್ತಿದ್ದ ಮಹಿಮಾ, ನಂತರ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡರು. ಇವರ ಬದಲಾದ ಪಾತ್ರವನ್ನ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಸೀರಿಯಲ್ ನಿಂದ ಮಿಸ್ಸಿಂಗ್
ಇದೀಗ ಸಾರಾ ಅಣ್ಣಯ್ಯ ಸುಮಾರು ದಿನದಿಂದ ಅಮೃತಧಾರೆ ಸೀರಿಯಲ್ ನಿಂದ ಮಿಸ್ ಆಗಿದ್ದಾರೆ. ಸೀರಿಯಲ್ ಬಿಟ್ಟು ಹೋಗಿದ್ದಾರೆಯೇ? ಅಥವಾ ಸೀರಿಯಲ್ ನಲ್ಲಿ ಸದ್ಯ ಅವರ ಪಾತ್ರದ ಅವಶ್ಯಕತೆ ಇಲ್ಲದ್ದಕ್ಕೆ ಬಿಟ್ಟಿ ಹೋಗಿದ್ದಾರೆಯೇ ಗೊತ್ತಿಲ್ಲ.
ಸಿಂಪಲ್ ಸೀರೆಯಲ್ಲೂ ಬೋಲ್ಡ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಾರಾ ಅಣ್ಣಯ್ಯ, ಇದೀಗ ಒಂದಷ್ಟು ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಸಿಂಪಲ್ ತಿಳಿ ಹಸಿರು ಬಣ್ಣದ ಕಾಟನ್ ಸೀರೆ ಜೊತೆ ಕಪ್ಪು ಬಣ್ಣದ ಡೀಪ್ ನೆಕ್ ಬ್ಲೌಸ್ ಧರಿಸಿದ್ದು, ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಹಾಟ್ ಬ್ಯೂಟಿ ಸಾರಾ
ಕುತ್ತಿಗೆಯಲ್ಲಿ ಹಾರವೂ ಇಲ್ಲ, ಕೈಯಲ್ಲಿ ಕೈ ಬಳೆ ಇಲ್ಲ, ಕಿವಿಯಲ್ಲಿ ಓಲೆಯೂ ಇಲ್ಲ, ಹಣೆ ಮೇಲೆ ಒಂದು ಪುಟ್ಟ ಬೊಟ್ಟು ಇಟ್ಟು, ಡೀಪ್ ನೆಕ್ ಬ್ಲೌಸಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸುತ್ತಿದ್ದಾರೆ ಸಾರಾ ಅಣ್ಣಯ್ಯ.