ಹಾವನ್ನ ಕೈಯಲ್ಲಿ ಹಿಡಿದು ಏನ್ ಗುರಾಯಿಸ್ತೀಯಾ ಅಂತ ಕೇಳ್ತಿದ್ದಾರೆ ಸಿಂಹಿಣಿ ಸಂಗೀತ ಶೃಂಗೇರಿ
ಬಿಗ್ ಬಾಸ್ ಸಿಂಹಿಣಿ ಸಂಗೀತ ಶೃಂಗೇರಿ ಹೆಬ್ಬಾವನ್ನ ಕೈಯಲ್ಲಿ ಹಿಡಿದು ಪೋಸ್ ನೀಡಿದ್ದು ಏನ್ ಗುರಾಯಿಸ್ತೀಯಾ ಅಂತ ಕೇಳಿದ್ದಾರೆ.
ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss Season 10) ತುಂಬಾನೆ ಸದ್ದು ಮಾಡಿದ ಸುಂದರಿ ಅಂದ್ರೆ ಅದು ನಟಿ ಸಂಗೀತ ಶೃಂಗೇರಿ. ಟಾಪ್ 3 ಕಂಟೆಸ್ಟಂಟ್ ಆಗಿದ್ದ ಸಂಗೀತಾ, ಸೀಸನ್ 10 ಕಳೆದು 11 ನಡೆಯುತ್ತಿದ್ದರೂ ಜನರ ಫೇವರಿಟ್ ಕಂಟೆಸ್ಟಂಟ್. ಇವತ್ತಿಗೂ ಕೂಡ ಜನ ಅದೆಷ್ಟು ಸೀಸನ್ ಗಳು, ಕಂಟೆಸ್ಟಂಟ್ ಗಳು ಬರಲಿ ಹೋಗಲಿ, ಆದರೆ ಸಂಗೀತ ನಂತಹ ಸ್ಪರ್ಧಿ ಬೇರೆ ಯಾರೂ ಇರಲಾರದು ಎಂದಿದ್ದಾರೆ.
ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಸಂಗೀತ ಸೋಶಿಯಲ್ ಮೀಡಿಯಾದಲ್ಲಿ (Social media) ಸದಾ ಆಕ್ಟೀವ್ ಆಗಿರುತ್ತಾರೆ. ತಮ್ಮ ಫೋಟೊಗಳನ್ನು ಶೇರ್ ಮಾಡುವ ಮೂಲಕ, ಫ್ಯಾನ್ಸ್ ಮೀಟ್ ಅಪ್ ಮಾಡುವ ಮೂಲಕ ಸದಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ ಸಂಗೀತಾ. ಅದರಲ್ಲೂ ನಟಿ ಇತ್ತೀಚೆಗೆ ಶೇರ್ ಮಾಡಿದಂತಹ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
ಅಂತದ್ದೇನಿದೆ ಆ ಫೋಟೊದಲ್ಲಿ ಅನ್ನೋದು ಗೊತ್ತಾಯ್ತು ಅಲ್ವಾ? ಸಂಗೀತ (Sangeetha Sringeri) ಬೇರೆ ಬೇರೆ ರೀತಿಯ ಹೆಬ್ಬಾವುಗಳನ್ನು ಅದರಲ್ಲೂ ದೊಡ್ಡ ಗಾತ್ರದ ಹೆಬ್ಬಾವುಗಳನ್ನು ಕೈಯಲ್ಲಿ ಹಿಡಿದು ಪೋಸ್ ನೀಡಿದ್ದಾರೆ. ಇದು ಮೈಸೂರಿನಲ್ಲಿ ತೆಗೆಸಿಕೊಂಡಿರುವಂತಹ ಫೋಟೊ ಆಗಿದೆ. ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಸಂಗೀತ ಶೃಂಗೇರಿ ಧೈರ್ಯವನ್ನು ಹಾಡಿ ಹೊಗಳಿದ್ದಾರೆ.
ಮೈಸೂರಿನ ಪ್ಲಾನೆಟ್ ಅರ್ಥ್ ಅಕ್ವೇರಿಯಂ ಆಂಡ್ ಪೆಟ್ ಪಾರ್ಕ್ ಗೆ ಭೇಟಿ ನೀಡಿರುವ ಸಂಗೀತ ಶೃಂಗೇರಿ ಅಲ್ಲಿ, ಪ್ರಾಣಿ ಪಕ್ಷಿಗಳ ಜೊತೆಗೆ ಒಂದಷ್ಟು ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲ ಅವುಗಳ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ ಕೂಡ. ಇದೀಗ ಹೆಬ್ಬಾವುಗಳನ್ನು ಹಿಡಿದು ಅದನ್ನೇ ನೋಡುತ್ತಾ ಪೋಸ್ ನೀಡಿದ ಸಂಗೀತಾ ಏನ್ ಗುರಾಯಿಸ್ತೀಯಾ ಅಂತ ಕ್ಯಾಪ್ಶನ್ ಬೇರೆ ಹಾಕಿದ್ದಾರೆ. ಜೊತೆಗೆ ನಿಮಗೆ ಯಾವ ಫೋಟೊ ಇಷ್ಟ ಆಯ್ತು ಅಂತಾನೂ ಕೇಳಿದ್ದಾರೆ.
ಫೋಟೊ ನೋಡಿ ಫ್ಯಾನ್ಸ್ ಸಿಂಹಿಣಿ ಅಂದ್ರೆ ಸುಮ್ನೇನಾ ಅಂತ ಕೇಳಿದ್ದಾರೆ ಅಷ್ಟೇ ಅಲ್ಲ, ನಿಮ್ಮ ಲುಕ್ ನೋಡಿದ್ರೆ ಹಾವಿಗೂ ಭಯ ಹುಟ್ಟಿರಬೇಕು ಅಂತಾನು ಹೇಳಿದ್ದಾರೆ. ಜೊತೆಗೆ ಸಿಂಹಿಣಿ ಅಂದ್ರೆ ಫಿಯರ್ ಎಂದು ಕಾಮೆಂಟ್ ಮಾಡಿದ್ದಾರೆ. ಸಿಂಹಿಣಿ ಗೆ ಇದೆಲ್ಲ ಯಾವ ಲೆಕ್ಕ, ಲೇಡಿ ಟೈಗರ್, ನಮ್ ಹುಡುಗಿ ರೌಡಿ ಬೇಬಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಈ ಫೋಟೊಗಳಿಗೆ ಈಗಾಗಲೇ 59 ಸಾವಿರ ಜನ ಲೈಕ್ ಮಾಡಿದ್ದು, ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.