- Home
- Entertainment
- TV Talk
- Rajini Wedding: ಏಳು ವರ್ಷಗಳ ಗೆಳೆಯ… ಮದುವೆಯ ಸ್ಪೆಷಲ್ ಫೋಟೊ ಹಂಚಿ ಗಂಡನ ತುಟಿಗೆ ಮುತ್ತಿಟ್ಟ ನಟಿ
Rajini Wedding: ಏಳು ವರ್ಷಗಳ ಗೆಳೆಯ… ಮದುವೆಯ ಸ್ಪೆಷಲ್ ಫೋಟೊ ಹಂಚಿ ಗಂಡನ ತುಟಿಗೆ ಮುತ್ತಿಟ್ಟ ನಟಿ
‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ವಿಶೇಷ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಜಿನಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ಅಮೃತವರ್ಷಿಣಿ' . ಈ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ರಜಿನಿ ಅವರೀಗ ಸದ್ದಿಲ್ಲದೆ ಮದುವೆಯಾಗಿ ಸುದ್ದಿ ಮಾಡಿದ್ದರು. ಇದೀಗ ಮತ್ತಷ್ಟು ವಿಶೇಷ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ನವಂಬರ್ 10ರಂದು ವಿವಾಹ
ರಜಿನಿ ಅವರು ತಮ್ಮ ಗೆಳೆಯ ಅರುಣ್ ಗೌಡ ಎನ್ನುವವರ ಜೊತೆ ನವೆಂಬರ್ 10 ರಂದು ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನಲ್ಲೇ ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನಡೆದಿದೆ.
ಸೋಶಿಯಲ್ ಮೀಡಿಯಾದ ಜೋಡಿ
ನಟಿ ರಜಿನಿ, ಹಾಗೂ ಜಿಮ್ ಟ್ರೈನರ್ ಅರುಣ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲ್ಕಾ ಜನಪ್ರಿಯತೆ ಪಡೆದಿದ್ದರು. ಇವರಿಬ್ಬರ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಪ್ರೀತಿಯ ವಿಷ್ಯ ಮುಚ್ಚಿಟ್ಟಿದ ನಟಿ
ಜೊತೆಯಾಗಿ ರೀಲ್ಸ್ ಮಾಡುವುದಲ್ಲದೇ, ಈ ಜೋಡಿ ಪ್ರವಾಸ ಇರಲೀ, ದೇವಸ್ಥಾನಕ್ಕೆ ಹೋಗಲಿ ರಜಿನಿ ಅವರ ಜೊತೆಗೆ ಅರುಣ್ ಗೌಡ ಜೊತೆಯಾಗಿತೇ ಕಾಣಿಸುತ್ತಿದ್ದರು. ಇವರಿಬ್ಬರ ನಡುವೆ ಪ್ರೀತಿ ಇರುವ ಕುರಿತು ಪ್ರಶ್ನಿಸಿದಾಗಲೂ ನಟಿ ಇಲ್ಲ ನಾವು ಬರೀ ಸ್ನೇಹಿತರು ಅಷ್ಟೇ ಎಂದಿದ್ದರು.
ಮದುವೆಯ ವದಂತಿ
ಈ ಹಿಂದೆಯೇ ಇವರಿಬ್ಬರು ಮದುವೆ ಆಗಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿದ್ದ ರಜಿನಿ “ನನಗೆ ನಿಜವಾಗಿಯೂ ಮದುವೆ ಆಗಿಲ್ಲ, ನಾನು ಮದುವೆ ಆದರೆ ಮಾತ್ರ ಎಲ್ಲರನ್ನು ಕರೆದು ಮದುವೆ ಆಗುವೆ ಎಂದಿದ್ದರು.
ಕೊನೆ ಗಳಿಯಲ್ಲೂ ಸ್ನೇಹಿತರು ಎಂದಿದ್ದ ರಜಿನಿ
ಇತ್ತೀಚಿನ ಸಂದರ್ಶನವೊಂದರಲ್ಲೂ ನಟಿಗೆ ಇಬ್ಬರು ಲವ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ಇಲ್ಲ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್, ಹಾಗಂತ ಮದುವೆಯಾಗುವ ಕುರಿತು ಯೋಚನೆ ಮಾಡಬಾರದು ಅಂತೇನಿಲ್ಲ. ಮುಂದಕ್ಕೆ ಆ ಬಗ್ಗೆ ಯೋಚನೆ ಮಾಡಿದರೂ ಮಾಡಬಹುದು, ಈಗ ಸ್ನೇಹಿತರಷ್ಟೇ ಎಂದಿದ್ದರು.
ಅಮೃತವರ್ಷಿಣಿ ಮೂಲಕ ಖ್ಯಾತಿ
ರಜಿನಿ ಅವರು ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಅಮೃತ ಆಗಿ ನಟಿಸಿದ್ದರು. ಆ ಮೂಲಕ ಖ್ಯಾತಿ ಕೂಡ ಗಳಿಸಿದ್ದರು. ನಂತರ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು ರಜಿನಿ.
ನೀ ಇರಲು ಜೊತೆಯಲಿ
ಜಿನಿ ಈಗ ಸ್ಟಾರ್ ಸುವರ್ಣ ವಾಹಿನಿಯ ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಇದರಲ್ಲಿ ಹೀರೋ ಅತ್ತಿಗೆ ವಿಲನ್ ಊರ್ಮಿಳಾ ದಿವಾನ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಹೊಸ ಫೋಟೊಸ್
ಇದೀಗ ರಜಿನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಒಂದಷ್ಟು ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಒಂದು ಫೋಟೊದಲ್ಲಿ ತಮ್ಮ ಮದುವೆಯ ಉಡುಗೆಯಲ್ಲೇ ಗೆಳೆಯ ಅರುಣ್ ಅವರ ತುಟಿಗೆ ಪ್ರೀತಿಯ ಮುದ್ರೆಯನ್ನು ಒತ್ತಿದ್ದಾರೆ.
ಏಳು ವರ್ಷದ ಗೆಳೆಯ
ತಮ್ಮ ಫೋಟೊಗಳ ಜೊತೆಗೆ ರಜಿನಿ ಏಳು ವರುಷದ ಗೆಳೆಯನ ಜೊತೆ ಏಳು ವರ್ಷ “ಸಪ್ತಪದಿ “ ತುಳಿದು ಈಗ ಒಂದಾದ ಕ್ಷಣ ಜೀವನದ ಅತ್ಯಮೂಲ್ಯದ ದಿನ ಈ ದಿನಕ್ಕೆ ತುಂಬಾ ಪ್ರೀತಿ ತೋರಿದ ಎಲ್ಲರಿಗು ಚಿರಋಣಿ ಎಂದು ಬರೆದುಕೊಂಡಿದ್ದಾರೆ.