ನಾಯಿ ಕಳ್ಳತನ: ದಯವಿಟ್ಟು ತಂದು ಕೊಡಿ ಎಂದು ಕಣ್ಣೀರಿಟ್ಟ ಕಿರುತೆರೆ ನಟಿ ನಿರೂಷಾ!
ಅಪರಿಚಿತರಿಂದ ಕಿರುತೆರೆ ನಟಿ ನಿರೂಷಾ ನಾಯಿ ಕಳ್ಳತನ. ಕಳ್ಳರ ವಿಡಿಯೋ ಹಂಚಿಕೊಂಡು ಉಡುಗೊರೆ ಕೊಡುವುದಾಗಿ ಹೇಳಿದ ನಟಿ....

ಬೆಂಗಳೂರಿನಲ್ಲಿ ಮಾಡೆಲ್ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರು ನೆಚ್ಚಿನ ನಾಯಿ ಕಳ್ಳುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟು ದುಖಃ ಹಂಚಿಕೊಂಡಿದ್ದಾರೆ.
ಸುಂಕದಕಟ್ಟೆತ ಟೆಲಿಕಾಂ ಲೇಔಟ್‌ನಲ್ಲಿ ವಾಸಿಸುತ್ತಿರುವ ನಿರೂಷಾ ತಮ್ಮ ನಾಯಿಯನ್ನು ವಾಕಿಂಗ್‌ಗೆಂದು ಹೊರ ಬಿಟ್ಟಿದ್ದಾರೆ. ಅಷ್ಟರಲ್ಲಿ ಟ್ವಿಂಕಲ್ ನಾಪತ್ತೆಯಾಗಿದ್ದಾಳೆ.
ಟ್ವಿಂಕಲ್ ವಾಕಿಂಗ್ ಮಾಡುವ ಸಮಯದಲ್ಲಿ ಅಪರಿಚಿತ ಯುವಕ ಮತ್ತು ಯುವತಿ ವಾಕಿಂಗ್ ಬಂದಿದ್ದಾರೆ. ಆಗ ನಾಯಿಯನ್ನು ನೋಡಿ ಕಳ್ಳತನ ಮಾಡಿದ್ದಾರೆ, ಈ ವಿಡಿಯೋವನ್ನು ನಿರೂಷಾ ಹಂಚಿಕೊಂಡಿದ್ದಾರೆ.
ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ನಮ್ಮ ರಸ್ತೆ ಬಿಟ್ಟು ಟ್ವಿಂಕಲ್ ಎಲ್ಲಿಯೂ ಹೋಗುವುದಿಲ್ಲ. ಮನೆ ಸುತ್ತ ಇರುವ ದೇಗುಲ, ಪಾರ್ಕ್ ಎಲ್ಲಾ ನೋಡಿದ್ದೀವಿ ಎಂದಿದ್ದಾರೆ ನಿರೂಷಾ.
ಟ್ವಿಂಕಲ್‌ಗೆ ಸ್ವಂತವಾಗಿ ತಿನ್ನಲು ಬರುವುದಿಲ್ಲ. ನಿರೂಷಾ ಅವರ ತಾಯಿನೇ ಪ್ರತಿನಿತ್ಯ ತಿನ್ನಿಸುತ್ತಿದ್ದ ಕಾರಣ ಆಕೆ ಏನೂ ತಿಂದಿರುವುದಿಲ್ಲ. ನೀವು ಅವಳನ್ನು ನೋಡಿದರೆ ಮೊದಲು ತಿನ್ನಲು ಕೊಡಿ ಎಂದು ಬರೆದುಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಲು ನಿರೂಷಾ ಹೋಗಿದ್ದರು ಆದರೆ ದೂರು ಸ್ವೀಕರಿಸದ ಕಾಮಾಕ್ಷಿಪಾಳ್ಯ ಪೊಲೀಸರು ಗಾಡಿ ನಂಬರ್ ಕೊಟ್ಟರೇ ಹುಡುಕಿಕೊಡುವುದಾಗಿ ಹೇಳಿ ಕಳುಹಿಸಿದ್ದಾರೆ.
'ನೀವು ಹಣಕ್ಕಾಗಿ ಈ ರಿತಿ ಮಾಡಿದ್ದರೆ ನಿಮಗೆ ನಾವು ದೊಡ್ಡ ಬಹುಮಾನ ಕೊಡುತ್ತೀವಿ ದಯವಿಟ್ಟು ನಮ್ಮ ನಾಯಿಯನ್ನು ನಮಗೆ ಕೊಟ್ಟು ಬಿಡಿ. ಆಕೆಗೆ ವಯಸ್ಸಾಗಿದೆ ಆಕೆಗೆ ತಿನ್ನಲು ಆಗುವುದಿಲ್ಲ' ಎಂದು ನಿರೂಷಾ ಬರೆದುಕೊಂಡಿದ್ದಾರೆ.
'ನನ್ನ ತಾಯಿ ತಿನ್ನಿಸಿದ್ದರೆ ಮಾತ್ರ ಟ್ವಿಂಕಲ್ ತಿನ್ನುತ್ತಿದ್ದಳು. ನೀವು ಎಲ್ಲಿಂದ ಆಕೆಯನ್ನು ತೆಗೆದುಕೊಂಡು ಹೋಗಿದ್ದೀರಾ ದಯವಿಟ್ಟು ಅಲ್ಲಿಗೆ ತಂದು ಬಿಡಿ. ವಯಸ್ಸಾಗಿರುವ ಕಾರಣ ಕಣ್ಣು ಕೂಡ ಸರಿಯಾಗಿ ಕಾಣಿಸುವುದಿಲ್ಲ' ಎಂದಿದ್ದಾರೆ ನಿರೂಷಾ.