ಮತ್ತೆ ಯೋಗ ಆರಂಭಿಸಿದ ನಾಲ್ಕು ತಿಂಗಳ ಗರ್ಭಿಣಿ ನೇಹಾ : ಬೇಬಿ ಬಂಪ್ ನೋಡಿ ಫ್ಯಾನ್ಸ್ ಹ್ಯಾಪಿ
ಲಕ್ಷ್ಮೀ ಬಾರಮ್ಮ ಗೊಂಬೆ ಖ್ಯಾತಿಯ ನೇಹಾ ಗೌಡ ತಾಯಿಯಾಗುವ ಸಂಭ್ರಮದಲ್ಲಿದ್ದು, ತಮ್ಮ ನಾಲ್ಕನೇ ತಿಂಗಳಲ್ಲಿ ಮತ್ತೆ ಯೋಗ ಆರಂಭಿಸಿರುವ ಇವರು ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಈ ಹಿಂದೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆಯಾಗಿ ರಾಜ್ಯದ ಮನೆಮನೆಯ ಜನರ ಮನಸ್ಸು ಗೆದ್ದಿದ್ದ ನಟಿ ನೇಹಾ ಗೌಡ, ಸಿರಿಯಲ್ ಮುಗಿದು ಹಲವು ವರ್ಷಗಳೇ ಕಳೆದರೂ ಇಂದಿಗೂ ನಟಿ ಗೊಂಬೆ ಅಂತಾನೇ ಫೇಮಸ್.
ತಮಿಳು, ತೆಲುಗು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದ ನಟಿ ನಂತರ ಸ್ಟಾರ್ ಸುವರ್ಣ ವಾಹಿನಿಯ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ನಟಿಸಿದ್ದರು. ಅದನ್ನು ಬಿಟ್ಟರೆ ಕನ್ನಡದ ರಿಯಾಲಿಟಿ ಶೋಗಳ ಮೂಲಕ ನಟಿ (Neha Gowda) ಸುದ್ದಿಯಲ್ಲಿದ್ದರು.
ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ನಟಿ, ಬೇಗನೆ ಹೊರಬಂದಿದ್ದರು. ಆದರೆ ಕಲರ್ಸ್ ಕನ್ನಡದ ರಾಜಾ ರಾಣಿ (Raja Rani reality show)ರಿಯಾಲಿಟಿ ಶೋ ಮೊದಲ ಸೀಸನ್ ನಲ್ಲಿ ಪತಿ ಚಂದನ್ ಗೌಡ ಜೊತೆ ಭಾಗವಹಿಸಿ ರಾಜಾ ರಾಣಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ನೇಹಾ -ಚಂದನ್ (Chandan Gowda) ಅವರದ್ದು ಬಾಲ್ಯದ ಲವ್. ಸುಮಾರು 25-27 ವರ್ಷದ ಲವ್ ಸ್ಟೋರಿ ಇವರದ್ದು. ರಾಜಾ ರಾಣಿ ಕಾರ್ಯಕ್ರಮದಲ್ಲಿ ನೇಹಾ ತಮಗೆ ಮಗು ಮಾಡಿಕೊಳ್ಳಲು ಇಷ್ಟವಿಲ್ಲ, ಆದರೆ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.
ಇಷ್ಟು ದಿನ ಅಭಿಮಾನಿಗಳು ನೇಹಾ ಗೌಡ ಯಾವುದೇ ಹೆಣ್ಣು ಮಗುವಿನ ಜೊತೆ ಫೋಟೋ ಹಾಕಿದ್ರೂ ಮೇಡಂ ಮಗು ದತ್ತು ತೆಗೊಂಡ್ರಾ? ಯಾವಾಗ ದತ್ತು ತೆಗೊಳ್ತೀರಾ ಅಂತಾನೆ ಪ್ರಶ್ನಿಸುತ್ತಿದ್ದರು. ಕೆಲ ದಿನಗಳ ಹಿಂದೆ ನಟಿ ತಾವು ತಾಯಿಯಾಗುತ್ತಿರುವ ಸಂಭ್ರಮದ ವಿಷ್ಯವನ್ನು ಹಂಚಿಕೊಂಡಿದ್ದರು.
ಗರ್ಭಿಣಿಯಾಗಿ ಮೂರು ತಿಂಗಳು ಕಳೆದ ಮೇಲಷ್ಟೇ ನಟಿ ತಮ್ಮ ಪ್ರೆಗ್ನೆನ್ಸಿ ಬಗ್ಗೆ ತಿಳಿಸಿದ್ದರು. ಇದೀಗ ನಾಲ್ಕನೇ ತಿಂಗಳು ನಡೆಯುತ್ತಿದ್ದು, ನೇಹಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ದಿನ ತಾವು ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡು, ಗರ್ಭಿಣಿಯಾಗಿದ್ರೂ ಆರೋಗ್ಯವಾಗಿದ್ದೀರಿ, ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡ್ತಿದ್ದೀನಿ ಅನ್ನೋದನ್ನು ತಿಳಿಸಿದ್ದರು. ನೇಹಾ ಬೇಬಿ ಬಂಪ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆರೋಗ್ಯವಾಗಿರುವಂತೆ ವಿಶ್ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನೇಹಾ ನಾನು ಯಾವಾಗ್ಲೂ ಯೋಗ ಮಾಡುತ್ತಿದ್ದೆ, ಆದ್ರೆ ಪ್ರೆಗ್ನೆಂಟ್ (pregnant) ಆದ ಕಾರಣ ಕಳೆದ 3 ತಿಂಗಳಿಂದ ಬ್ರೇಕ್ ತೆಗೆದುಕೊಂಡಿದ್ದೆ. ಈಗ ನಾಲ್ಕನೇ ತಿಂಗಳಲ್ಲಿ ಮತ್ತೆ ಯೋಗ ಆರಂಭಿಸಿದ್ದೇನೆ. ಯೋಗ ನಾನು ಫ್ಲೆಕ್ಸಿಬಲ್ ಆಗಿರಲು, ಒತ್ತಡ ನಿವಾರಿಸಲು, ಸಂಪೂರ್ಣ ಆರೋಗ್ಯಕ್ಕೆ ತುಂಬಾನೆ ಉತ್ತಮ. ನೀವು ಇವತ್ತಿಂದಲೇ ಯೋಗ ಆರಂಭಿಸಿ ಎಂದಿದ್ದಾರೆ.