'ನಾಗಿಣಿ' ಖ್ಯಾತಿಯ ದೀಪಿಕಾ ದಾಸ್ ಕರಿಮಣಿ ಮಾಲೀಕ ಯಾರು ಗೊತ್ತಾ?: ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ?
ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 7 ಹಾಗೂ 9ರ ಸ್ಪರ್ಧಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ದೀಪಿಕಾ ಸೀಕ್ರೆಟ್ ಆಗಿ ಮದುವೆಯಾಗಲು ಕಾರಣ ಏನು ಅನ್ನೋದನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ದೀಪಿಕಾ ದಾಸ್ ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡಿದ್ದಾರೆ. ದೀಪಿಕಾ ಮದುವೆಯಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ರು ಎನ್ನಲಾಗ್ತಿದೆ.
ದೀಪಿಕಾ ದಾಸ್ ಮಾ.01ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ವೀಟ್ ಶಾಕ್ ನೀಡಿದ್ರು. ಅಷ್ಟೇ ಅಲ್ಲದೇ ಕಮೆಂಟ್ ಬಾಕ್ಸ್ ಆಫ್ ಮಾಡಿ ಕುತೂಹಲ ಕೆರಳಿಸಿದರು.
ದೀಪಿಕಾ ದಾಸ್ ಮಾರ್ಚ್ 01ರಂದು ದೀಪಕ್ ಅವರ ಬಾಳ ಸಂಗಾತಿಯಾಗಿ ಹೊಸ ಜೀವನ ಶುರು ಮಾಡಿದ್ದಾರೆ. ಮನಗೆದ್ದವನ ಜೊತೆ ದೀಪಿಕಾ ದಾಸ್ ಏಳು ಹೆಜ್ಜೆ ಇಟ್ಟಿದ್ದಾರೆ. ಇದೀಗ ಮದುವೆ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಸಂಪ್ರದಾಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ನನ್ನ ಕನಸಾಗಿತ್ತು. ಅದು ಈಡೇರಿದೆ ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ. ದಿಢೀರ್ ಅಂತ ಮಾಡಿದ ಮದುವೆ ಅಲ್ಲ. ಹಲವು ದಿನಗಳಿಂದ ಪ್ಲಾನ್ ಮಾಡಿ, ನಮ್ಮ ಆಸೆ ಕನಸಿನಂತೆ ನಡೆದ ಮದುವೆ ಇದು ಎಂದು ದೀಪಿಕಾ ಹೇಳಿದ್ದಾರೆ.
ಸರ್ಪ್ರೈಸ್ ಕೂಡ ಸಿಹಿಯಾಗಿರುತ್ತದೆ ಎಂದ ದೀಪಿಕಾ, ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ ಎಂದು ಬರೆದಿದ್ದಾರೆ. ದಯವಿಟ್ಟು ಎಲ್ಲರೂ ನಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಕೇಳಿಕೊಳ್ಳುವುದಾಗಿ ನಟಿ ಬರೆದುಕೊಂಡಿದ್ದಾರೆ.
ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ದೀಪಕ್ ಎಂಬುವವರನ್ನು ದೀಪಿಕಾ ದಾಸ್ ಮದುವೆ ಆಗಿದ್ದಾರೆ. ದೀಪಿಕಾ ದಾಸ್ ಹೆಚ್ಚಾಗಿ ದುಬೈಗೆ ಹೋಗ್ತಿದ್ರು. ಆಗಾಗ ಇನ್ಸ್ಟಾದಲ್ಲೂ ಫೋಟೋಗಳನ್ನು ಹಂಚಿಕೊಂಡಿದ್ದರು.
ದೀಪಿಕಾ ದಾಸ್ ಮದುವೆ ಗೋವಾದಲ್ಲಿ ನಡೆದಿದೆ. ನಟಿಯ ಆಸೆಯಂತೆ ಮದುವೆ ನಡೆದಿದೆ. ಬೀಚ್ ಎದುರು ಮಂಟಪ ಹಾಕಿ ಮದುವೆ ನೆರವೇರಿಸಲಾಗಿದೆ. ಫೋಟೋಗಳನ್ನು ನೋಡಿದ ಫ್ಯಾನ್ಸ್ ದೀಪಿಕಾ ದಾಸ್ ಹಾಗೂ ದೀಪಕ್ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.