ನಟ ಅನಿರುದ್ದ್ ಅಭಿಮಾನಿಗಳಿಂದ ಜೀ ಕನ್ನಡ ವಾಹಿನಿ ಮುಂದೆ ಪ್ರತಿಭಟನೆ!
ನಟ ಅನಿರುದ್ಧ್ ಕಿರುತೆರೆಯಿಂದ ಕಿಕ್ ಔಟ್ ಆಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರಗಿಡಲಾಗಿದೆ. ಧಾರಾವಾಹಿಯ ನಿರ್ದೇಶಕ ಅರೂರು ಜಗದೀಶ್ ಜೊತೆ ಕಿರಿಕ್ ಮಾಡಿಕೊಂಡಿರುವುದರಿಂದ ಈ ರೀತಿ ಆಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ಕೂಡ ನಿರ್ಧಾರ ಮಾಡಿದೆ. ಈ ವಿಚಾರದಿಂದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಜೀ ಕನ್ನಡ ವಾಹಿನಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ ಇರುವುದಿಲ್ಲ ಎನ್ನುವ ವಿಚಾರ ಕೇಳಿ ಅಭಿಮಾನಿಗಳ ಬೇಸರ.
ಜೀ ವಾಹಿನಿ ಮುಂದೆ ಪ್ರತಿಭಟನೆ ಮಾಡಿದ ಅಭಿಮಾನಿಗಳು. ಆರೂರು ಜಗದೀಶ್ ರಿಂದ ಅನಿರುದ್ದ್ ಅವ್ರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ.
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಒಕ್ಕೂಟದಿಂದ ಪ್ರತಿಭಟನೆ. ಮತ್ತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ದ್ ಅಭಿನಯ ಮಾಡಬೇಕು ಎಂದು ಒತ್ತಾಯ.
ನಟ ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ಮತ್ತು ಕಿರುತೆರೆಯಿಂದ ದೂರ ಇಟ್ಟ ನಿರ್ಮಾಪಕರ ಸಂಘದ ವಿರುದ್ಧ ಅಭಿಮಾನಿಗಳ ಕಿಡಿ.