ಭಾರತದಲ್ಲಿದೆ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್; ಇಲ್ಲಿ ರೋಬೋಟ್ ಗಳದ್ದೇ ಕೆಲಸ..!
ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿದೆ ಎಂಬುದು ನಿಮಗೆ ಗೊತ್ತೆ?. ಅಲ್ಲಿ ಒಂದು ಕೋಟಿಗೂ ಅಧಿಕ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದೆ. ಅವುಗಳು ವಿಮಾನದಲ್ಲಿ ಹೋಗುವಾಗ ಆಕಾಶದ ಎತ್ತರದಿಂದಲೂ ಸ್ಪಷ್ಟವಾಗಿ ಕಾಣುತ್ತದೆ.

ಚೀನಾ ದೇಶವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮುಂದೆ ಇತ್ತು. ಇದೀಗ ಭಾರತ ಚೀನಾವನ್ನು ಹಿಂದಿಕ್ಕಿದೆ. ವಿಶ್ವದ 10 ದೊಡ್ಡ ಸೋಲಾರ್ ಪಾರ್ಕ್‌ಗಲ್ಲಿ 5 ಭಾರತದಲ್ಲಿವೆ. ಅದರಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಕೂಡ ನಮ್ಮಲ್ಲಿಯೇ ಇದೆ. ಅದೇ ಭದ್ಲಾ ಸೋಲಾರ್ ಪಾರ್ಕ್.
ಭದ್ಲಾ ಸೋಲಾರ್ ಪಾರ್ಕ್ ರಾಜಸ್ಥಾನ ರಾಜ್ಯದ ಜೋಧ್ ಪುರ ಜಿಲ್ಲೆಯಲ್ಲಿ ಇದೆ. ಇದು 2,245 ಮೆಗಾವ್ಯಾಟ್ ಸ್ಥಾವರವಾಗಿದ್ದು, 14,000 ಎಕರೆ ಪ್ರದೇಶದಲ್ಲಿದೆ. ಈ ಯೋಜನೆಯನ್ನು 4 ವಿವಿಧ ಹಂತಗಳಲ್ಲಿ ನಿರ್ಮಿಸಲಾಗಿದೆ.
ಇಲ್ಲಿನ ಒಂದು ಕೋಟಿಗೂ ಅಧಿಕ ಸೌರ ಫಲಕಗಳನ್ನು ರೋಬೋಟ್‌ಗಳು ಸ್ವಚ್ಛಗೊಳಿಸುತ್ತವೆ ಮತ್ತು ಮನುಷ್ಯರು ಅದರ ಮೇಲ್ವಿಚಾರಣೆ ಮಾಡುತ್ತಾರೆ.
ಈ ಪ್ರದೇಶವು ಇಡೀ ವರ್ಷ ಉತ್ತಮ ಸೂರ್ಯನ ವಿಕಿರಣವನ್ನು ಪಡೆಯುತ್ತದೆ. 10 ಮಿಲಿಯನ್ ಸೌರ ಫಲಕಗಳು 2,245 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. ಇದರಿಂದ ರಾಜಸ್ಥಾನ ಹಾಗೂ ಉತ್ತರ ಪ್ರದೇಶಕ್ಕೂ ಕೂಡ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.
ದೇಶದಲ್ಲಿ 34ಕ್ಕೂ ಹೆಚ್ಚು ಬೃಹತ್ ಸೋಲಾರ್ ಯೋಜನೆಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. 21 ರಾಜ್ಯಗಳಲ್ಲಿ 20,000 ಮೆಗಾವ್ಯಾಟ್ ಸಾಮರ್ಥ್ಯವನ್ನು ಅನುಮೋದಿಸಲಾಗಿದೆ. 2032 ನವೀಕರಿಸಬಹುದಾದ ಸೋಲಾರ್ ಶಕ್ತಿಯು 40% ರಷ್ಟು ಪಾಲನ್ನು ಹೊಂದಿರುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.