2019ರಲ್ಲಿ ಭಾರತದ ಟಾಪ್ 10 ಟ್ರೆಂಡ್ಸ್; 10ನೇಯದ್ದು ತುಂಬಾ ಇಂಟ್ರೆಸ್ಟಿಂಗ್!

First Published 29, Dec 2019, 6:36 PM IST

ಇನ್ನೇನು 2019ನೇ ವರ್ಷ ಮುಗಿಯಿತು. 2020ನ್ನು ಸ್ವಾಗತಿಸಲು ಎಲ್ಲರೂ ರೆಡಿಯಾಗಿದ್ದಾರೆ. 2019ರಲ್ಲಿ ಏನೇನಾಯ್ತು ಎಂದು ನೋಡುವ ಕುತೂಹಲ ಎಲ್ಲರಿಗೂ ಇರುತ್ತೆ.  ಇವುಗಳ ಬಗ್ಗೆ ನಮಗಿಂತ ಹೆಚ್ಚು ಗೂಗಲ್‌ ಮಹಾಶಯನಿಗೆ ಗೊತ್ತು.  ಇಂಟರ್ನೆಟ್ ಲೋಕದಲ್ಲಿ ಯಾವ್ಯಾವ ವಿಷಯ ಹೆಚ್ಚು ಸದ್ದು ಮಾಡಿದೆ ನೋಡೋಣ.... 

1. ಕ್ರಿಕೆಟ್ ವರ್ಲ್ಡ್ ಕಪ್: ಇದರ ಬಗ್ಗೆ ಹೇಳೋದೆ ಬೇಡ. ಮೇಲಿನ ಫೋಟೋನೇ ಸಾಕು. ಕಳೆದ ಮೇ-ಜುಲೈನಲ್ಲಿ ನಡೆದ ಈ ಕ್ರಿಕೆಟ್ ಹಬ್ಬ ಟ್ರೆಂಡ್‌ಗಳ ಪೈಕಿ ಅಗ್ರಸ್ಥಾನದಲ್ಲಿದೆ.

2. ಲೋಕಸಭಾ ಚುನಾವಣೆ: ಈ ವಿಷಯದ ಬಗ್ಗೆಯೂ ವಿವರದ ಅಗತ್ಯವಿಲ್ಲ. ಮೇ ತಿಂಗಳಿನಲ್ಲಿ ನಡೆದ ಪ್ರಜಾತಂತ್ರದ ಹಬ್ಬ ಇದು. ಆದರೆ ಭಾರತದ ಇಂಟರ್ನೆಟ್ ಲೋಕದಲ್ಲಿ ಕ್ರಿಕೆಟ್‌ನ ಬಳಿಕವೇ ಇದಕ್ಕೆ ಸ್ಥಾನ ಎಂಬುವುದು ಸ್ಪಷ್ಟ.

3. ಚಂದ್ರಯಾನ 2: ಕ್ರೀಡೆ, ರಾಜಕೀಯ ಆಯ್ತು ಈಗ ವಿಜ್ಞಾನದ ಸರದಿ. ಇಂಟರ್ನೆಟ್ ಅಂಗಳದಲ್ಲಿ ನಿಂತು ಭಾರತೀಯರು ಅತೀ ಹೆಚ್ಚು ನೋಡಿದ್ದು ಬಾಹ್ಯಾಕಾಶವನ್ನು, ಸಂಭ್ರಮಿಸಿದ್ದು ವಿಜ್ಞಾನದ ಹಬ್ಬವನ್ನು,  ಕೊಂಡಾಡಿದ್ದು ನಮ್ಮ ವಿಜ್ಞಾನಿಗಳ ಸಾಧನೆಯನ್ನು.

4. ಕಬೀರ್ ಸಿಂಗ್: ಎಲ್ಲಾ ಓಕೆ, ಮನರಂಜನೆ ಇಲ್ಲದಿದ್ದರೆ ಹೇಗೆ? ಹೌದು, ನಾಲ್ಕನೆ ಸ್ಥಾನದಲ್ಲಿ ಶಾಹೀದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಹಿಂದಿ ಫಿಲ್ಮ್, ನೆಟಿಜನ್‌ಗಳ ಆಸಕ್ತಿಯನ್ನು ತೆರೆದಿಟ್ಟಿದೆ.

5. ಎವೆಂಜರ್ ಎಂಡ್‌ಗೇಮ್:  ಈ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಬಿಡುಗಡೆಯಾದ ಅಮೆರಿಕಾದ ಸೂಪರ್‌ಹೀರೋ ಫಿಲ್ಮ್ ಭಾರತದಲ್ಲೂ ಸಂಚಲನ ಮೂಡಿಸಿದೆ.

6. ಆರ್ಟಿಕಲ್ 370:  ಸಂವಿಧಾನದ 370ನೇ ವಿಧಿಯ ಮೂಲಕ  ಜಮ್ಮು & ಕಾಶ್ಮೀರಕ್ಕೆ ನೀಡಲಾಗಿದ್ದ  ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಹಿಂಪಡೆದಿತ್ತು.  ಇಂಟರ್ನೆಟ್‌ನ ಕಟ್ಟೆಗಳಲ್ಲೂ ಇದರ ಬಗ್ಗೆ ಬಹಳ ಚರ್ಚೆಯಾಗಿರುವುದಕ್ಕೆ  ಇದೇ ಸಾಕ್ಷಿ.

7. NEET ಫಲಿತಾಂಶಗಳು: ವಿದ್ಯಾರ್ಥಿಗಳ ಶಕ್ತಿ ದೇಶದ ಶಕ್ತಿ ಎಂಬುವುದು ಎಲ್ಲರಿಗೂ ಗೊತ್ತು. ಇಂಟರ್ನೆಟ್‌ಗೂ ಈ ಯುಕ್ತಿ ಅನ್ವಯವಾಗುತ್ತೆ.  ವೈದ್ಯಕೀಯ ಕೋರ್ಸ್‌ಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಫಲಿತಾಂಶಗಳು ಕಳೆದ ಜೂನ್‌ತಿಂಗಳಿನಲ್ಲಿ ಪ್ರಕಟವಾಗಿತ್ತು.

8. ಜೋಕರ್: ಭಾರತೀಯರಿಗೆ ಹಾಲಿವುಡ್‌ ಫಿಲ್ಮ್‌ ಕ್ರೇಜ್ ಎಷ್ಟಿದೆಯೆಂದು ಇದರಲ್ಲೇ ಗೊತ್ತಾಗುತ್ತದೆ.  ಕಳೆದ ಅಕ್ಟೋಬರ್‌ನಲ್ಲಿ ಈ ಜೋಕರ್ ತೆರೆಗಪ್ಪಳಿಸಿ, ಬಹಳ ಸದ್ದು ಮಾಡಿದ್ದ.

9. ಕ್ಯಾಪ್ಟನ್ ಮಾರ್ವೆಲ್:  ಅಮೆರಿಕಾದ ಮತ್ತೊಂದು ಸೂಪರ್‌ಹೀರೋ ಚಿತ್ರ ಇದು. ಕಳೆದ ಮಾರ್ಚ್‌ನಲ್ಲಿ ಈ ಚಿತ್ರ ತೆರೆಕಂಡಿತ್ತು.

10. ಪ್ರಧಾನಮಂತ್ರಿ ಕಿಸಾನ್ ಯೋಜನೆ: ನಂಬಿದ್ರೆ ನಂಬಿ. ಇಂಟರ್ನೆಟ್‌ನಲ್ಲಿ ಟ್ರೆಂಡ್ ಆದ ಟಾಪ್‌ 10 ವಿಷಯಗಳ ಪೈಕಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯೂ ಇದೆ. ಇಂಟರ್ನೆಟ್ ಲೋಕದಲ್ಲಿ ಗದ್ದೆಗಳೂ ಇವೆ, ರೈತರು ಇದ್ದಾರೆ. ಗೊತ್ತಾಯ್ತಾ?

loader