ಸುಡಾನ್ ನಲ್ಲಿ ಸಿಲುಕಿದ್ದ 362 ಕನ್ನಡಿಗರು ತವರಿಗೆ, ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಹೆಲ್ತ್ ಕಮಿಷನರ್
ಸುಡಾನ್ ನಲ್ಲಿ ಆಂತರಿಕ ಸೇನಾ ಸಂಘರ್ಷ ಹಿನ್ನೆಲೆ ಆಪರೇಷನ್ ಕಾವೇರಿ ಮೂಲಕ ಸುಡಾನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್ ಲಿಪ್ಟ್ ಮಾಡಲಾಗುತ್ತಿದೆ. ಸುಡಾನ್ ನಿಂದ ವಿಶೇಷ ಸೇನಾ ವಿಮಾನದಲ್ಲಿ ಏರ್ ಲಿಪ್ಟ್ ಮಾಡಲಾಗಿದ್ದು, ಕನ್ನಡಿಗರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮೊದಲ ವಿಮಾನದಲ್ಲಿ 362 ಜನ ಕನ್ನಡಿಗರು ಬಂದಿಳಿದಿದ್ದಾರೆ. 362 ಪೈಕಿ ತಮಿಳುನಾಡಿನವರು 56 ಮಂದಿ ಬಂದಿದ್ದಾರೆ.
ಸುಡಾನ್ ನಲ್ಲಿ ಆಂತರಿಕ ಸೇನಾ ಸಂಘರ್ಷ ಹಿನ್ನೆಲೆ ಆಪರೇಷನ್ ಕಾವೇರಿ ಮೂಲಕ ಸುಡಾನ್ ನಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆ. ತವರಿಗೆ ಬಂದ ಕನ್ನಡಿಗರು.
ಸುಡಾನ್ ನಿಂದ ವಿಶೇಷ ಸೇನಾ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕನ್ನಡಿಗರು.
ಮೊದಲ ತಂಡದಲ್ಲಿ 362 ಮಂದಿ ಕನ್ನಡಿಗರ ಏರ್ ಲಿಫ್ಟ್ ಮಾಡಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಹಕ್ಕಿ ಪಿಕ್ಕಿ ಜನಾಂಗದವರು ಇದ್ದಾರೆ.
ಏರ್ಪೋಟ್ ಗೆ ಆಗಮಿಸಿದ ಕನ್ನಡಿಗರಿಗೆ ಏರ್ಪೋಟ್ ನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಕೋವಿಡ್ ಟೆಸ್ಟ್ ಮಾಡಿ ವಿಳಾಸ ಬರೆದುಕೊಂಡು ಸಿಬ್ಬಂದಿ ಕಳುಹಿಸುತ್ತಿದ್ದಾರೆ.
ಸುಡಾನ್ ನಿಂದ ಭಾರತೀಯರ ಏರ್ ಲಿಪ್ಟ್ ಹಿನ್ನೆಲೆ. ಏರ್ ಲಿಪ್ಟ್ ಮೂಲಕ ಬಂದವರನ್ನ ಸ್ವತಃ ಹೆಲ್ತ್ ಕಮಿಷನರ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಬೆಂಗಳೂರು ಗ್ರಾಮಾಂತರ ಡಿಹೆಚ್ಒ ಜೊತೆ ಏರ್ಪೋಟ್ ಒಳ ಭಾಗಕ್ಕೆ ತೆರಳಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ಕನ್ನಡಿಗರನ್ನು ಸ್ವಾಗತಿಸಿದರು.
ಸುಡಾನ್‌ನಲ್ಲಿ ಅಧಿಕಾರಕ್ಕಾಗಿ ಅರೆಸೇನಾಪಡೆ ಹಾಗೂ ಸೂಡಾನ್ ಸಶಸ್ತ್ರಪಡೆಗಳ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಸೂಡಾನ್‌ನಲ್ಲಿ ನಾಗರೀಕರು ಅಪಾಯದಲ್ಲಿದ್ದಾರೆ.
ಈಗಾಗಲೇ ಸೂಡಾನ್ ಬಂದರು ತಲುಪಿರುವ ಭಾರತೀಯರನ್ನು ಹಡಗು ಹಾಗೂ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. 500 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ತಯಾರಿ ಮಾಡಲಾಗಿದೆ.
ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನದ ಮೊದಲ ಮತ್ತು ಏಕೈಕ ಮಹಿಳಾ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ.