ಕೊರೋನಾ ಕಾಟದ ಮಧ್ಯೆ SSLC ಪರೀಕ್ಷೆ ಆರಂಭ, ವೈರಸ್‌ ಭಯವಿಲ್ಲದೆ ಎಕ್ಸಾಮ್‌ಗೆ ಬಂದ ವಿದ್ಯಾರ್ಥಿಗಳು

First Published Jun 25, 2020, 11:47 AM IST

ಬೆಂಗಳೂರು(ಜೂ.25): ಮಹಾಮಾರಿ ಕೊರೋನಾ ಆತಂಕದ ಮದ್ಯೆ ಇಂದಿನಿಂದ(ಗುರುವಾರ) ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಕೊರೋನಾ ವೈರಸ್‌  ಹಾವಳಿಯಿಂದಾಗಿ ಪರೀಕ್ಷೆಯನ್ನ ಮುಂದೂಡುತ್ತಾ ಬರಲಾಗಿತ್ತು. ಆದರೆ ಇದೀಗ ಕೊರೋನಾ ಜೊತೆಗೆ ಬದುಕುವುದು ಅನಿವಾರ್ಯವಾಗಿದೆ. ಹೀಗಾಗಿ ಪರೀಕ್ಷೆಯನ್ನ ನಡೆಸಲು ಸರ್ಕಾರ ಮುಂದಾಗಿದೆ. ರಾಜ್ಯದ ಎಲ್ಲ ಕಡೆ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.