MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ರಿಕ್ಕಿ ರೈ ಕೇಸ್‌ ಟ್ವಿಸ್ಟ್, ಗನ್‌ ಮ್ಯಾನ್ ಮೇಲೆ ಅನುಮಾನ! ಅನುರಾಧಗೆ ರಿಲೀಫ್

ರಿಕ್ಕಿ ರೈ ಕೇಸ್‌ ಟ್ವಿಸ್ಟ್, ಗನ್‌ ಮ್ಯಾನ್ ಮೇಲೆ ಅನುಮಾನ! ಅನುರಾಧಗೆ ರಿಲೀಫ್

ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ ಅನುರಾಧ ಮುತ್ತಪ್ಪ ರೈಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಪೊಲೀಸರ ತನಿಖೆಯಲ್ಲಿ ಹೊಸ ತಿರುವುಗಳು ಕಂಡುಬಂದಿದ್ದು, ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಗನ್‌ಮ್ಯಾನ್ ವಿಠ್ಠಲ್ ಮೇಲೆ ಪೊಲೀಸರ ಅನುಮಾನ ಹೆಚ್ಚಾಗಿದೆ.

3 Min read
Author : Gowthami K
| Updated : Apr 22 2025, 01:48 PM IST
Share this Photo Gallery
  • FB
  • TW
  • Linkdin
  • Whatsapp
17

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅನುರಾಧ ಮುತ್ತಪ್ಪ ರೈಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಿಕ್ಕಿ ರೈ ಕೊಲೆ ಯತ್ನ ಪ್ರಕರಣದಲ್ಲಿ 2ನೇ ಆರೋಪಿ ಸ್ಥಾನದಲ್ಲಿರುವ ಅನುರಾಧ ವಿದೇಶದಲ್ಲಿದ್ದು, ಅಲ್ಲಿಂದಲೇ ತಮ್ಮ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಅನುರಾಧ ಮುತ್ತಪ್ಪ ರೈಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ. ಪ್ರಕರಣ ರದ್ದು ಕೋರಿ ಅನುರಾಧ ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅನುರಾಧ ಅಮೆರಿಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
 

27

 ತಾಳೆಯಾಗದ ಹೇಳಿಕೆಗಳು!
ಇನ್ನು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಬಿಗ್ ಟ್ಬಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ರಿಕ್ಕಿ ರೈ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಾಗುತ್ತಿದೆ. ಮನೆ ಕೆಲಸದವರು, ಗನ್ ಮ್ಯಾನ್ ಗಳು, ಸೆಕ್ಯುರಿಟಿ, ಮ್ಯಾನೇಜರ್ ರಿಂದ ವಿಭಿನ್ನ ಹೇಳಿಕೆ ಹಿನ್ನೆಲೆ ಈ ಅನುಮಾನ ಮೂಡಿದೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಕ್ಕೂ ವಿಚಾರಣಾಧೀನರ ಹೇಳಿಕೆಗೂ ತಾಳೆಯಾಗದ ಹಿನ್ನೆಲೆ ತಮ್ಮದೇ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

37

ಪ್ರೀ ಪ್ಲಾನ್‌ ಆಗಿ ಅಟ್ಯಾಕ್  ಮಾಡಿಸಿಕೊಂಡ್ರಾ ರಿಕ್ಕಿ ರೈ!
ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ಕುತ್ತು ತಂದುಕೊಂಡ್ರಾ ರಿಕ್ಕಿ ರೈ? ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ಮೇಲೆ ಪೊಲೀಸರಿಗೆ ದಟ್ಟ ಅನುಮಾನ? ಸೋಮವಾರ ಇಡೀ ದಿನ ಪೊಲೀಸರು ರಿಕ್ಕಿ ರೈ ಗನ್ ಮ್ಯಾನ್ ಗಳ ವಿಚಾರಣೆ ನಡೆಸಿದ್ದರು. ಡ್ರೈವರ್ ಗುರಿಯಾಗಿಸಿಕೊಂಡು ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ತಾವೇ ಸಂಕಷ್ಟಕ್ಕೆ ಸಿಲುಕಿದ್ರಾ ರಿಕ್ಕಿ ರೈ!? ಎಂಬ ಅನುಮಾನ ಮೂಡಿದೆ. ಪ್ರಕರಣ ಡೈವರ್ಟ್ ಮಾಡಲು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಅನುಮಾನ ದಟ್ಟವಾಗಿದೆ

47

ಶಸ್ತ್ರಾಸ್ತ್ರ ಪರಿಶೀಲನೆ ವೇಳೆ ಸಿಕ್ಕಿತು ಮಹತ್ವದ ಸುಳಿವು!
ಸಿಮ್ ಇಲ್ಲದ ಮೊಬೈಲ್ ಬಿಸಾಕಿ ಪ್ರಕರಣ ದಿಕ್ಕು ತಪ್ಪಿಸುವ ಯತ್ನ ಮಾಡಿದ್ರಾ? ಸೋಮವಾರ ಇಡೀ ದಿನ ರಿಕ್ಕಿ ರೈ ಮನೆ ಮೂರ್ತಿ ಹುಡುಕಾಟ ನಡೆಸಿರುವ ಪೊಲೀಸರು ಗನ್ ಗಳು ಹಾಗೂ ಬುಲೆಟ್ ಗಳ ಸಂಖ್ಯೆ ಪರಿಶೀಲಿಸಿದ್ದರು. ಭದ್ರತೆಗಾಗಿ ಬಳಸ್ತಿದ್ದ ಗನ್ ಗಳೆಷ್ಟು, ಎಷ್ಟು ಗನ್ ಗಳಿಗೆ ಲೈಸೆನ್ಸ್ ಇದೆ, ಎಷ್ಟು ಬುಲೆಟ್ಸ್ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವ ವೇಳೆ ಈ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ರಿಕ್ಕಿ ರೈ ಪ್ರಕರಣ: ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧಾ!

57

ಫೈರ್ ಆದ ಸ್ಥಳದಲ್ಲಿ ಸಿಕ್ಕ ಬುಲೆಟ್ ಹಾಗೂ ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ಬಳಸುತ್ತಿದ್ದ ಗನ್ ಗೂ ಸಾಮ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ಇದೊಂದು ಫೇಕ್ ಅಟ್ಯಾಕ್ ಎನ್ನುತ್ತಿವೆ ಪೊಲೀಸ್ ಮೂಲಗಳು. ಹೀಗಾಗಿಯೇ ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ್ರಾ ಎಂಬ ಅನುಮಾನ ಮೂಡಿದೆ. ಪ್ರಕರಣದ ಸತ್ಯಾನುಸತ್ಯತೆ ಶೀಘ್ರವೇ ಹೊರಬೀಳುವ ಸಾಧ್ಯತೆ ಇದೆ.

ವಿದೇಶದಲ್ಲಿದ್ದ ರಿಕ್ಕಿ ರೈ ಬೆಂಗಳೂರಿಗೆ ಬಂದಿರುವುದು ಹಂತಕರಿಗೆ ತಿಳಿದಿದ್ದೇಗೆ?

67

ಗನ್‌ ಮ್ಯಾನ್ ಮೇಲೆ ದಟ್ಟವಾಯ್ತು ಅನುಮಾನ!
ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಗನ್ ಮ್ಯಾನ್ ಆಗಿದ್ದ ವಿಠ್ಠಲ್ ಮೇಲೆ ಅನುಮಾನ ದಟ್ಟವಾಗಿದೆ. ಮುತ್ತಪ್ಪ ರೈ ನಿಧನದ ಬಳಿಕ ವಿಠ್ಠಲ್ ಕುಟುಂಬದವರ ಭದ್ರತೆ ನೋಡಿಕೊಳ್ಳುತ್ತಿದ್ದ. ರಿಕ್ಕಿ ರೈ ಫಾರ್ಮ್ ಹೌಸ್ ಮತ್ತು ಮನೆಯ ಭದ್ರತೆ ನೋಡಿಕೊಳ್ತಿದ್ದ. ಅಟ್ಯಾಕ್ ಆಗುವ ಮುನ್ನ ವಿಠ್ಠಲ್ ಜೊತೆ  ರಿಕ್ಕಿರೈ ಪ್ರತ್ಯೇಕ ಮಾತುಕತೆ ನಡೆಸಿದ್ದು, ಇದಾದ ಬಳಿಕ ಮನೆಯಿಂದ ವಿಠ್ಠಲ್ ಹೊರ ಹೋಗಿದ್ದ. ಘಟನೆ ನಡೆದು ರಿಕ್ಕಿ ರೈ ಆಸ್ಪತ್ರೆಗೆ ಸೇರಿದ ಬಳಿಕ ಮನೆಗೆ ವಾಪಸ್ಸ್ ಬಂದಿದ್ದು, ಈ ಎಲ್ಲಾ ದೃಶ್ಯಗಳು ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

77

ಈ ಹಿನ್ನೆಲೆ ವಿಠ್ಠಲ್ ನನ್ನು  ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಮಡಿಕೇರಿ ಮೂಲದ ವಿಠ್ಠಲ್, ಎರಡು ಶಾರ್ಟ್ ಗನ್ ಲೈಸೆನ್ಸ್ ಹೊಂದಿದ್ದಾನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಇನ್ನು ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ಹಾಜರಾಗಿದ್ದಾರೆ. ಪೊಲೀಸರ ನೋಟೀಸ್ ಹಿನ್ನೆಲೆ  ವಕೀಲರ ಜೊತೆ ವಿಚಾರಣೆಗೆ ಹಾಜರ್ ಆಗಿದ್ದು,   ಖುದ್ದು ಎಸ್ಪಿ ಶ್ರೀನಿವಾಸ್ ಗೌಡ   ರಾಕೇಶ್ ಮಲ್ಲಿ ವಿಚಾರಣೆ ಮಾಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ರಿಕ್ಕಿ ರೈ
ಕ್ರೈಮ್ ನ್ಯೂಸ್
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್: ಕೊನೆಗೂ ಕಂಡುಬಂತು 'ಕೊಡವ' ಸೊಗಡು!
Recommended image2
92 ಲಕ್ಷ ವೇತನ ಝೀರೋ ಭದ್ರತೆ, ಒಂದೇ ದಿನದಲ್ಲಿ ಶೇ.40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬೆಂಗಳೂರು ಐಟಿ ಕಂಪೆನಿ!
Recommended image3
​KERC new power rates: ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್: ಯಾರಿಗೆ ವರ, ಯಾರಿಗೆ ಹೊರೆ? ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved