ಝೂನಲ್ಲಿ ಇಲ್ಲ, ಕಾಡಿನಲ್ಲೂ ಕಾಣಸಿಗಲ್ಲ, ಅಪರೂಪದ ವನ್ಯಜೀವಿಗಳು ಬೆಂಗಳೂರಿನ ಫ್ಲಾಟ್‌ನಲ್ಲಿ ಪತ್ತೆ
ಮೃಗಾಲಯದಲ್ಲೂ ಅಪರೂಪ, ಕಾಡಿನಲ್ಲೂ ಕಾಣಸಿಗುವುದು ವಿರಳ. ಇಂತಹ ಅತ್ಯಂತ ಅಪರೂಪದ ಹಲವು ವನ್ಯಜೀವಿಗಳು,ಸಸ್ತನಿಗಳು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳ ದಾಳಿಯಲ್ಲಿ ಪತ್ತೆಯಾಗಿದೆ.

ವನ್ಯ ಜೀವಿಗಳು ಪತ್ತೆ
ವನ್ಯ ಪ್ರಾಣಿಗಗಳು, ಸಸ್ತನಿಗಳನ್ನು ನೋಡಲು ಹಲವರು ಮೃಗಾಲಯ, ನ್ಯಾಷನಲ್ ಪಾರ್ಕ್‌ನಲ್ಲಿ ಸಫಾರಿ ಮಾಡುತ್ತಾರೆ. ಆದರೂ ಕೆಲ ವಿಶೇಷ ತಳಿಗಳ ಪ್ರಾಣಿಗಳು, ಸಸ್ತನಿಗಳು ಕಾಣಸಿಗುವುದು ವಿರಳ. ಇಂತಹ ಅಪೂರದ ವನ್ಯ ಜೀವಿಗಳು, ಸಸ್ತನಿಗಳು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ.
ಹಲವು ವಿಶೇಷ ತಳಿಯ ವನ್ಯಜೀವಿಗಳು
ಡಾ.ರಾಜ್ ಕಮಲ್ ಅನ್ನೋ ವೈದ್ಯನ ಮನೆಯಲ್ಲಿ ಈ ವನ್ಯಜೀವಿಗಳು ಪತ್ತೆಯಾಗಿದೆ. ಊಸರವಳ್ಳಿ, 1 ನಕ್ಷತ್ರ ಆಮೆ, 14 ವಿವಿದ ಬಗೆಯ ಆಮೆ, 4 ವಿವಿದ ರೀತಿಯ ಹಾವು ಸೇರಿದಂತೆ ಹಲವು ವನ್ಯಜೀವಿಗಳು ಪತ್ತೆಯಾಗಿದೆ. ವಿಶೇಷ ಹಾಗೂ ಅಪರೂಪದ ಈ ವನ್ಯಜೀವಿಗಳ ಫೋಟೋಗಳು, ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ
ಸಿಐಡಿ ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ ವೇಳೆ ಈ ಅಪರೂಪದ ವನ್ಯಜೀವಿಗಳು ಪತ್ತೆಯಾಗಿದೆ. ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾಗಿರುವ ವೈದ್ಯ ರಾಜ್ ಕಮಲ್ ಅಪಾರ್ಟ್‌ಮೆಂಟ್‌ನಲ್ಲಿ ಈ ವಿಶೇಷ ಪ್ರಾಣಿಗಳು ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಡಾ.ರಾಜ್ ಕಮಲ್ ಮನೆ ಮೇಲೆ ದಾಳಿ ಮಾಡಿದಾಗ ಪತ್ತೆಯಾಗಿದೆ.
ಸಂಕಷ್ಟದಲ್ಲಿ ವೈದ್ಯ
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿರುವ ಡಾ.ರಾಜ್ ಕಮಲ್ ಹವ್ಯಾಸಕ್ಕಾಗಿ ವನ್ಯಜೀವಿಗಳನ್ನು ಸಾಕಿದ್ದರು. ಅಕ್ರಮವಾಗಿ ವನ್ಯಜೀವಿಗಳ ಸಾಕಾಣೆಯಿಂದ ಡಾ.ರಾಜ್ ಕಮಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಕಾನೂನು ಸಂಕಷ್ಟ ಎದುರಿಸಬೇಕಾಗಿದೆ.
ವನ್ಯಜೀವಿಗಳು ಅಧಿಕಾರಿಗಳ ವಶಕ್ಕೆ
ವನ್ಯಜೀವಿಗಳ ಅಕ್ರಮ ಸಾಕಾಣಿಕೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ, ಡಾ.ರಾಜ್ ಕಮಲ್ ಮನೆಗೆ ಮೇಲೆ ದಾಳಿ ಮಾಡಿತ್ತು. ಬಳಿಕ ಅಕ್ರಮವಾಗಿ ಸಾಕಿದ್ದ ಎಲ್ಲಾ ವನ್ಯಜೀವಿಗಳು, ಸಸ್ತನಿಗಳನ್ನು ಸಿಐಡಿ ತಂಡ ವಶಕ್ಕೆ ಪಡೆದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ವನ್ಯಜೀವಿ ಕಾಯ್ದೆ ಕುರಿತು ತಿಳಿದಿರಲಿ
ವನ್ಯಜೀವಿಗಳನ್ನು, ಸಸ್ತನಿಗಳನ್ನು ಯಾರು ಸಾಕುವಂತಿಲ್ಲ. ಇನ್ನು ಇವುಗಳ ಸಾಗಾಣೆ, ಸಾಕಾಣಿಗೆ ಕೂಡ ಅಪರಾಧವಾಗಿದೆ. ಆಮೆ, ಊಸರವಳ್ಳಿ, ಹಾವುಗಳನ್ನು ವಿದೇಶಗಳಿಂದ ಅಕ್ರಮವಾಗಿ ತರಿಸುವುದು, ವಿದೇಶಕ್ಕೆ ಅಕ್ರಮವಾಗಿ ಮಾರಾಟ ಮಾಡುವ ಹಲವು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

