ಲೋಕಸಭಾ ಚುನಾವಣೆ 2024: ಮತದಾರರನ್ನ ಸೆಳೆಯಲು ವಿವಿಧ ಥೀಮ್‌ಗಳ ಮತಗಟ್ಟೆ ನಿರ್ಮಾಣ
ಬೆಂಗಳೂರು(ಮೇ.07): ದೇಶಾದ್ಯಂತ 3ನೇ ಹಂತ ಹಾಗೂ ಕರ್ನಾಟಕದಲ್ಲಿ 2 ನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಇಂದು(ಮಂಗಳವಾರ) 14 ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರನ್ನ ಮತಗಟ್ಟೆಗಳತ್ತ ಸೆಳೆಯಲು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಗಳು ಪಿಂಕ್ ಬಣ್ಣದ ಸಖಿ ಮತಗಟ್ಟೆ, ಗ್ಲೋಬಲ್ ವಾರ್ಮಿಂಗ್ ವಿಚಾರವಾಗಿ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಮತಗಟ್ಟೆ, ಕಲಬುರಗಿಯ ತೊಗರಿ ಕಣಜದ ಕೃಷಿ ವಿವರಗಳಿರುವ ಮಾಹಿತಿಗಳಿರುವ ಮತಗಟ್ಟೆ ಸೇರಿದಂತೆ ಮತ್ತಿತರ ಮಾಹಿತಿಗಳಿರುವ ಮತಗಟ್ಟೆಗಳನ್ನ ನಿರ್ಮಾಣ ಮಾಡಲಾಗಿದೆ.
ಕಲಬುರಗಿ ಲೋಕಸಭೆ ಕ್ಷೇತ್ರದ ಅಫಜಲ್ಪುರ ತಾಲೂಕಿನ ಪಿಂಕ್ ಬಣ್ಣದಲ್ಲಿರುವ ಸಖಿ ಮತಗಟ್ಟೆಗೆ ಭೇಟಿ ನೀಡಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಗ್ಲೋಬಲ್ ವಾರ್ಮಿಂಗ್ ವಿಚಾರವಾಗಿ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕಲಬುರಗಿ ದಕ್ಷಿಣದ ಥೀಮ್ ಮತಗಟ್ಟೆಯ ನೋಟ ಕಣ್ಮನ ಸೆಳೆಯುತ್ತಿದೆ.
ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಳಂದದ ಮೋಘಾ ಕೆ ಶಾಲೆಯ 186 ನೇ ಮಾದರಿ ಮತಗಟ್ಟೆಯಲ್ಲಿ ಕಲಬುರಗಿಯ ತೊಗರಿ ಕಣಜದ ಕೃಷಿ ವಿವರಗಳಿರುವ ಮಾಹಿತಿ, ನೋಟಗಳಿಂದ ಅಂದಗೊಳಿಸಲಾಗಿಲಾಗಿದೆ.
ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿನ ಕಮಲಾಪುರ ಕೆಂಬಾಳೆ ಮಹತ್ವ ಸಾರುವ ಮಾದರಿ ಮತಗಟ್ಟೆಯನ್ನು ಬಾಳೆಗಿಡಗಳು, ಹಣ್ಣುಗಳಿಂದ ಅಲಂಕರಿಸಿರಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಖಿ ಅಥವಾ ಪಿಂಕ್ ಮತಗಟ್ಟೆಗಳನ್ನ ನಿರ್ಮಾಣ ಮಾಡಲಾಗಿದೆ. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಆಯ್ಕೆ ಮಾಡಿ ಪಿಂಕ್ ಮತಗಟ್ಟೆಯನ್ನಾಗಿ ಪರಿವರ್ತಿಸಲಾಗಿದೆ. ಮಹಿಳೆಯರಿಗೆ ಅನುಕೂಲವಾಗುವಂತೆ ಪ್ರತಿ ಮತಕ್ಷೇತ್ರ ವಾರು ಐದರಂತೆ ಜಿಲ್ಲೆಯಾದ್ಯಂತ ಒಟ್ಟು 90 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚೋರಡಿ ಗ್ರಾಮದ ಉರ್ದು ಶಾಲೆಯಲ್ಲಿ ಯುವಜನ ನಿರ್ವಹಣೆಯಿಂದ ವಿಶೇಷ ಮತಗಟ್ಟೆ ನಿರ್ಮಿಸಲಾಗಿದೆ.